ಸಿರಾಜ್ ಮತ್ತು ಉಮ್ರಾನ್ ಮಲಿಕ್ ಅವರು ಮೊದಲ ಸುತ್ತಿನಲ್ಲಿ ಆಡುತ್ತಿಲ್ಲ. ಅವರ ಬದಲು ನವದೀಪ್ ಸೈನಿ ಮತ್ತು ಗೌರವ್ ಯಾದವ್ ಅವಕಾಶ ಪಡೆದಿದ್ದಾರೆ. ಸೈನಿ ಭಾರತ ‘ಬಿ’ ತಂಡದಲ್ಲಿ ಮತ್ತು ಯಾದವ್, ಭಾರತ ‘ಸಿ’ ತಂಡದಲ್ಲಿ ಕ್ರಮವಾಗಿ ಸಿರಾಜ್ ಮತ್ತು ಉಮ್ರಾನ್ ಬದಲು ಆಡಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಮಧ್ಯಪ್ರದೇಶ ಮೂಲದ 32 ವರ್ಷ ವಯಸ್ಸಿನ ಯಾದವ್ ಪಾಂಡಿಚೇರಿ ಪರ ಆಡಿ ಕಳೆದ ರಣಜಿ ಋತುವಿನಲ್ಲಿ 7 ಪಂದ್ಯಗಳಿಂದ 41 ವಿಕೆಟ್ ಪಡೆದಿದ್ದರು. ಎರಡನೇ ಅತ್ಯಧಿಕ ವಿಕೆಟ್ ಗಳಿಕೆದಾರ ಎನಿಸಿದ್ದರು.