ಪಶ್ಚಿಮ ವಲಯದ ಚಿಂತನ್ ಗಜ ಅವರ ಬೌಲಿಂಗ್ –ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.
ಮಳೆಯ ಆಟ
ವಿರಾಮದ ನಂತರ ನಾಲ್ಕು ಎಸೆತಗಳಾಗುವಷ್ಟರಲ್ಲಿ ಮಳೆ ಸುರಿಯಿತು. ಆಟ ಸ್ಥಗಿತವಾಯಿತು. ಸುಮಾರು ಒಂದು ಗಂಟೆಯ ನಂತರ ಆಟ ಆರಂಭವಾಯಿತು. ಆದರೆ ಐದು ನಿಮಿಷವಾಗುಷ್ಟರಲ್ಲಿ ಮೊಡಗಳು ದಟ್ಟೈಸಿ ಬೆಳಕು ಮಂದವಾಯಿತು. ಇದರಿಂದಾಗಿ ಆಟ ಮತ್ತೆ ನಿಂತಿತು. ಮಳೆಯೂ ಸುರಿದುಹೋಯಿತು. ನಂತರದ ಎಳೆಬಿಸಿಲಿನಲ್ಲಿ ಸಂಜೆ 5.05ಕ್ಕೆ ಆಟ ಆರಂಭವಾಯಿತು. ಐದು ಓವರ್‌ಗಳಷ್ಟು ಆಟ ನಡೆಯಿತು. ಇದರಲ್ಲಿಯೇ ಸಾಯಿ ಕಿಶೋರ್ ವಿಕೆಟ್ ಪತನವಾಯಿತು. ಮೈದಾನದ ಎಡಭಾಗದಲ್ಲಿ ತುಂತುರು ಮಳೆ ಮತ್ತು ಬಲಭಾಗದಲ್ಲಿ ಎಳೆಬಿಸಿಲಿನ ವಿಸ್ಮಯವೂ ಗಮನ ಸೆಳೆಯಿತು!