ಶುಕ್ರವಾರ, ಅಕ್ಟೋಬರ್ 2, 2020
21 °C

ಇಂಗ್ಲೆಂಡ್‌ ಪ್ರೇಕ್ಷಕರ ನಿಂದನೆ ತಪ್ಪಿತು: ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್‌: ‘ಖಾಲಿ ಕ್ರೀಡಾಂಗಣದಲ್ಲಿ ಆಡುವುದು ಒಂದು ವಿನೂತನ ಅನುಭವ. ಆದರೂ ಮೊದಲ ಬಾರಿ ನಾನು ಇಂಗ್ಲೆಂಡ್‌ ಪ್ರೇಕ್ಷಕರಿಂದ ನಿಂದಿಸಿಕೊಳ್ಳುವುದು ತಪ್ಪಿದೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಆಸ್ಟ್ರೇಲಿಯಾ ಆಟಗಾರ ಡೇವಿಡ್‌ ವಾರ್ನರ್ ಹೇಳಿದ್ದಾರೆ.

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ ಟೂರ್ನಿಯ ವೇಳೆ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಪ್ರೇಕ್ಷಕರು ವಾರ್ನರ್‌ ಅವರನ್ನು ಪದೇ ಪದೇ ಮೂದಲಿಸಿದ್ದರು. ಅದರ ಬಳಿಕ ನಡೆದ ಆ್ಯಷಸ್‌ ಸರಣಿಯಲ್ಲೂ ನಿಂದನೆ ಮುಂದುವರಿದಿತ್ತು.

ಶುಕ್ರವಾರ ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಟ್ವೆಂಟಿ–20 ಪಂದ್ಯದ ವೇಳೆ ವಾರ್ನರ್‌ ಅವರಿಗೆ ಅಂತಹ ಯಾವುದೇ ಅನುಭವ ಆಗಲಿಲ್ಲ. ಯಾಕೆಂದರೆ ಸೌತಾಂಪ್ಟನ್‌ನಲ್ಲಿ ನಡೆದ ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ. 

‘ಇಂಗ್ಲೆಂಡ್‌ನಲ್ಲಿ ಮೊದಲ ಬಾರಿ ನಾನು ಪ್ರೇಕ್ಷಕರ ನಿಂದನೆ ಕೇಳಲಿಲ್ಲ. ಇದು ಒಳ್ಳೆಯದು‘ ಎಂದು ಪಂದ್ಯದ ಬಳಿಕ ವಾರ್ನರ್‌ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು