ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL MI vs PBKS: ‘‍ಸಮ‘ಬಲಶಾಲಿಗಳ ಹಣಾಹಣಿ ಇಂದು, ಆರ್ಷದೀಪ್ -ಬೂಮ್ರಾ ಮೇಲೆ ಕಣ್ಣು

ಪಂಜಾಬ್ ಕಿಂಗ್ಸ್‌ಗೆ ಮುಂಬೈ ಇಂಡಿಯನ್ಸ್‌ ಸವಾಲು; ಆರ್ಷದೀಪ್, ಬೂಮ್ರಾ ಮೇಲೆ ಕಣ್ಣು
Published 17 ಏಪ್ರಿಲ್ 2024, 23:30 IST
Last Updated 17 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಮುಲ್ಲನಪುರ: ಪಂಜಾಬ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ತಂಡಗಳು ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 

ಅಂಕಪಟ್ಟಿಯಲ್ಲಿ ಉಭಯ ತಂಡಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ‘ಸಮಬಲ’ ಸಾಧಿಸಿವೆ. ತಲಾ ಆರು ಪಂದ್ಯಗಳನ್ನಾಡಿ ಎರಡರಲ್ಲಿ ಜಯಿಸಿ, ನಾಲ್ಕರಲ್ಲಿ ಸೋತಿವೆ. ನೆಟ್‌ ರನ್‌ರೇಟ್‌ನಲ್ಲಿ ತುಸು ಉತ್ತಮವಾಗಿರುವುದರಿಂದ ಪಂಜಾಬ್ (-0.218) ಏಳನೇ ಸ್ಥಾನದಲ್ಲಿದೆ. ಮುಂಬೈ (-0.234) ಅದರ ನಂತರದ ಸ್ದಾನದಲ್ಲಿದೆ.  

ಪ‍ಂಜಾಬ್ ತಂಡದಲ್ಲಿ ಅಗ್ರಕ್ರಮಾಂಕದ ಬ್ಯಾಟರ್‌ಗಳು ಮಿಂಚಬೇಕಿದೆ. ಜಾನಿ ಬೆಸ್ಟೊ ತಮ್ಮ ಅನುಭವಕ್ಕೆ ತಕ್ಕ ಲಯದಲ್ಲಿ ಇಲ್ಲ. ಅಥರ್ವ್ ತೈಡೆ, ಪ್ರಭಸಿಮ್ರನ್ ಸಿಂಗ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಮುಂಬೈನ ವೇಗಿ ಜಸ್‌ಪ್ರೀತ್ ಬೂಮ್ರಾ ನೇತೃತ್ವದ ಬೌಲಿಂಗ್ ಪಡೆಯನ್ನು ಎದುರಿಸಬೇಕಿದೆ. 

ಗಾಯದಿಂದಾಗಿ ಧವನ್  ಏಳರಿಂದ ಹತ್ತು ದಿನ ಆಡಿರಲಿಲ್ಲ. ಈ ಪಂದ್ಯಕ್ಕೆ ಮರಳುವುದು ಇನ್ನೂ ಖಚಿತವಾಗಿಲ್ಲ. ಆದ್ದರಿಂದ ಸ್ಯಾಮ್ ಕರನ್ ಅವರೇ ಹಂಗಾಮಿ ನಾಯಕರಾಗಿ ಮುಂದುವರಿಯಬಹುದು.  ಆದರೆ ಪಂಜಾಬ್ ತಂಡದಲ್ಲಿರುವ ಪ್ರತಿಭಾನ್ವಿತ ಆಟಗಾರರಾದ ಶಶಾಂಕ್ ಸಿಂಗ್ ಮತ್ತು ಆಷುತೋಷ್ ಶರ್ಮಾ ಅವರು ಮಧ್ಯಮ ಕ್ರಮಾಂಕದಲ್ಲಿ ಮಿಂಚುತ್ತಿದ್ದಾರೆ. ಅವರ ಮೇಲಷ್ಟೇ ತಂಡಕ್ಕೆ ಭರವಸೆ ನೆಟ್ಟಿದೆ. 

ಪಂಜಾಬ್ ತಂಡದ ಬೌಲಿಂಗ್ ಪಡೆ ಉತ್ತಮವಾಗಿದೆ. ಆರ್ಷದೀಪ್ ಸಿಂಗ್, ಕಗಿಸೊ ರಬಾಡ, ಹರ್ಷಲ್ ಪಟೇಲ್ ಹಾಗೂ ಹರಪ್ರೀತ್ ಬ್ರಾರ್ ಅವರಿರುವ ಬೌಲಿಂಗ್ ಪಡೆಯು ಮುಂಬೈನ ಸ್ಫೋಟಕ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗುವರೇ ಎಂಬ ಕುತೂಹಲ ಗರಿಗೆದರಿದೆ. 

ಒಂದು ಶತಕ ಬಾರಿಸಿರುವ ರೋಹಿತ್ ಶರ್ಮಾ ಅಮೋಘ ಲಯದಲ್ಲಿದ್ದಾರೆ. ಮಿಂಚಿನ ಬ್ಯಾಟರ್ ಸೂರ್ಯಕುಮಾರ್ ಯಾದವ್,  ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ದೊಡ್ಡ ಮೊತ್ತವನ್ನು ಪೇರಿಸಬಲ್ಲರು.  

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್ 

ಬಲಾಬಲ

ಪಂದ್ಯ; 31

ಮುಂಬೈ ಜಯ; 16

ಪಂಜಾಬ್ ಜಯ; 15

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT