ರಣಜಿ ಕ್ರಿಕೆಟಿಗ ಶೇಖರ್ ಗವಳಿ ಪ್ರಪಾತಕ್ಕೆ ಬಿದ್ದು ದುರ್ಮರಣ

ನಾಸಿಕ್: ಚಾರಣಕ್ಕೆ ತೆರಳಿದ್ದ ಮಹಾರಾಷ್ಟ್ರದ ಮಾಜಿ ಕ್ರಿಕೆಟಿಗ ಶೇಖರ್ ಗೌಳಿ (45) ಪ್ರಪಾತಕ್ಕೆ ಬಿದ್ದು ಮರಣ ಹೊಂದಿದ್ದಾರೆ.
ಗವಳಿ ಅವರು, ನಾಸಿಕ್ ಜಿಲ್ಲೆಯ ಐಗತ್‌ಪುರಿಯ ಪಶ್ಚಿಮ ಘಟ್ಟದ ಬೆಟ್ಟ ಪ್ರದೇಶದಲ್ಲಿ ತಮ್ಮ ಗೆಳೆಯರೊಂದಿಗೆ ಮಂಗಳವಾರ ಸಂಜೆ ಚಾರಣಕ್ಕೆ ತೆರಳಿದ್ದರು. ಬೆಟ್ಟ ಏರುವಾಗ ಕಾಲು ಜಾರಿದ ಗವಳಿ, ಸುಮಾರು 250 ಅಡಿ ಆಳದ ಪ್ರಪಾತಕ್ಕೆ ಬಿದ್ದರೆನ್ನಲಾಗಿದೆ. ಈ ವಿಷಯವನ್ನು ಬುಧವಾರ ಪೊಲೀಸರು ತಿಳಿಸಿದ್ದಾರೆ.
‘ಇವತ್ತು ಬೆಳಿಗ್ಗೆ 10 ಗಂಟೆಗೆ ಗವಳಿಯವರ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಳ ನಂತರ ಅವರ ಕುಟುಂಬಕ್ಕೆ ದೇಹವನ್ನು ಹಸ್ತಾಂತರಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ ತಂಡದಲ್ಲಿ ಅವರು ಬಲಗೈ ಬ್ಯಾಟ್ಸ್‌ಮನ್ ಮತ್ತು ಲೆಗ್‌ಸ್ಪಿನ್ನರ್ ಆಗಿ ಆಡಿದ್ದರು. ನಿವೃತ್ತಿಯ ನಂತರ ಕೆಲಕಾಲ ಮಹಾರಾಷ್ಟ್ರ ಕ್ರಿಕೆಟ್ ತಂಡಕ್ಕೆ ಸಹಾಯಕ ಕೋಚ್ ಆಗಿದ್ದರು. ಸದ್ಯ 23 ವರ್ಷದೊಳಗಗಿನವರ ರಾಜ್ಯ ತಂಡಕ್ಕೆ ಫಿಟ್‌ನೆಸ್ ಟ್ರೇನರ್ ಆಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.