ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್–ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ದಕ್ಷಿಣ ಆಫ್ರಿಕಾ20 (ಎಸ್‌ಎ20) ಲೀಗ್‌ನಲ್ಲಿ ಆಡಲಿರುವ ಭಾರತದ ಮೊದಲ ಆಟಗಾರ ಎನಿಸಿದ್ದಾರೆ. ಅವರು ಪಾರ್ಲ್ ರಾಯಲ್ಸ್ ಪರ ಆಡಲಿದ್ದಾರೆ.
ಈ ಲೀಗ್ ಜನವರಿ 9ರಂದು ಆರಂಭವಾಗಲಿದೆ. 39 ವರ್ಷ ವಯಸ್ಸಿನ ಕಾರ್ತಿಕ್ ಈ ವರ್ಷದ ಜೂನ್‌ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರನ್ನು ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆಂಟರ್ ಕಂ ಬ್ಯಾಟಿಂಗ್ ಕೋಚ್ ಆಗಿ ಸೆಳೆದುಕೊಂಡಿದೆ.
ಅವರು ಐಪಿಎಲ್‌ನಲ್ಲಿ ಕೊನೆಯ ಬಾರಿ ಆಡಿದ್ದರು. ಕಳೆದ ಸಾಲಿನಲ್ಲಿ ಅವರು ಆರ್‌ಸಿಬಿಗೆ 14 ಪೊಂದ್ಯಗಳಿಂದ 187.36 ಸ್ಟ್ರೈಕ್‌ರೇಟ್‌ನಲ್ಲಿ 326 ರನ್ ಪೇರಿಸಿದ್ದರು.
2022ರ ಟಿ20 ವಿಶ್ವಕಪ್‌ನಲ್ಲಿ ಅವರು ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿ ಅಂತರರಾಷ್ಟ್ರಿಐ ಪಂದ್ಯ ಆಡಿದ್ದರು.
ರಾಯಲ್ಸ್ ತಂಡದಲ್ಲಿ ಅವರೊಂದಿಗೆ ಇತರ ಅಂತರರಾಷ್ಟ್ರೀಯ ಆಟಗಾರರಾದ ಡೇವಿಡ್ ಮಿಲ್ಲರ್, ಜೋ ರೂಟ್, ಲುಂಗಿ ಗಿಡಿ, ಆ್ಯಂಡಿಲೆ ಪಿಶುವಾಯೊ ಮತ್ತು ಕ್ವೆನಾ ಎಂಫಾಕ ಆಡಲಿದ್ದಾರೆ.