ಕಾರ್ಡಿಫ್: ಟ್ರೆಂಟ್‌ಬ್ರಿಜ್‌ನಲ್ಲಿ ಪಾಕಿ ಸ್ತಾನದ ಎದುರು ಸೋಲನುಭವಿಸಿದ್ದರಿಂದ ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ಆರಂಭದಲ್ಲೇ ಎಚ್ಚರಿಕೆಯ ಗಂಟೆ ಮೊಳಗಿದೆ. ಪ್ರಶಸ್ತಿಗೆ ನೆಚ್ಚಿನ ತಂಡ ವಾಗಿರುವ ಆತಿಥೇಯರು ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆಯುವ ಪಂದ್ಯವನ್ನು ಹಗುರವಾಗಿ ತೆಗೆದುಕೊಳ್ಳುವಂತೆಯೇ ಇಲ್ಲ.

ಇಂಗ್ಲೆಂಡ್ 2015ರ ವಿಶ್ವಕಪ್‌ನಿಂದ ಹೊರಬೀಳಲು ಆಗ ಬಾಂಗ್ಲಾದೇಶ ತಂಡದ ಎದುರು ಅನುಭವಿಸಿದ ಸೋಲು ಕಾರಣವಾಗಿತ್ತು. ಇಯಾನ್ ಮಾರ್ಗನ್ ಬಳಗದ ಬ್ಯಾಟಿಂಗ್ ಬಲಿಷ್ಠವಾಗಿದ್ದು ಇದುವರೆಗೆ ಆಡಿರುವ ಎರಡೂ ಪಂದ್ಯಗಳಲ್ಲಿ 300ರ ಗಡಿ ದಾಟಿದೆ. ಆದರೆ ಬೌಲಿಂಗ್ ವಿಭಾಗವೇ ತಂಡದಲ್ಲಿ ಒಂದಿಷ್ಟು ಚಿಂತೆಯ ಗೆರೆಗಳನ್ನು ಮೂಡಿಸಿದೆ.

ಬಾಂಗ್ಲಾದೇಶ, ಓವಲ್‌ನಲ್ಲಿ ಈ ಹಿಂದೆ ಆಡಿರುವ ಎರಡೂ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕ ವಿರುದ್ಧ 21 ರನ್‌ಗಳ ಗೆಲುವಿಗೆ ತಂಡದ ಬೌಲರ್‌ಗಳು ಎದುರಾಳಿ ಬ್ಯಾಟ್ಸ್‌ಮನ್ನರನ್ನು ಹದ್ದುಬಸ್ತಿನಲ್ಲಿಟ್ಟಿದ್ದು ನ್ಯೂಜಿಲೆಂಡ್ ವಿರುದ್ಧವೂ ತಂಡದ ಬೌಲಿಂಗ್ ಗಮನ ಸೆಳೆದಿತ್ತು. ಆದರೆ ಬ್ಯಾಟ್ಸ್‌ಮನ್‌ಗಳು ಉತ್ತಮ ಬುನಾದಿಯ ಮೇಲೆ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಈಗ ನಾಯಕ ಮಷ್ರಫೆ ಮೊರ್ತಾಜಾ, ಆರಂಭ ಮತ್ತು ಮಧ್ಯಮ ಕ್ರಮಾಂಕದ ಆಟಗಾರರಿಂದ ಉಪಯುಕ್ತ ಕೊಡುಗೆ ನಿರೀಕ್ಷಿಸಿದ್ದಾರೆ. ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮಾತ್ರ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಎರಡೂ ತಂಡಗಳು ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಗೆದ್ದು, ಒಂದು ಸೋತು ಇದೀಗ ಕಾರ್ಡಿಫ್‌ಗೆ ಬಂದಿಳಿದಿವೆ.

ಇಲ್ಲಿಯ ಪಿಚ್ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ನೆರವು ನೀಡುವ ನಿರೀಕ್ಷೆಯಿದೆ. ಆರಂಭ ಆಟಗಾರರ ಸಾಮರ್ಥ್ಯಕ್ಕೆ ಇದು ಸವಾಲಾಗಲಿದೆ. ಇತ್ತೀಚಿನ ಕೆಲ ತಿಂಗಳ ಉತ್ತಮ ಪ್ರದರ್ಶನ, ವೇಗದ ದಾಳಿ, ಇಲ್ಲಿನ ಪರಿಸರ– ಇವೆಲ್ಲವೂ ಇಂಗ್ಲೆಂಡ್‌ಗೆ ಶನಿವಾರದ ಪಂದ್ಯ ಸ್ವಲ್ಪ ಅನುಕೂಲ ಕಲ್ಪಿಸುವಂತೆ ಕಾಣುತ್ತಿದೆ.

