ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಧಾರವಾಡ, ತುಮಕೂರು, ಮೈಸೂರು ವಲಯಕ್ಕೆ ಗೆಲುವು

Last Updated 9 ಜನವರಿ 2021, 18:33 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡ, ತುಮಕೂರು ಮತ್ತು ಮೈಸೂರು ವಲಯ ತಂಡಗಳು 23 ವರ್ಷದೊಳಗಿನವರ ಕೆಎಸ್‌ಸಿಎ ಅಂತರ ವಲಯ ಕ್ರಿಕೆಟ್ ಟೂರ್ನಿಯ ಶನಿವಾರದ ಪಂದ್ಯಗಳಲ್ಲಿ ಜಯ ಸಾಧಿಸಿದವು. ರಾಯಚೂರು ವಲಯವನ್ನು ಧಾರವಾಡ ವಲಯ 16 ರನ್‌ಗಳಿಂದ, ಶಿವಮೊಗ್ಗ ವಲಯವನ್ನು ತುಮಕೂರು ವಲಯ 33 ರನ್‌ಗಳಿಂದ ಮತ್ತು ಮಂಗಳೂರು ವಲಯವನ್ನು ಮೈಸೂರು ವಲಯ 30 ರನ್‌ಗಳಿಂದ ಮಣಿಸಿತು.

ಸಂಕ್ಷಿಪ್ತ ಸ್ಕೋರು: ಆದಿತ್ಯ ಗ್ಲೋಬಲ್ (1) ಅಂಗಣ: ಧಾರವಾಡ ವಲಯ: 50 ಓವರ್‌ಗಳಲ್ಲಿ 8ಕ್ಕೆ 201 (ಪರೀಕ್ಷಿತ್ ಒಕ್ಕುಂದ 65, ಅಂಗದರಾಜ್ ಹಿತ್ತಲಮನಿ 68; ಸುಜಿತ್ ಆರ್‌.ಪಿ 33ಕ್ಕೆ2, ಮಾಧವ ಬಜಾಬ್ 36ಕ್ಕೆ3); ರಾಯಚೂರು ವಲಯ: 41.1 ಓವರ್‌ಗಳಲ್ಲಿ 185 (ರಾಘವೇಂದ್ರ ಎನ್ 41, ಸೌರಭ್ ಮುತ್ತೂರು 33, ವಿದ್ಯಾಧರ ಪಾಟೀಲ್ 36, ನೀಲ್ ರತನ್ 22; ಇಂದ್ರಸೇನ ದಾನಿ 32ಕ್ಕೆ3, ರೋಹಿತ್ ಕುಮಾರ್ 31ಕ್ಕೆ3). ಫಲಿತಾಂಶ: ಧಾರವಾಡ ವಲಯಕ್ಕೆ 16 ರನ್‌ಗಳ ಗೆಲುವು.

ಐಎಎಫ್ ಕ್ರೀಡಾಂಗಣ: ತುಮಕೂರು ವಲಯ: 50 ಓವರ್‌ಗಳಲ್ಲಿ 4ಕ್ಕೆ 255 (ಶಿವ ನಾಯಕ 82, ಸಂಜಯ್ ವಿ.ಎನ್‌. 100, ಶ್ರೇಯಸ್ ಕೆ.ಬಿ ಔಟಾಗದೆ 42; ನಿತಿನ್ 43ಕ್ಕೆ2); ಶಿವಮೊಗ್ಗ ವಲಯ: 46.2 ಓವರ್‌ಗಳಲ್ಲಿ 222 (ಚಂದನ್ 53, ಯೂನುಸ್ ಬೇಗ್‌ 25, ಸೌರಭ್ 35, ಶಶಾಂಕ್ 43, ಋಷಿಕೇತ್‌ ಔಟಾಗದೆ 28; ಮಂಜುನಾಥ್ 43ಕ್ಕೆ3, ಪುನೀತ್ 33ಕ್ಕೆ3). ಫಲಿತಾಂಶ: ತುಮಕೂರು ವಲಯಕ್ಕೆ 33 ರನ್‌ಗಳ ಜಯ.

ಬಿಜಿಎಸ್‌ ಕ್ರೀಡಾಂಗಣ: ಮೈಸೂರು ವಲಯ: 48.2 ಓವರ್‌ಗಳಲ್ಲಿ 175 (ಧೀಮಂತ್‌ 21, ಹರ್ಷವರ್ಧನ 43, ಸಾಯ್‌ ಶಿವನಾರಾಯಣ 39; ನಿಶ್ಚಿತ್ ರಾವ್‌ 32ಕ್ಕೆ3, ಸ್ಪರ್ಶ್ ಹೆಗಡೆ 48ಕ್ಕೆ2); ಮಂಗಳೂರು ವಲಯ: 41.5 ಓವರ್‌ಗಳಲ್ಲಿ 145 (ಯಶ್ ಕಳಸಣ್ಣವರ 43, ನಿಶ್ಚಿತ್ ರಾವ್ ಔಟಾಗದೆ 31; ಕುಮಾರ್ ಎಲ್‌.ಆರ್‌ 35ಕ್ಕೆ4, ಶಿವನಾರಾಯಣ ಎಲ್‌ 43ಕ್ಕೆ3). ಫಲಿತಾಂಶ: ಮೈಸೂರು ವಲಯಕ್ಕೆ 30 ರನ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT