ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಕನ್ನಡಿಗ ರಾಹುಲ್ ಪಡೆಗೆ ರಾಯಲ್ಸ್ ಸವಾಲು

Published 23 ಮಾರ್ಚ್ 2024, 20:30 IST
Last Updated 23 ಮಾರ್ಚ್ 2024, 20:30 IST
ಅಕ್ಷರ ಗಾತ್ರ

ಜೈಪುರ: ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ  ತನ್ನ ಅಭಿಯಾನವನ್ನು ಭಾನುವಾರ ಆರಂಭಿಸಲಿದೆ.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪದ್ಯದಲ್ಲಿ ರಾಹುಲ್ ಬಳಗವು  ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ತೊಡೆಯ ಸ್ನಾಯುವಿನ ನೋವಿನಿಂದ ಬಳಲಿದ್ದ ರಾಹುಲ್ ಅವರು ಈಚೆಗೆ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ನಾಲ್ಕು ಪಂದ್ಯಗಳಲ್ಲಿ ಆಡಿರಲಿಲ್ಲ. ಹೋದ ವರ್ಷವೂ ಅವರು ತಡೆಯ ಸ್ನಾಯುವಿನ ಶಸ್ತ್ರಚಿಕಿತ್ಸೆಯಿಂದಾಗಿ ನಾಲ್ಕು ತಿಂಗಳು  ಕ್ರಿಕಟ್‌ನಿಂದ ದೂರವಿದ್ದರು. ನಂತರ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ವಿಕೆಟ್‌ಕೀಪಿಂಗ್ ಹೊಣೆ ನಿಭಾಯಿಸಿದ್ದರು.

ಇದೀಗ ಟೂರ್ನಿಯ ಮೊದಲ ಪಂದ್ಯದಿಂದಲೇ ಗೆಲುವಿನ ಓಟ ಆರಂಭಿಸುವ ಛಲದಲ್ಲಿದ್ದಾರೆ.  ಮುಂಬರಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಕೂಡ ಇಲ್ಲಿ ಉತ್ತಮವಾಗಿ ಆಡುವ ಸವಾಲು ಅವರ ಮುಂದಿದೆ.  ಲಖನೌ ತಂಡವು ಎರಡು ಬಾರಿ ಪ್ಲೇಆಫ್‌ ಪ್ರವೇಶಿಸಿತ್ತು. ಈ ಬಾರಿ ಪ್ರಶಸ್ತಿಯತ್ತ ರಾಹುಲ್ ಬಳಗವು ಚಿತ್ತ ನೆಟ್ಟಿದೆ.

ಆದರೆ ಲಖನೌ ತಂಡಕ್ಕೆ ಸಂಜು ಸ್ಯಾಮ್ಸನ್ ಬಳಗವನ್ನು ಮಣಿಸುವುದು ಅಷ್ಟೇನೂ ಸುಲಭವಲ್ಲ. ಎರಡು ವರ್ಷಗಳ ಹಿಂದೆ ರಾಜಸ್ಥಾನ ತಂಡವು ಫೈನಲ್ ತಲುಪಿತ್ತು. ಆದರೆ, ಗುಜರಾತ್ ಟೈಟನ್ಸ್ ಎದುರು ನಿರಾಶೆ ಅನುಭವಿಸಿತ್ತು.

ಈಚೆಗೆ ಟೆಸ್ಟ್ ಸರಣಿಯಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್, ಆಲ್‌ರೌಂಡರ್ ಆರ್.ಅಶ್ವಿನ್ , ವಿಕೆಟ್‌ಕೀಪರ್ ಧ್ರುವ ಜುರೇಲ್ ತಂಡದ ಶಕ್ತಿಯಾಗಿದ್ದಾರೆ. ಅಲ್ಲದೇ ರಿಯಾನ್ ಪರಾಗ್, ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್, ರಣಜಿ ಟೂರ್ನಿಯಲ್ಲಿ ಮಿಂಚಿದ್ದ ಮುಂಬೈ ಹುಡುಗ ತನುಷ್ ಕೋಟ್ಯಾನ್ ಅವರ ಮೇಲೆಯೂ ನಾಯಕ ಸಂಜು ವಿಶ್ವಾಸವಿಟ್ಟಿದ್ದಾರೆ.

ಉಭಯ ತಂಡಗಳಲ್ಲಿಯೂ ಉತ್ತಮ ಆಟಗಾರರು ಇರುವುದರಿಂದ ರೋಚಕ ಹಣಾಹಣಿಯ ನಿರೀಕ್ಷೆ ಗರಿಗೆದರಿದೆ. 

ಸಂಜು ಸ್ಯಾಮ್ಸನ್  
ಸಂಜು ಸ್ಯಾಮ್ಸನ್  

ತಂಡಗಳು

ಲಖನೌ ಸೂಪರ್‌ಜೈಂಟ್ಸ್: ಕೆ.ಎಲ್. ರಾಹುಲ್ (ನಾಯಕ) ಕ್ವಿಂಟನ್ ಡಿ ಕಾಕ್ ನಿಕೊಲಸ್ ಪೂರನ್ ಆಯುಷ್ ಬಡೋನಿ ಕೈಲ್ ಮೇಯರ್ಸ್ ಮಾರ್ಕಸ್ ಸ್ಟೊಯಿನಿಸ್ ದೀಪಕ್ ಹೂಡಾ ದೇವದತ್ತ ಪಡಿಕ್ಕಲ್ ರವಿ ಬಿಷ್ಣೋಯಿ ನವೀನ್ ಉಲ್ ಹಕ್ ಕೃಣಾಲ್ ಪಾಂಡ್ಯ ಯುಧ್‌ವೀರ್ ಸಿಂಗ್ ಪ್ರೇರಕ್ ಮಂಕಡ್ ಯಶ್ ಠಾಕೂರ್ ಅಮಿತ್ ಮಿಶ್ರಾ ಶಾಮರ್ ಜೋಸೆಫ್ ಮಯಂಕ್ ಯಾದವ್ ಮೊಹಸಿನ್ ಖಾನ್ ಕೆ. ಗೌತಮ್ ಶಿವಂ ಮಾವಿ ಅರ್ಷಿನ್ ಕುಲಕರ್ಣಿ ಎಂ. ಸಿದ್ಧಾರ್ಥ್ ಆ್ಯಷ್ಟನ್ ಟರ್ನರ್ ಡೇವಿಡ್ ವಿಲ್ಲಿ ಮೊಹಮ್ಮದ್ ಅರ್ಷದ್ ಖಾನ್.

ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ) ಜಾಸ್ ಬಟ್ಲರ್ ಶುಭಂ ದುಬೆ ಶಿಮ್ರಾನ್ ಹೆಟ್ಮೆಯರ್ ಯಶಸ್ವಿ ಜೈಸ್ವಾಲ್ ಧ್ರುವ ಜುರೇಲ್ ಟಾಮ್ ಕೊಲೆರ್ ಕ್ಯಾಡ್ಮೋರ್ ರಿಯಾನ್ ಪರಾಗ್ ರೋವ್ಮನ್ ಪೊವೆಲ್ ಕುನಾಲ್ ಸಿಂಗ್ ರಾಥೋಡ್ ಆರ್. ಅಶ್ವಿನ್ ದೊನೊವನ್ ಫೆರಿರಾ ಆವೇಶ್ ಖಾನ್ ಟ್ರೆಂಟ್ ಬೌಲ್ಟ್ ನಾಂದ್ರೆ ಬರ್ಗರ್ ಯಜುವೇಂದ್ರ ಚಾಹಲ್ ಪ್ರಸಿದ್ಧ ಕೃಷ್ಣ  ನವದೀಪ್ ಸೈನಿ ಸಂದೀಪ್ ಶರ್ಮಾ ಕುಲದೀಪ್ ಸೇನ್ ಅಬಿದ್ ಮುಷ್ತಾಕ್ ತನುಷ್ ಕೋಟ್ಯಾನ್.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಜಿಯೊ ಸಿನಿಮಾ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT