ಬೆಂಗಳೂರು: ದ್ವಿಶತಕದತ್ತ ಹೊಸ್ತಿಲಲ್ಲಿರುವ ದಾನೀಶ್ ಮಾಳೆವರ್ ಮತ್ತು ಸೊಗಸಾದ ಶತಕ ಗಳಿಸಿದ ರಜತ್ ಪಾಟೀದಾರ್ ಅವರ ಜೊತೆಯಾಟದ ಬಲದಿಂದ ಕೇಂದ್ರ ವಲಯ ತಂಡವು ಗುರುವಾರ ಇಲ್ಲಿ ಆರಂಭವಾದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಈಶಾನ್ಯ ವಲಯದ ಎದುರು ಬೃಹತ್ ಮೊತ್ತ ಗಳಿಸಿತು.

ಈಶಾನ್ಯ ರಾಜ್ಯಗಳ ಆಟಗಾರರೇ ಹೆಚ್ಚಾಗಿರುವ ಜೊನಾಥನ್ ರಾಂಗ್ಸೆನ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೆಂಗಳೂರು ಹೊರವಲಯದ ಸಿಂಗಹಳ್ಳಿಯಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರ (ಸಿಒಇ) ದಲ್ಲಿ ಪಂದ್ಯಗಳು ನಡೆಯುತ್ತಿವೆ.

ಅನುಭವದ ಕೊರತೆ ಇರುವ ತಂಡದ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದ ದಾನೀಶ್ (ಅಜೇಯ 198; 219ಎ, 4X35, 6X1) ಮತ್ತು ರಜತ್ (125; 96ಎ, 4X21, 6X3) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 343 ರನ್ ಸೇರಿಸಿದರು. ಇದರಿಂದಾಗಿ ತಂಡವು ದಿನದಾಟದ ಮುಕ್ತಾಯಕ್ಕೆ 77 ಓವರ್ಗಳಲ್ಲಿ 2 ವಿಕೆಟ್ಗಳಿಗೆ 432 ರನ್ ಗಳಿಸಿದೆ. ದಾನೀಶ್ ಮತ್ತು ಯಶ್ ರಾಥೋಡ್ (ಬ್ಯಾಟಿಂಗ್ 32) ಕ್ರೀಸ್ನಲ್ಲಿದ್ದಾರೆ.

ಈಶಾನ್ಯ ತಂಡದ ಆಕಾಶ್ ಚೌಧರಿ (73ಕ್ಕೆ1) ಇನಿಂಗ್ಸ್ನ 3ನೇ ಓವರ್ನಲ್ಲಿ ಆಯುಷ್ ಪಾಂಡೆ ಅವರ ವಿಕೆಟ್ ಗಳಿಸಿದರು. ಆದರೆ ಇನ್ನೊಂದು ಬದಿಯಲ್ಲಿದ್ದ ಆರ್ಯನ್ ಜುಯಾಲ್ (60; 100ಎ, 4X8) ಅವರು ಅರ್ಧಶತಕ ಗಳಿಸಿದರು. ಆದರೆ ಗಾಯಗೊಂಡು ನಿವೃತ್ತರಾದರು.

ಈಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಜತ್ ಪಾಟೀದಾರ್ ನಾಯಕರಾಗಿದ್ದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕೇಂದ್ರ ವಲಯ: 77 ಓವರ್ಗಳಲ್ಲಿ 2 ವಿಕೆಟ್ಗಳಿಗೆ 432 (ಆರ್ಯನ್ ಜುಯಾಲ್ ಗಾಯಗೊಂಡು ನಿವೃತ್ತಿ 60, ದಾನೀಶ್ ಮಾಳೆವರ್ ಬ್ಯಾಟಿಂಗ್ 198, ರಜತ್ ಪಾಟೀದಾರ್ 125, ಯಶ್ ರಾಥೋಡ್ ಬ್ಯಾಟಿಂಗ್ 32, ಆಕಾಶ್ ಚೌಧರಿ 73ಕ್ಕೆ1, ಫಿರೋಯಿಜಾಮ್ ಜೊತಿನ್ 56ಕ್ಕೆ1 ) ವಿರುದ್ಧ ಈಶಾನ್ಯ ವಲಯ.

ಉತ್ತರ ವಲಯ: ಮೊದಲ ಇನಿಂಗ್ಸ್: 75.2 ಓವರ್ಗಳಲ್ಲಿ 6ಕ್ಕೆ308 (ಶುಭಂ ಖಜೂರಿಯಾ 26, ಅಂಕಿತ್ ಕುಮಾರ್ 30, ಯಶ್ ಧುಳ್ 39, ಆಯುಷ್ ಬಡೋನಿ 63, ನಿಶಾಂತ್ ಸಿಂಧು 47, ಕನ್ಹಯ್ಯಾ ವಾಧ್ವಾನ್ ಬ್ಯಾಟಿಂಗ್ 42, ಮಯಂಕ್ ದಾಗರ್ ಬ್ಯಾಟಿಂಗ್ 28, ಮನೀಷಿ 90ಕ್ಕೆ3) ವಿರುದ್ಧ ಪೂರ್ವ ವಲಯ.

ಬೆವರು ಬಸಿದ ಶಮಿ

ಭಾರತ ತಂಡಕ್ಕೆ ಮರಳುವ ಯತ್ನದಲ್ಲಿರುವ ಮೊಹಮ್ಮದ್ ಶಮಿ ಅವರು ದುಲೀಪ್ ಟ್ರೋಫಿ ಟೂರ್ನಿಯ ಇನ್ನೊಂದು ಕ್ವಾರ್ಟರ್ಫೈನಲ್ನಲ್ಲಿ ಪೂರ್ವ ವಲಯ ತಂಡದಲ್ಲಿ ಆಡುತ್ತಿದ್ದಾರೆ. ಉತ್ತರ ವಲಯದ ವಿರುದ್ಧ ತಮ್ಮ ಲಯ ಕಂಡುಕೊಳ್ಳಲು ಅವರು ಇಡೀ ದಿನ ಅಪಾರ ಶ್ರಮಪಟ್ಟರು. ಕೊನೆಗೂ ಒಂದು ವಿಕೆಟ್ ಗಳಿಸುವಲ್ಲಿ ಯಶಸ್ವಿಯದರು.

ಆದರೆ ತಂಡದ ಎಡಗೈ ಸ್ಪಿನ್ನರ್ ಮನೀಷಿ (90ಕ್ಕೆ3) ಅವರು ಉತ್ತಮ ಬೌಲಿಂಗ್ ಮಾಡಿದರು. ಆದರೂ ಉತ್ತರ ವಲಯವು ದಿನದಾಟದ ಮುಕ್ತಾಯಕ್ಕೆ 75.2 ಓವರ್ಗಳಲ್ಲಿ 6 ವಿಕೆಟ್ಗಳಿಗೆ 308 ರನ್ ಗಳಿಸಿತು. ಆಯುಷ್ ಬಡೋನಿ (63; 60ಎ 4X7) ಅವರ ಅಮೋಘ ಅರ್ಧಶತಕ ಗಮನ ಸೆಳೆಯಿತು. ನಿಶಾಂತ್ ಸಿಂಧು (47; 70ಎ) ಅವರು ಅಲ್ಪ ಅಂತರದಲ್ಲಿ ಅರ್ಧಶತಕ ತಪ್ಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.