ಶನಿವಾರ, ಜುಲೈ 31, 2021
28 °C

ಕೋವಿಡ್‌ ಬದಲಾವಣೆ | ಸ್ಪಷ್ಟನೆ ನೀಡುವಂತೆ ಐಸಿಸಿಗೆ ಇಸಿಬಿ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಸೂಚಿಸಲಾಗಿರುವ ಬದಲಾವಣೆಗಳ ಕುರಿತು ಸ್ಪಷ್ಟನೆ ನೀಡಬೇಕೆಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯ (ಇಸಿಬಿ) ಅಧಿಕಾರಿಗಳು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಗೆ (ಐಸಿಸಿ) ಕೇಳಿಕೊಂಡಿದ್ದಾರೆ.

ಟೆಸ್ಟ್‌ ಸರಣಿ ಆಡಲು ವೆಸ್ಟ್‌ ಇಂಡೀಸ್‌ ಹಾಗೂ ಪಾಕಿಸ್ತಾನ ತಂಡಗಳು ಸದ್ಯದಲ್ಲೇ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿವೆ. ಆ ಪಂದ್ಯಗಳಲ್ಲಿ ಪರಿಷ್ಕೃತ ನಿಯಮಗಳನ್ನು ಅಳವಡಿಸಿಕೊಳ್ಳಲು ಐಸಿಸಿ ಅನುಮತಿ ನೀಡುವ ವಿಶ್ವಾಸವಿದೆ ಎಂದು ಇಸಿಬಿ ಅಧಿಕಾರಿಗಳು ಹೇಳಿದ್ದಾಗಿ ಬಿಬಿಸಿ ವರದಿ ಮಾಡಿದೆ.

‘ಕೋವಿಡ್‌–19 ಬದಲಾವಣೆಯ ಕುರಿತ ಇನ್ನೂ ಕೆಲವು ನಿಯಮಗಳು ಪರಿಶೀಲನೆಯ ಹಂತದಲ್ಲಿವೆ. ಅವುಗಳಿಗೆ ಐಸಿಸಿ ಒಪ್ಪಿಗೆ ನೀಡಬೇಕಿದೆ. ಜುಲೈನಲ್ಲಿ ಟೆಸ್ಟ್‌ ಸರಣಿಗಳು ಆರಂಭವಾಗಲಿದ್ದು, ಅದಕ್ಕೂ ಮುನ್ನ ಈ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ’ ಎಂದು ಇಸಿಬಿ ಟೂರ್ನಿಗಳ ನಿರ್ದೇಶಕ ಸ್ಟೀವ್‌ ಎಲ್‌ವರ್ಥಿ ತಿಳಿಸಿದ್ದಾರೆ.

ಈ ಬದಲಾವಣೆಗಳು ಟೆಸ್ಟ್‌ ಕ್ರಿಕೆಟ್‌ಗೆ ಮಾತ್ರ ಅನ್ವಯವಾಗಲಿವೆ. 

ಚೆಂಡು ಹೊಳೆಯುವಂತೆ ಮಾಡಲು ಎಂಜಲು ಬಳಕೆ ಮಾಡುವುದನ್ನು ಐಸಿಸಿ ನಿಷೇಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು