ಶ್ರೀಲಂಕಾ ವಿರುದ್ಧ ಭಾರತಕ್ಕೆ 7 ವಿಕೆಟ್ ಗೆಲುವು

ಅರ್ಧ ಶತಕ ದಾಖಲಿಸಿ ಇಶಾನ್ ಕಿಶನ್ ಔಟಾದರು. ಅವರು 59 ರನ್ ಸಿಡಿಸಿದರು

ಪೃಥ್ವಿ ಶಾ 43 ರನ್‌ಗಳಿಗೆ ಔಟ್

ಶ್ರೀಲಂಕಾ ನಿಗದಿತ 50 ಒವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 262 ರನ್ ಗಳಿಸಿತು. ಈ ಪಂದ್ಯ ಗೆಲ್ಲಲು ಭಾರತ 263 ಗಳಿಸಬೇಕಿದೆ.

ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಪಡೆದರು.

ಯಜುವೇಂದ್ರ ಚಹಲ್ 7ನೇ ವಿಕೆಟ್ ಪಡೆದುಕೊಂಡರು. ಆ ಮೂಲಕ ಅವರು 2 ವಿಕೆಟ್ ಪಡೆದರು

ವೇಗದ ಔಲರ್ ದೀಪಕ್ ಚಹರ್ ಅವರು ಶ್ರೀಲಂಕಾ ತಂಡದ 6ನೇ ವಿಕೆಟ್ ಪಡೆದರು

ಶ್ರೀಲಂಕಾದ 5ನೇ ವಿಕೆಟ್ ಪತನ

ಕುನಾಲ್ ಪಾಂಡ್ಯ ಶ್ರೀಲಂಕಾದ 4ನೇ ವಿಕೆಟ್ ಪಡೆದುಕೊಂಡರು. ಡಿ.ಸಿಲ್ವಾ ಕುನಾಲ್‌ಗೆ ಔಟಾದರು

ಭಾರತದ ಸ್ಪೀನ್ ದಾಳಿ ಶ್ರೀಲಂಕಾ ಆಘಾತ ಅನುಭವಿಸಿದೆ. 17 ಓವರ್ ಗಳಲ್ಲಿ ಶ್ರೀಲಂಕಾ 3 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತ್ತು. ಕುಲದೀಪ್ ಯಾದವ್‌ಗೆ 2 ವಿಕೆಟ್ ಪಡೆದರೆ, ಚಹಲ್ 1 ವಿಕೆಟ್ ಪಡೆದರು.

ಅವಿಷ್ಕಾ ಫರ್ನಾಂಡೊ ಔಟಾಗಿದ್ದಾರೆ. ಯಜುವೇಂದ್ರ ಚಹಲ್‌ಗೆ ವಿಕೆಟ್ ಒಪ್ಪಿಸಿದರು.

ಶ್ರೀಲಂಕಾ: ದಸುನ್ ಶನಕಾ (ನಾಯಕ), ಧನಂಜಯ ಡಿಸಿಲ್ವಾ (ಉಪನಾಯಕ), ಅವಿಷ್ಕಾ ಫರ್ನಾಂಡೊ, ಭಾನುಕಾ ರಾಜಪಕ್ಷ, ಚರಿತ್ ಅಸಲೆಂಕಾ, ವಾಣಿಂದು ಹಸರಂಗ, ಚಮಿಕಾ ಕರುಣಾರತ್ನೆ, ದುಷ್ಮಂತ ಚಾಮೀರಾ, ಲಕ್ಷನ್ ಸಂದಕನ್, ಇಸುರು ಉಡಾನ. ಡಿ. ಶನಕ

ಭಾರತ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಇಶಾನ್ ಕಿಶನ್ (ವಿಕೆಟ್ಕೀಪರ್), ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್.

ಕೊಲಂಬೊದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.