ನವಿ ಮುಂಬೈ: ಮ್ಯಾಚ್ ಫಿನಿಶರ್ ವಿಷಯಕ್ಕೆ ಬಂದಾಗ ದಿನೇಶ್ ಕಾರ್ತಿಕ್ ಅವರು ಮಹೇಂದ್ರ ಸಿಂಗ್ ಧೋನಿಯಷ್ಟೇ ಕೂಲ್ ಆಗಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್ ಡುಪ್ಲೆಸಿ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ನಲ್ಲಿ ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ:IPL 2022: ಹಸರಂಗ ವಿಶಿಷ್ಟ ಶೈಲಿಯ ಸಂಭ್ರಮದ ಹಿಂದಿನ ಗುಟ್ಟೇನು?

ಅಂತಿಮ ಹಂತದಲ್ಲಿ ಅತಿ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಿದ ವಿಕೆಟ್ ಕೀಪರ್ ಬ್ಯಾಟರ್ ಕಾರ್ತಿಕ್ ಕೇವಲ ಏಳು ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 14 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಕೊನೆಯ ಓವರ್ನಲ್ಲಿ ಆರ್ಸಿಬಿ ಗೆಲುವಿಗೆ ಏಳು ರನ್ ಬೇಕಾಗಿತ್ತು. ಆ್ಯಂಡ್ರೆ ರಸೆಲ್ಅವರ ಮೊದಲೆರಡು ಎಸೆತಗಳನ್ನು ಸಿಕ್ಸರ್ ಹಾಗೂ ಬೌಂಡರಿಗಟ್ಟಿದ ಕಾರ್ತಿಕ್ ತಂಡಕ್ಕೆ ರೋಚಕ ಗೆಲುವು ಒದಗಿಸಿಕೊಡಲು ನೆರವಾದರು.

ಪಂದ್ಯದ ಬಳಿಕ ಇದನ್ನೇ ಉಲ್ಲೇಖ ಮಾಡಿರುವ ಆರ್ಸಿಬಿ ನಾಯಕ ಫಫ್, ಕಾರ್ತಿಕ್ ಅವರನ್ನು ಮಾಜಿ ಸಹ ಆಟಗಾರ ಮಹೇಂದ್ರ ಸಿಂಗ್ ಧೋನಿ ಜೊತೆ ಹೋಲಿಕೆ ಮಾಡಿದ್ದಾರೆ.

ಪಂದ್ಯದ ಕೊನೆಯಲ್ಲಿ ಡಿಕೆಯ (ದಿನೇಶ್ ಕಾರ್ತಿಕ್) ಅನುಭವ ಸಂಪತ್ತು ಸಹಾಯ ಮಾಡಿತು. ಶಾಂತ, ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಕೊನೆಯ ಐದು ಓವರ್ಗಳಲ್ಲಿ ಬಹುಶಃ ಅವರು ಧೋನಿಯಷ್ಟೇ ಕೂಲ್ ಆಗಿರುತ್ತಾರೆ ಎಂದು ಹೇಳಿದರು.

ಇನ್ನೊಂದೆಡೆ ಕೆಕೆಆರ್ ಮಾಜಿ ನಾಯಕ ದಿನೇಶ್ ಕಾರ್ತಿಕ್ ತಮ್ಮ ಮಾಜಿ ಐಪಿಎಲ್ ತಂಡದ ವಿರುದ್ಧವೇ ಗೆಲುವಿನ ಇನ್ನಿಂಗ್ಸ್ ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.