ಗುರುವಾರ , ಸೆಪ್ಟೆಂಬರ್ 23, 2021
27 °C
ಟಿ20 ಸರಣಿ

IND vs WI | ಜೋಕೆ! ಕೊಹ್ಲಿಯನ್ನು ಕೆಣಕದಿರಿ: ವಿಂಡೀಸ್ ಪಡೆಗೆ ಬಚ್ಚನ್ ಎಚ್ಚರಿಕೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ವಿರಾಟ್‌ ಕೊಹ್ಲಿ ಭಾರತಕ್ಕೆ ಗೆಲುವು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಅಂಗಳದಲ್ಲಿ ಕೊಹ್ಲಿ ಆರ್ಭಟ ಕಂಡು ಬೆರಗಾಗಿರುವ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌, ಕೊಹ್ಲಿಯೊಂದಿಗೆ ಅನುಚಿತವಾಗಿ ವರ್ತಿಸಬೇಡಿ ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬಚ್ಚನ್‌, ತಮ್ಮ ‘ಅಮರ್‌ ಅಕ್ಬರ್‌ ಅಂಥೋನಿ’ ಸಿನಿಮಾ ಸಾಲುಗಳನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದಾರೆ. ವಿರಾಟ್‌ ಕೊಹ್ಲಿಯನ್ನ ಕೆಣಕಬೇಡ ಅಂತ ಎಷ್ಟು ಬಾರಿ ಹೇಳಲಿ. ಆದ್ರೆ ನೀವು ಕೇಳಿಸಿಕೊಳ್ಳಲಿಲ್ಲ. ಈಗ ಆತನೇ (ಕೊಹ್ಲಿ) ತಕ್ಕ ಉತ್ತರ ನೀಡಿದ್ದಾನೆ. ವಿಂಡೀಸ್‌ ಆಟಗಾರರ ಮುಖ ನೋಡಿ, ಎಷ್ಟು ಬಾರಿಸಿದ್ದಾನೆ ಗೊತ್ತಾಗುತ್ತೆ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಪಂದ್ಯದಲ್ಲಿ ವೀರಾವೇಶದಿಂದ ಬ್ಯಾಟ್‌ ಬೀಸಿದ್ದ ವಿರಾಟ್‌, ವಿಂಡೀಸ್‌ ಬೌಲರ್‌ ಕೆಸ್ರಿಕ್ ವಿಲಿಯಮ್ಸ್‌ ಅವರನ್ನು ಅಣಕಿಸಿದ್ದರು. ಈ ಹಿಂದೆ ವಿಂಡೀಸ್‌ನಲ್ಲಿ ನಡೆದಿದ್ದ ಪಂದ್ಯದ ವೇಳೆ ವಿರಾಟ್‌ ವಿಕೆಟ್‌ ಪಡೆದಿದ್ದ ಕೆಸ್ರಿಕ್‌, ತಮ್ಮ ಅಂಗೈ ಮೇಲೆ ಟಿಕ್ ಮಾರ್ಕ್ ಮಾಡಿಕೊಂಡು ಕಿಚಾಯಿಸಿದ್ದರು. ಶುಕ್ರವಾರ ಪಂದ್ಯದಲ್ಲಿ ಕೆಸ್ರಿಕ್ ಎಸೆತಗಳನ್ನು ಲೀಲಾಜಾಲವಾಗಿ ಆಡಿದ ವಿರಾಟ್‌, ತಮ್ಮ ಬ್ಯಾಟ್‌ ಅನ್ನು ಪುಸ್ತಕದಂತೆ ಹಿಡಿದು ಬೆರಳಿನಿಂದ ಟಿಕ್ ಮಾರ್ಕ್ ಎಳೆದಂತೆ ಅಣಿಕಿಸಿದರು.

ಆ ಘಟನೆಯನ್ನು ಉಲ್ಲೇಖಿಸಿಯೇ ಅಮಿತಾಭ್‌ ಟ್ವೀಟ್‌ ಮಾಡಿದ್ದಾರೆ. ಈ ವಿಡಿಯೊ ಸಾಕಷ್ಟು ವೈರಲ್‌ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು