ಭಾನುವಾರ, ಜೂನ್ 13, 2021
23 °C

ಮಾಜಿ ಕ್ರಿಕೆಟಿಗ, ಉತ್ತರ ಪ್ರದೇಶ ಸಚಿವ ಚೇತನ್ ಚೌಹಾಣ್‌ ಕೋವಿಡ್‌ನಿಂದ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಉತ್ತರ ಪ್ರದೇಶದ ಸಚಿವ ಚೇತನ್ ಚೌಹಾಣ್‌ ಅವರು ಕೋವಿಡ್‌ನಿಂದಾಗಿ ಭಾನುವಾರ ನಿಧನರಾಗಿದ್ದಾರೆ.

ಈ ವಿಚಾರವನ್ನು ಚೇತನ್‌ ಅವರ ಸಹೋದರ ಪುಷ್ಪೇಂದ್ರ ಚೌಹಾಣ್‌ ತಿಳಿಸಿದ್ದಾರೆ.

72 ವರ್ಷದ ಚೌಹಾಣ್‌ ಅವರಿಗೆ ಕೋವಿಡ್‌ ಇರುವುದು ಕಳೆದ ಶುಕ್ರವಾರ ದೃಢವಾಗಿತ್ತು.‌ ಅವರು ಲಖನೌನ ಸಂಜಯ್‌ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚೇತನ್‌ ಚೌಹಾನ್‌ ಅವರು 1969 ಮತ್ತು 1978ರ ನಡುವೆ 40 ಟೆಸ್ಟ್ ಪಂದ್ಯಗಳಲ್ಲಿ ಆಡಿ, 2084 ರನ್ ಗಳಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರದಲ್ಲಿ ಚೇತನ್‌ ಚೌಹಾಣ್‌ ಅವರು ಸೈನಿಕ ಕಲ್ಯಾಣ, ಹೋಮ್‌ ಗಾರ್ಡ್ಸ್‌ ಮತ್ತು ನಾಗರಿಕ ಭದ್ರತೆ ಖಾತೆಗಳ ಸಚಿವರಾಗಿದ್ದರು. 

ಚೌಹಾಣ್‌ ಅವರು ಪತ್ನಿ, ಒಬ್ಬ ಪುತ್ರನನ್ನು ಅಗಲಿದ್ದಾರೆ. ಪುತ್ರ ವಿನಾಯಕ್‌ ಅವರು ಮೆಲ್ಬೋರ್ನ್‌ನಲ್ಲಿದ್ದು, ಇಂದು ರಾತ್ರಿ ಭಾರತಕ್ಕೆ ಬರುವ ಸಾಧ್ಯತೆಗಳಿವೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು