ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನಕ್ಕೆ ಪದಾರ್ಪಣೆಯ ಹಬ್ಬ; ಮೊದಲ ಗೆಲುವಿನ ಸಂಭ್ರಮ

2015ರ ವಿಶ್ವಕಪ್
Last Updated 28 ಮೇ 2019, 2:58 IST
ಅಕ್ಷರ ಗಾತ್ರ

ಕ್ರಿಕೆಟ್ ಶಿಶುಗಳೆಂದೇ ಕರೆಯಲಾಗುತ್ತಿದ್ದ ಅಫ್ಗಾನಿಸ್ತಾನ ತಂಡಕ್ಕೆ ‘ಬಾಲ್ಯ’ದಿಂದ ಯೌವನಕ್ಕೆ ಬಡ್ತಿ ನೀಡಿದ ಟೂರ್ನಿಯಾಗಿತ್ತು 2015ರ ವಿಶ್ವಕಪ್. ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದ ತಂಡ ಹೀನಾಯ ಸೋಲುಗಳನ್ನು ಕಂಡರೂ ಏಕೈಕ ಜಯದ ಪುಳಕ ಅನುಭವಿಸುವುದಕ್ಕೂ ಟೂರ್ನಿ ಕಾರಣವಾಗಿತ್ತು.

* ಅಫ್ಗಾನಿಸ್ತಾನ ಮೊದಲ ಪಂದ್ಯ ಆಡಿದ್ದು ಫೆಬ್ರುವರಿ 18ರಂದು ಮನುಕ ಓವಲ್‌ನಲ್ಲಿ. ಎದುರಾಳಿ ಬಾಂಗ್ಲಾದೇಶ. ಪಂದ್ಯದಲ್ಲಿ ಅಫ್ಗಾನಿಸ್ತಾನಕ್ಕೆ 105 ರನ್‌ಗಳ ಸೋಲು (ಸ್ಕೋರು: ಬಾಂಗ್ಲಾ 267; ಅಫ್ಗಾನ್ 162). ಬಾಂಗ್ಲಾದ ಮುಷ್ಫಿಕುರ್ ರಹೀಂ (56 ಎಸೆತಗಳಲ್ಲಿ 71) ಮತ್ತು ಶಕೀಬ್ ಅಲ್ ಹಸನ್ (51 ಎಸೆತಗಳಲ್ಲಿ 63) ಎದುರಾಳಿಗಳ ಬೌಲಿಂಗ್ ದಾಳಿ ದೂಳೀಪಟ ಮಾಡಿದ್ದರು. ಶಮೀವುಲ್ಲಾ ಶೇನ್ವಾರಿ (42) ಮತ್ತು ಮೊಹಮ್ಮದ್ ನಬಿ (44) ಮಾತ್ರ ಅಫ್ಗಾನ್ ಪರ ಮಿಂಚಿದ್ದರು.

* ಎರಡನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಸೋತಿತ್ತು. (ಸ್ಕೋರು: ಅಫ್ಗಾನ್ 49.4 ಓವರ್‌ಗಳಲ್ಲಿ 232; ಶ್ರೀಲಂಕಾ 48.2 ಓವರ್‌ಗಳಲ್ಲಿ 6ಕ್ಕೆ 236). ಮಾಹೇಲ ಜಯವರ್ಧನೆ (100), ಏಂಜೆಲೊ ಮ್ಯಾಥ್ಯೂಸ್ (44) ಮತ್ತು ತಿಸಾರ ಪೆರೇರ (47) ಹೊರತುಪಡಿಸಿ ಇತರ ಎಲ್ಲರನ್ನು ಕಟ್ಟಿಹಾಕುವಲ್ಲಿ ಅಫ್ಗಾನ್ ಸಫಲವಾಗಿತ್ತು. ಅಸ್ಗರ್ ಅಫ್ಗಾನ್ (54) ಅರ್ಧಶತಕ ಗಳಿಸಿದರೂ ತಂಡ ಸೋತಿತು.

