ನಾಟಿಂಗ್ಹ್ಯಾಮ್: ಚೆಂದದ ಬ್ಯಾಟಿಂಗ್ ಮಾಡಿದ ಕೆವೆಮ್ ಹಾಜ್ ಅವರ ಶತಕದ ಬಲದಿಂದ ವೆಸ್ಟ್ ಇಂಡೀಸ್ ತಂಡವು ಆತಿಥೇಯ ಇಂಗ್ಲೆಂಡ್ ಎದುರಿನ ಟೆಸ್ಟ್ನಲ್ಲಿ ದಿಟ್ಟ ಹೋರಾಟ ಮಾಡಿದೆ.

ಪಂದ್ಯದ ಎರಡನೇ ದಿನವಾದ ಶುಕ್ರವಾರ ವಿಂಡೀಸ್ ತಂಡವು ಮೊದಲ ಇನಿಂಗ್ಸ್ನಲ್ಲಿ 77 ಓವರ್ಗಳಲ್ಲಿ 5 ವಿಕೆಟ್ಗಳಿಗೆ 322 ರನ್ ಗಳಿಸಿತು. ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ತಂಡವು 88.3 ಓವರ್ಗಳಲ್ಲಿ 416 ರನ್ಗಳನ್ನು ಗಳಿಸಿತ್ತು. ಆತಿಥೇಯ ತಂಡದ ಒಲಿ ಪೋಲ್ (121; 167ಎ) ಶತಕ ಬಾರಿಸಿದ್ದರು. ಬೆನ್ ಡಕೆಟ್ (71 ರನ್) ಮತ್ತು ನಾಯಕ ಬೆನ್ ಸ್ಟೋಕ್ಸ್ (69 ರನ್) ಅರ್ಧಶತಕಗಳನ್ನು ಗಳಿಸಿದರು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ತಂಡಕ್ಕೆ ಕ್ರೇಗ್ ಬ್ರಾಥ್ವೇಟ್ (48; 72ಎ), ಅಲಿಕ್ ಅಥಾಂಝೇ (82; 99ಎ) ಹಾಗೂ ಹಾಜ್ (120 ರನ್) ಶತಕ ಆಸರೆಯಾದವು. ಇದರಿಂದಾಗಿ ತಂಡವು ದಿಟ್ಟ ಉತ್ತರ ನೀಡಿತು. ತಂಡವು 84ಕ್ಕೆ3 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ಅಥಾಂಜೆ ಮತ್ತು ಹಾಜ್ 4ನೇ ವಿಕೆಟ್ ಜೊತೆಯಾಟದಲ್ಲಿ 175 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್: 88.3 ಓವರ್ಗಳಲ್ಲಿ 416. ವೆಸ್ಟ್ ಇಂಡೀಸ್: 77 ಓವರ್ಗಳಲ್ಲಿ 5ಕ್ಕೆ322 (ಕ್ರೇಗ್ ಬ್ರಾಥ್ವೇಟ್ 48, ಮೆಕೈಲ್ ಲೂಯಿಸ್ 21, ಅಲಿಕ್ ಅಥಾಂಜೆ 82, ಕೆವೆಮ್ ಹಾಜ್ 120, ಶೋಯಬ್ ಬಶೀರ್ 100ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.