ಭಾರತಕ್ಕೆ ಆಘಾತ ನೀಡುವೆವು: ಧನಂಜಯ ಡಿಸಿಲ್ವಾ ವಿಶ್ವಾಸ

ಬುಧವಾರ, ಜೂಲೈ 24, 2019
°C

ಭಾರತಕ್ಕೆ ಆಘಾತ ನೀಡುವೆವು: ಧನಂಜಯ ಡಿಸಿಲ್ವಾ ವಿಶ್ವಾಸ

Published:
Updated:
Prajavani

ಚೆಸ್ಟರ್‌ ಲೀ ಸ್ಟ್ರೀಟ್‌: ‘ಅಂತಿಮ ಲೀಗ್‌ ಪಂದ್ಯದಲ್ಲಿ ಭಾರತಕ್ಕೆ ಆಘಾತ ನೀಡಿ ಈ ಸಲದ ವಿಶ್ವಕಪ್‌ ಅಭಿಯಾನ ಮುಗಿಸುತ್ತೇವೆ’ ಎಂದು ಶ್ರೀಲಂಕಾ ತಂಡದ ಆಲ್‌ರೌಂಡರ್‌ ಧನಂಜಯ ಡಿಸಿಲ್ವಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಡೆದಿದ್ದ ಹಣಾಹಣಿಯಲ್ಲಿ ಲಂಕಾ 23 ರನ್‌ಗಳಿಂದ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿತ್ತು. ಈ ಮೂಲಕ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತ್ತು.

‘ವಿರಾಟ್‌ ಕೊಹ್ಲಿ ಬಳಗವು ಈ ಸಲ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ. ಐಸಿಸಿ ಟೂರ್ನಿಗಳಲ್ಲಿ ಭಾರತದ ವಿರುದ್ಧ ನಾವು ಉತ್ತಮ ಸಾಮರ್ಥ್ಯ ತೋರಿದ್ದೇವೆ. ವಿಂಡೀಸ್‌ ಎದುರಿನ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿದೆ. ಭಾರತದ ವಿರುದ್ಧವೂ ಗೆಲ್ಲುವುದು ನಮ್ಮ ಗುರಿ. ಇದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸುತ್ತೇವೆ’ ಎಂದಿದ್ದಾರೆ.

‘ವಿಂಡೀಸ್‌ ಎದುರಿನ ಪಂದ್ಯದಲ್ಲಿ 48ನೇ ಓವರ್‌ ಬೌಲ್‌ ಮಾಡಲು ಏಂಜೆಲೊ ಮ್ಯಾಥ್ಯೂಸ್‌ಗೆ ಚೆಂಡು ನೀಡಿದ್ದು ಅಚ್ಚರಿಯ ನಿರ್ಧಾರ. ಅವರು ಮೊದಲ ಎಸೆತದಲ್ಲೇ ನಿಕೋಲಸ್‌ ಪೂರನ್‌ ವಿಕೆಟ್‌ ಉರುಳಿಸಿ ಗೆಲುವು ನಮ್ಮ ಪರ ವಾಲುವಂತೆ ಮಾಡಿದರು’ ಎಂದರು. ಭಾರತ ಮತ್ತು ಲಂಕಾ ನಡುವಣ ಪಂದ್ಯವು ಇದೇ ಶನಿವಾರ ಲೀಡ್ಸ್‌ನಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !