ಬೆಂಗಳೂರು: ತಮಿಳುನಾಡಿನ ಕೊಯಮತ್ತೂರಿನ ನಾರಾಯಣ ಜಗದೀಶನ್ ಗುರುವಾರ ತಮಗೆ ಲಭಿಸಿದ ಒಂದು ‘ಅವಕಾಶ’ವನ್ನು ಅಜೇಯ ಶತಕವನ್ನಾಗಿ ಪರಿವರ್ತಿಸಿದರು.

ಬೆಂಗಳೂರು ಹೊರವಲಯದ ಸಿಂಗಹಳ್ಳಿಯಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನ (ಎ)ದಲ್ಲಿ ಆರಂಭವಾದ ದುಲೀಪ್ ಟ್ರೋಫಿ ಸೆಮಿಫೈನಲ್ನಲ್ಲಿ ಜಗದೀಶನ್ ಅವರದ್ದೇ ಆಟ. ಆರಂಭದಲ್ಲಿ ತಾಳ್ಮೆ ನಂತರದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಬೌಲರ್ಗಳನ್ನು ಕಾಡಿದರು. ಅವರ ಚೆಂದದ ಬ್ಯಾಟಿಂಗ್ ಬಲದಿಂದ ದಕ್ಷಿಣ ವಲಯ ತಂಡವು ಉತ್ತರ ವಲಯದ ಎದುರು ಮೊದಲ ದಿನದಾಟದ ಅಂತ್ಯಕ್ಕೆ 81 ಓವರ್ಗಳಲ್ಲಿ 3 ವಿಕೆಟ್ಗಳಿಗೆ 297 ರನ್ ಗಳಿಸಿತು.

ಆರಂಭಿಕ ಬ್ಯಾಟರ್ ಜಗದೀಶನ್ ಅವರಿಗೆ ಅದೃಷ್ಟವೂ ಜೊತೆಗೂಡಿತು. ಭಾರತ ಟೆಸ್ಟ್ ತಂಡದಲ್ಲಿ ಈಚೆಗೆ ಪದಾರ್ಪಣೆ ಮಾಡಿದ್ದ ವೇಗಿ ಅನ್ಷುಲ್ ಕಾಂಬೋಜ್ ಹಾಕಿದ 11ನೇ ಓವರ್ನಲ್ಲಿ ಜಗದೀಶನ್ ಬ್ಯಾಟ್ ಸವರಿದ ಚೆಂಡು ವಿಕೆಟ್ಕೀಪರ್ ಕನ್ಹಯ್ಯಾ ವಾಧ್ವಾನ್ ಅವರ ಕೈಸೆರೆಯಾಗಿತ್ತು. ಆದರೆ ಅನ್ಷುಲ್, ನೋಬಾಲ್ ಹಾಕಿದ್ದು ವಿಡಿಯೊ ಪರಿಶೀಲನೆಯಲ್ಲಿ ಖಚಿತವಾಯಿತು. ಇದರ ನಂತರ ಜಗದೀಶನ್ ಇಡೀ ದಿನ ಬೌಲರ್ಗಳನ್ನು ಕಾಡಿದರು.

ವಿಕೆಟ್ಕೀಪರ್–ಬ್ಯಾಟರ್ ಜಗದೀಶನ್ ಅವರಿಗೆ ಎರಡು ತಿಂಗಳು ಹಿಂದಷ್ಟೇ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದ ಭಾರತ ತಂಡದಿಂದ ‘ಚೊಚ್ಚಲ ಕರೆ’ ಬಂದಿತ್ತು. ಆ ಸರಣಿಯ ನಾಲ್ಕನೇ ಟೆಸ್ಟ್ನಲ್ಲಿ ವಿಕೆಟ್ಕೀಪರ್ ರಿಷಭ್ ಪಂತ್ ಗಾಯಗೊಂಡಿದ್ದರಿಂದ 29 ವರ್ಷದ ಜಗದೀಶನ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಸರಣಿಯ ಕೊನೆ ಪಂದ್ಯದಲ್ಲಿ ಅವರಿಗೆ ಕಣಕ್ಕಿಳಿಯುವ ಅವಕಾಶವೇನೂ ಸಿಗಲಿಲ್ಲ. ಆದರೆ ಭಾರತ ತಂಡದೊಂದಿಗೆ ಕಳೆದ ಆ ದಿನಗಳು ಜಗದೀಶನ್ ಅವರಲ್ಲಿ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ.

ಬುಧವಾರ ರಾತ್ರಿ ಮಳೆಯಾಗಿದ್ದರಿಂದ ಮೈದಾನದ ಹೊರಾಂಗಣವು ತೇವವಾಗಿತ್ತು. ಅದರಿಂದಾಗಿ ಗುರುವಾರ ದಿನದಾಟವು ಅರ್ಧಗಂಟೆ ತಡವಾಗಿ ಆರಂಭವಾಯಿತು. ಟಾಸ್ ಗೆದ್ದ ಉತ್ತರ ವಲಯದ ನಾಯಕ ಅಂಕಿತ್ ಕುಮಾರ್ ಬೌಲಿಂಗ್ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದರು. ಬ್ಯಾಟರ್ಗಳಿಗೆ ನೆರವಾಗುವಂತಿದ್ದ ಪಿಚ್ನಲ್ಲಿ ದಕ್ಷಿಣ ವಲಯದ ಆಟಗಾರರು ಲಾಭ ಪಡೆದರು.

ಅವರು ತನ್ಮಯ್ ಅಗರವಾಲ್ (43; 101ಎ) ಅವರೊಂದಿಗೆ ಊಟದ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 79 ರನ್ ಸೇರಿಸಿದರು. ವಿರಾಮದ ನಂತರದ ಅವಧಿಯಲ್ಲಿ ಸ್ಪಿನ್ನರ್ ನಿಶಾಂತ್ ಸಿಂಧು ಎಸೆತದಲ್ಲಿ ತನ್ಮಯ್ ಕ್ಲೀನ್ ಬೌಲ್ಡ್ ಆದರು. ಜೊತೆಯಾಟ (103 ರನ್ ) ಮುರಿಯಿತು.

ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರು ಜಗದೀಶನ್ ಜೊತೆಗೂಡಿ ರನ್ಗಳನ್ನು ಕಲೆಹಾಕಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 128 ರನ್ (169ಎಸೆತ) ಗಳಿಸಿದರು. ಚಹಾ ವಿರಾಮಕ್ಕೂ ಸ್ವಲ್ಪ ಮುನ್ನ ಅನ್ಷುಲ್ ಎಸೆತವನ್ನು ಆಡುವ ಭರದಲ್ಲಿ ದೇವದತ್ತ, ವಿಕೆಟ್ಕೀಪರ್ಗೆ ಕ್ಯಾಚ್ ಆದರು. ಮೋಹಿತ್ ಕಾಳೆ 15 ರನ್ ಗಳಿಸಿ ನಿರ್ಗಮಿಸಿದರು. ಆದರೆ ಜಗದೀಶನ್ ಬೌಲರ್ಗಳಿಗೆ ಸಿಂಹಸ್ವಪ್ನವಾದರು.

ಸಂಕ್ಷಿಪ್ತ ಸ್ಕೋರು ಸೆಮಿಫೈನಲ್ 1– ಮೊದಲ ಇನಿಂಗ್ಸ್: ದಕ್ಷಿಣ ವಲಯ: 81 ಓವರ್ಗಳಲ್ಲಿ 3ಕ್ಕೆ297 (ತನ್ಮಯ್ ಅಗರವಾಲ್ 43 ಎನ್. ಜಗದೀಶನ್ ಬ್ಯಾಟಿಂಗ್ 148 ದೇವದತ್ತ ಪಡಿಕ್ಕಲ್ 57 ಮೊಹಮ್ಮದ್ ಅಜರುದ್ದೀನ್ ಬ್ಯಾಟಿಂಗ್ 11 ನಿಶಾಂತ್ ಸಿಂಧು 59ಕ್ಕೆ2 ಅನ್ಷುಲ್ ಕಾಂಬೋಜ್ 47ಕ್ಕೆ1) ವಿರುದ್ಧ ಉತ್ತರ ವಲಯ. ಸೆಮಿಫೈನಲ್ 2–ಪಶ್ಚಿಮ ವಲಯ: 87 ಓವರ್ಗಳಲ್ಲಿ 6ಕ್ಕೆ363 (ಆರ್ಯ ದೇಸಾಯಿ 39 ಋತುರಾಜ್ ಗಾಯಕವಾಡ 184 ಶ್ರೇಯಸ್ ಅಯ್ಯರ್ 18 ತನುಷ್ ಕೋಟ್ಯಾನ್ ಬ್ಯಾಟಿಂಗ್ 65 ಶಾರ್ದೂಲ್ ಠಾಕೂರ್ ಬ್ಯಾಟಿಂಗ್ 24 ಖಲೀಲ್ ಅಹಮದ್ 70ಕ್ಕೆ2 ಸಾರಾಂಶ್ ಜೈನ್ 109ಕ್ಕೆ2) ವಿರುದ್ಧ ಕೇಂದ್ರ ವಲಯ.

ಋತುರಾಜ್ ಶತಕ; ಪಶ್ಚಿಮ ಬೃಹತ್ ಮೊತ್ತ

ದುಲೀಪ್ ಟ್ರೋಫಿ ಟೂರ್ನಿಯ ಎರಡನೇ ಸೆಮಿಫೈನಲ್ನಲ್ಲಿ ಎಲ್ಲರ ಕಣ್ಣು ಪಶ್ಚಿಮ ವಲಯ ತಂಡದ ಶ್ರೇಯಸ್ ಅಯ್ಯರ್ ಅವರ ಮೇಲಿತ್ತು. ಆದರೆ ಆ ಪಂದ್ಯದಲ್ಲಿ ಮಿಂಚಿದ್ದು ಮಾತ್ರ ಋತುರಾಜ್ ಗಾಯಕವಾಡ ಅವರು. ಟಾಸ್ ಗೆದ್ದ ಪಶ್ಚಿಮ ವಲಯ ತಂಡದ ನಾಯಕ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ 10 ರನ್ಗಳಾಗುವಷ್ಟರಲ್ಲಿ ಇಬ್ಬರೂ ಆರಂಭಿಕರಾದ ಯಶಸ್ವಿ ಜೈಸ್ವಾಲ್ (4) ಮತ್ತು ಹಾರ್ವಿಕ್ ದೇಸಾಯಿ (1) ಪೆವಿಲಿಯನ್ ಸೇರಿದರು.

ಈ ಹಂತದಲ್ಲಿ ಕ್ರೀಸ್ಗೆ ಬಂದ ಋತುರಾಜ್ (184; 206 ಎ 4X25 6X1) ಅಮೋಘ ಶತಕ ಬಾರಿಸಿದರು. ದಿನದಾಟದ ಮುಕ್ತಾಯಕ್ಕೆ ತಂಡವು 87 ಓವರ್ಗಳಲ್ಲಿ 6 ವಿಕೆಟ್ಗಳಿಗೆ 363 ರನ್ಗಳ ದೊಡ್ಡ ಮೊತ್ತ ಪೇರಿಸಿತು. ಶ್ರೇಯಸ್ 28 ಎಸೆತಗಳಲ್ಲಿ 25 ರನ್ ಗಳಿಸಿದರು. ಇನಿಂಗ್ಸ್ ಕೊನೆಯಲ್ಲಿ ಮಿಂಚಿದ ತನುಷ್ ಕೋಟ್ಯಾನ್ (ಬ್ಯಾಟಿಂಗ್ 65) ಮತ್ತು ಶಾರ್ದೂಲ್ (ಬ್ಯಾಟಿಂಗ್ 24) ಕ್ರೀಸ್ನಲ್ಲಿದ್ದಾರೆ.

ಗಾಯಗೊಂಡಿದ್ದ ಸಂದರ್ಭದಲ್ಲಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆದೆ. ಚೇತರಿಕೆಯ ಹಂತದಲ್ಲಿ ಆಟದ ಲಯ ತಪ್ಪದಂತೆ ಅಭ್ಯಾಸ ಮಾಡುತ್ತಿದ್ದೆ. ಅದರಿಂದಾಗಿ ದೇಶಿ ಋತುವಿನ ಆರಂಭವನ್ನು ಚೆನ್ನಾಗಿ ಮಾಡಲು ಸಾಧ್ಯವಾಯಿತು.
-ಋತುರಾಜ್ ಗಾಯಕವಾಡ್, ಪಶ್ಚಿಮ ವಲಯದ ಬ್ಯಾಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.