* ಸ್ಕಾಟ್ಲೆಂಡ್ ಎದುರಿನ ಮೂರನೇ ಪಂದ್ಯದಲ್ಲಿ ತಂಡ ರೋಚಕ ಒಂದು ವಿಕೆಟ್ ಜಯ ಗಳಿಸಿತು. (ಸ್ಕೋರು: ಸ್ಕಾಟ್ಲೆಂಡ್: 50 ಓವರ್‌ಗಳಲ್ಲಿ 210; ಅಫ್ಗಾನಿಸ್ತಾನ: 49.3 ಓವರ್‌ಗಳಲ್ಲಿ 9ಕ್ಕೆ 211). ಜಾವೇದ್ ಅಹಮ್ಮದ್ (51) ಮತ್ತು ಶಮೀವುಲ್ಲಾ ಶೇನ್ವಾರಿ (96) ಅವರ ಬ್ಯಾಟಿಂಗ್ ಪಂದ್ಯದ ಹೈಲೈಟ್.

* ಮೊದಲ ಗೆಲುವಿನ ಲಯ ಉಳಿಸಿಕೊಳ್ಳಲಾಗದ ತಂಡ ನಂತರ ಆಸ್ಟ್ರೇಲಿಯಾ ವಿರುದ್ಧ275 ರನ್‌ಗಳಿಂದ, ನ್ಯೂಜಿಲೆಂಡ್ ವಿರುದ್ಧ ಆರು ವಿಕೆಟ್‌ಗಳಿಂದ ಮತ್ತು ಇಂಗ್ಲೆಂಡ್ ತಂಡದ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಸೋತು ನಿರಾಸೆ ಅನುಭವಿಸಿತ್ತು.


* ಟೂರ್ನಿಯ ಅವಧಿ ಫೆಬ್ರುವರಿ 14ರಿಂದ ಮಾರ್ಚ್ 29

* ಆತಿಥ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್

* ಪಾಲ್ಗೊಂಡ ತಂಡಗಳು 14

* ಒಟ್ಟು ಪಂದ್ಯಗಳು 49

* ಮಾದರಿ: ಗುಂಪು ಹಂತ, ನಾಕೌಟ್

* ಫೈನಲ್ ನಡೆದ ಸ್ಥಳ: ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣ

* ಪ್ರಶಸ್ತಿ ಗೆದ್ದ ತಂಡ: ಆಸ್ಟ್ರೇಲಿಯಾ

* ರನ್ನರ್ ಅಪ್ : ನ್ಯೂಜಿಲೆಂಡ್

* ಸೆಮಿಯಲ್ಲಿ ಸೋತ ತಂಡಗಳು: ಭಾರತ, ದಕ್ಷಿಣ ಆಫ್ರಿಕಾ

* ಗರಿಷ್ಠ ರನ್ : ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) 547

* ಹೆಚ್ಚು ವಿಕೆಟ್ ಗಳಿಸಿದ ಬೌಲರ್ : ಮಿಷೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) ತಲಾ 22

* ಟೂರ್ನಿಯ ಶ್ರೇಷ್ಠ ಆಟಗಾರ: ಮಿಷೆಲ್ ಸ್ಟಾರ್ಕ್

* ಫೈನಲ್‌ನ ಪಂದ್ಯಶ್ರೇಷ್ಠ: ಜೇಮ್ಸ್ ಫಾಕ್ನರ್ (ಆಸ್ಟ್ರೇಲಿಯಾ)

* ಟೂರ್ನಿಯ ನಂತರ ನಿವೃತ್ತರಾದವರು

* ಮಿಷೆಲ್ ಕ್ಲಾರ್ಕ್ (ಆಸ್ಟ್ರೇಲಿಯಾ), ಮಹೇಲ ಜಯವರ್ಧನೆ (ಶ್ರೀಲಂಕಾ), ಡ್ಯಾನಿಯೆಲ್ ವೆಟೋರಿ (ನ್ಯೂಜಿಲೆಂಡ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT