ಮೆಲ್ಬರ್ನ : ನವೆಂಬರ್ನಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವುದು ಶೇ 90ರಷ್ಟು ಖಚಿತ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆವಿನ್ ರಾಬರ್ಟ್ಸ್ ಹೇಳಿದ್ದಾರೆ.

ಕೋವಿಡ್ –19 ಪಿಡುಗಿನಿಂದಾಗಿ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತವಾಗಿರುವುದರಿಂದ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯು ಅಪಾರ ಆರ್ಥಿಕ ನಷ್ಟ ಅನುಭವಿಸುವ ಆತಂಕದಲ್ಲಿದೆ. ಅದನ್ನು ಭರಿಸಿಕೊಳ್ಳಲು ಭಾರತದ ಎದುರಿನ ನಾಲ್ಕು ಟೆಸ್ಟ್ಗಳ ಸರಣಿಯು ಪ್ರಮುಖವಾಗಿದೆ ಎಂದು ಈಚೆಗೆ ಸಂಸ್ಥೆ ಹೇಳಿತ್ತು.

‘ಹತ್ತು ಅಂಕಗಳ ಮಾನದಂಡ ಇಟ್ಟುಕೊಂಡರೆ ಭಾರತದ ಪ್ರವಾಸಕ್ಕೆ 9ರಷ್ಟು ಸಾಧ್ಯತೆಗಳಿವೆ. ಇನ್ನು ಕೆಲವು ತಿಂಗಳುಗಳಲ್ಲಿ ಪರಿಸ್ಥಿತಿ ಹತೋಟಿಗೆ ಬರಬಹುದು. ಆದರೆ, ಪಂದ್ಯಗಳನ್ನು ವೀಕ್ಷಿಸಲು ಜನರು ಬರುತ್ತಾರೋ ಇಲ್ಲವೋ ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ನ್ಯೂಸ್ ಕಾಪ್ ವಾಹಿನಿಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.