ಸೌತಾಂಪ್ಟನ್: ಇಂಗ್ಲೆಂಡ್ ತಂಡದ ನಾಯಕ ಏಯಾನ್ ಮಾರ್ಗನ್ ಮಂಗಳವಾರ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದರು.

ಏಜಿಸ್ ಬೌಲ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕ್ರೇಗ್ ಯಂಗ್ ಅವರ ಉತ್ತಮ ಬೌಲಿಂಗ್‌ನಿಂದ ಇಂಗ್ಲೆಂಡ್, 48 ರನ್‌ಗಳಾಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್‌ಗೆ ಬಂದ ಮಾರ್ಗನ್ (106; 84ಎಸೆತ, 15ಬೌಂಡರಿ, 4ಸಿಕ್ಸರ್) ಪಂದ್ಯದ ದಿಕ್ಕು ಬದಲಿಸಿದರು. ತಂಡವು 49.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 328 ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನತ್ತಿದ್ದ ಐರ್ಲೆಂಡ್ 18 ಓವರ್‌ಗಳಲ್ಲಿ 1 ವಿಕೆಟ್‌ಗೆ 113 ರನ್ ಗಳಿಸಿತ್ತು. ಪಾಲ್ ಸ್ಟರ್ಲಿಂಗ್ ಅರ್ಧಶತಕ (ಬ್ಯಾಟಿಂಗ್ 65) ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 49.5 ಓವರ್‌ಗಳಲ್ಲಿ 328(ಏಯಾನ್ ಮಾರ್ಗನ್ 106, ಟಾಮ್ ಬೆಂಟನ್ 58, ಡೇವಿಡ್ ವಿಲ್ಲಿ 51; ಕ್ರೇಗ್ ಯಂಗ್ 53ಕ್ಕೆ3) ಐರ್ಲೆಂಡ್: 18 ಓವರ್‌ಗಳಲ್ಲಿ 1 ವಿಕೆಟ್‌ಗೆ 113 (ಪಾಲ್ ಸ್ಟರ್ಲಿಂಗ್ 65, ಆ್ಯಂಡಿ ಬಲ್ಬೈರ್ನ್ ಬ್ಯಾಟಿಂಗ್ 31; ಡೇವಿಡ್ ವಿಲ್ಲಿ 25ಕ್ಕೆ 1) - ವಿವರ ಅಪೂರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.