ಬುಧವಾರ, ಮೇ 18, 2022
23 °C

ಜಾಫರ್ ಪ್ರಕರಣ ಗೊತ್ತಿಲ್ಲ: ರಹಾನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ : ಉತ್ತರಾಖಂಡ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ವಾಸೀಂ ಜಾಫರ್ ರಾಜೀನಾಮೆ ನೀಡಿದ ಮತ್ತು ಅವರ ಮೇಲೆ ಧರ್ಮ ಅಧಾರಿತ ಆಯ್ಕೆ ನಡೆಸಿದ ಆರೋಪದ ಕುರಿತು ತಮಗೆ ತಿಳಿದಿಲ್ಲ. ಈ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಹಾನೆ, ’ಈ ವಿಷಯದ ಕುರಿತು ನನಗೆ ಅರಿವಿಲ್ಲ. ಆದ್ದರಿಂದ ಪ್ರತಿಕ್ರಿಯಿಸುವುದಿಲ್ಲ‘ ಎಂದರು. 

ರಹಾನೆ ಮತ್ತು ವಾಸೀಂ ಜಾಫರ್ ಮುಂಬೈ ತಂಡದಲ್ಲಿ ಹಲವು ವರ್ಷಗಳ ಕಾಲ ಜೊತೆಯಾಗಿ ಆಡಿದ್ದರು.

ತಂಡದ ಆಯ್ಕೆಯಲ್ಲಿ ಉತ್ತರಾಖಂಡ ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳ ಹಸ್ತಕ್ಷೇಪ ಮತ್ತು ಪಕ್ಷಪಾತ ಧೋರಣೆಯಿಂದ ಬೇಸತ್ತು ಕೋಚ್ ಹುದ್ದೆಗೆ ರಾಜಿನಾಮೆ ನೀಡಿರುವುದಾಗಿ ಜಾಫರ್ ಹೇಳಿದ್ದರು.

ಆದರೆ,  ಉತ್ತರಾಖಂಡ ಸಂಸ್ಥೆಯ ಕಾರ್ಯದರ್ಶಿ ಮಹೀಮ್ ವರ್ಮಾ, ’ಜಾಫರ್‌ ತಮ್ಮ ಧರ್ಮದ ಆಟಗಾರರಿಗೆ ತಂಡದಲ್ಲಿ  ಆದ್ಯತೆ ಕೊಡುತ್ತಾರೆ. ಆಯ್ಕೆಯನ್ನೂ ಧರ್ಮದ ಆಧಾರದಲ್ಲಿ ಮಾಡಿದ್ದಾರೆ‘ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಜಾಫರ್ ಟ್ವೀಟ್ ಮಾಡಿದ್ದರು.

ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್ ಆಗಿರುವ ಜಾಫರ್‌ ಅವರಿಗೆ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ದೊಡ್ಡಗಣೇಶ್ ಬೆಂಬಲ ವ್ಯಕ್ತಪ ಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು