ರಾಂಚಿ:ಬಿಸಿಸಿಐ ವಾರ್ಷಿಕ ಒಪ್ಪಂದ ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಮಾಜಿ ನಾಯಕ ಎಂ.ಎಸ್.ಧೋನಿ ಕ್ರಿಕೆಟ್ ಜೀವನ ಇನ್ನೇನು ಮುಗಿದೇ ಬಿಟ್ಟಿತು ಎಂಬ ಚರ್ಚೆಕ್ರಿಕೆಟ್ ವಲಯದಲ್ಲಿ ಕಾವು ಪಡೆದುಕೊಂಡಿದೆ. ಆದರೆ, ಇದಾವುದಕ್ಕೂತಲೆ ಕೆಡಿಸಿಕೊಳ್ಳದ ಮಿ.ಕೂಲ್ ಜಾರ್ಖಂಡ್ ತಂಡದೊಂದಿಗೆ ಅಭ್ಯಾಸ ಆರಂಭಿಸಿ, ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.

ರಾಂಚಿಯಲ್ಲಿ ನೆಟ್ ಪ್ರಾಕ್ಟೀಸ್ ನಡೆಸುತ್ತಿರುವ 38 ವರ್ಷದ ಧೋನಿ, ಐಪಿಎಲ್ ಸೇರಿ ಮುಂದಿನ ಸರಣಿಗಳಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.ರಣಜಿ ಟೂರ್ನಿಯ ತನ್ನ ಮುಂದಿನ ಪಂದ್ಯದಲ್ಲಿಜಾರ್ಖಂಡ್ ತಂಡಉತ್ತರಖಂಡ ವಿರುದ್ಧ ಕಣಕ್ಕಿಳಿಯಲಿದೆ. ಪಂದ್ಯವು ಜನವರಿ 19ರ ರಾಂಚಿಯಲ್ಲಿ ಆರಂಭವಾಗಲಿದೆ.

ಇದನ್ನೂ ಓದಿ:ಬಿಸಿಸಿಐ ಒಪ್ಪಂದ ಪಟ್ಟಿಯಿಂದ ಧೋನಿ ಔಟ್: ಮುಗಿಯಿತೇ ಕ್ರಿಕೆಟ್ ಬದುಕು?

2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಕಳೆದ ಜುಲೈನಿಂದಭಾರತ ತಂಡಕ್ಕೆ ಅಲಭ್ಯರಾಗಿರುವುದರಿಂದ ಅವರನ್ನುಆಟಗಾರರ ವಾರ್ಷಿಕ ಒಪ್ಪಂದ ಪಟ್ಟಿಯಿಂದಲೂ ಬಿಸಿಸಿಐ ಕೈಬಿಟ್ಟಿದೆ.

ಟೀಂ ಇಂಡಿಯಾ ಮುಖ್ಯಕೋಚ್ ರವಿಶಾಸ್ತ್ರಿ ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರು ಧೋನಿ ನಿವೃತ್ತಿಯ ಬಗ್ಗೆ ಮಾತನಾಡಿದ್ದರು. ಹೀಗಾಗಿ ಧೋನಿ ನಿವೃತ್ತಿ ಕುರಿತು ಗೊಂದಲ ಮೂಡಿವೆ.

ಧೋನಿ ಅಭ್ಯಾಸಕ್ಕೆ ಆಗಮಿಸಿದ್ದರಿಂದ ಅಚ್ಚರಿಗೊಂಡಿರುವಜಾರ್ಖಂಡ್ ತಂಡದ ಸಂಯೋಜಕರು,‘ಧೋನಿ ನಮ್ಮ ತಂಡದೊಂದಿಗೆ ಅಭ್ಯಾಸ ನಡೆಸುತ್ತಾರೆ ಎಂಬುದು ನಮಗೂ ಗೊತ್ತಿರಲಿಲ್ಲ. ಇದು ಒಂದು ರೀತಿಯ ಅಚ್ಚರಿಗೆ ಕಾರಣವಾಗಿದೆ. ಅವರು ಕೆಲಕಾಲ ಬ್ಯಾಟಿಂಗ್ ಮಾಡಿದರು. ಎಂದಿನಂತೆ ಅಭ್ಯಾಸ ನಡೆಸಿದರು’ ಎಂದು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಧೋನಿಸಾಧನೆ

ಮಾದರಿ

ಪಂದ್ಯ

ಇನಿಂಗ್ಸ್

ರನ್

ಶತಕ

ಅರ್ಧಶತಕ

ಕ್ಯಾಚ್

ಸ್ಟಂಪಿಂಗ್ಸ್

ಟೆಸ್ಟ್

90

144

4876

6

33

256

38

ಏಕದಿನ

350

297

10773

10

73

321

123

ಟಿ20

98

85

1617

2

57

34

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.