ಇಂಗ್ಲೆಂಡ್ ತಂಡ ಬ್ಯಾಟಿಂಗ್‌ನಲ್ಲಿ ಜೋ ರೂಟ್ ಮೇಲೆ ಹೆಚ್ಚಿನ ವಿಶ್ವಾಸವಿಟ್ಟಿದೆ. ಇದುವರೆಗಿನ ಟೂರ್ನಿಯ ಅತಿ ಹೆಚ್ಚಿನ ರನ್ ಗಳಿಕೆದಾರ ಕೂಡ ಆಗಿರುವ ಯಾರ್ಕ್‌ಶೈರ್‌ನ ಆಟಗಾರ, ಸ್ಪಿನ್ ಮತ್ತು ವೇಗ ಎರಡನ್ನೂ ಅಧಿಕಾರಯುತವಾಗಿ ಆಡಬಲ್ಲರು.

ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದೇಶದ ಬ್ಯಾಟಿಂಗ್ ಶಕ್ತಿ ಯಾಗಿರುವ ಎಡಗೈ ಆರಂಭ ಆಟಗಾರ ತಮೀಮ್ ಇಕ್ಬಾಲ್ ಆರಂಭದಲ್ಲಿ ಲಯ ಕಂಡರೂ, ಇನಿಂಗ್ಸ್ ಕಟ್ಟಲು ವಿಫಲರಾಗಿದ್ದಾರೆ. ಕೊನೆಯ ಬಾರಿ ಇಂಗ್ಲೆಂಡ್ ವಿರುದ್ಧ ಆಡಿದ್ದಾಗ ಅವರು ಆಕರ್ಷಕ 128 ರನ್ ಗಳಿಸಿದ್ದರು. ತಮ್ಮ ತಂಡಕ್ಕೆ ಬಲ ನೀಡಲು ಶನಿವಾರ ಅಂಥದ್ದೇ ನಿರ್ವಹಣೆ ಎದುರುನೋಡುತ್ತಿದ್ದಾರೆ.

‘ಈ ಪಂದ್ಯ ಕಠಿಣವಾಗಬ ಲ್ಲದು. ಬಾಂಗ್ಲಾದೇಶ ಉತ್ತಮ ತಂಡ. ನಾವು ಆ ತಂಡವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ’ ಎಂದು ಇಯಾನ್ ಮಾರ್ಗನ್, ಶುಕ್ರವಾರ ತಂಡದ ಅಭ್ಯಾಸದ ನಂತರ ತಿಳಿಸಿದರು.

‘ಆರಂಭದಲ್ಲೇ ಸ್ಪಿನ್ ಅಸ್ತ್ರ ಬಳಕೆ ಸೇರಿದಂತೆ ಬಾಂಗ್ಲಾದೇಶ ಬಳಸುವ ಯಾವುದೇ ತಂತ್ರಗಾರಿಕೆಗೆ ಇಂಗ್ಲೆಂಡ್ ಸಜ್ಜಾಗಿದೆ’ ಎಂದರು. ಹಿಂದಿನ ಎರಡೂ ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ಬಾಂಗ್ಲಾದೇಶಕ್ಕೆ ಆರಂಭದಲ್ಲಿ ಯಶಸ್ಸು ಗಳಿಸಿಕೊಟ್ಟಿದ್ದರು.

ತಂಡಗಳು: ಇಂಗ್ಲೆಂಡ್: ಇಯಾನ್ ಮಾರ್ಗನ್ (ಕ್ಯಾಪ್ಟನ್), ಮೊಯಿನ್ ಆಲಿ, ಜೊಫ್ರಾ ಅರ್ಚರ್, ಜಾನಿ ಬೇಸ್ಟೊ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಟಾಮ್ ಕರನ್, ಲಿಯಾಮ್ ಡಾಸನ್, ಲಿಯಾಮ್ ಪ್ಲಂಕೆಟ್, ಅದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ಜೇಮ್ಸ್ ವಿನ್ಸ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ಬಾಂಗ್ಲಾದೇಶ: ಮಷ್ರಫೆ ಮೊರ್ತಾಜಾ (ಕ್ಯಾಪ್ಟನ್), ಅಬು ಜಾಯೆದ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಮಹಮದುಲ್ಲಾ, ಮೆಹಿದಿ ಹಸನ್, ಮೊಹಮದ್ ಮಿಥುನ್, ಮೊಹಮದ್ ಸೈಫುದ್ದೀನ್, ಮೊಸಾದೆಕ್ ಹುಸೇನ್, ಮುಷ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮುಸ್ತಫಿಜುರ್ ರೆಹಮಾನ್, ರುಬೆಲ್ ಹೊಸೇನ್, ಶಬ್ಬೀರ್ ರೆಹಮಾನ್, ಶಕೀಬ್ ಅಲ್ ಹಸನ್, ಸೌಮ್ಯ ಸರ್ಕಾರ್, ತಮೀಮ್ ಇಕ್ಬಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.