ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಮ್‌ಸ್ಟರ್‌ಡಾಂನಲ್ಲಿ ಹೋಟೆಲ್ ಆರಂಭಿಸಿದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

ನೆದರ್ಲೆಂಡ್ಸ್‌ನಲ್ಲಿ ‘ರೈನಾ ಇಂಡಿಯನ್ ರೆಸ್ಟೊರಂಟ್’
Published 23 ಜೂನ್ 2023, 10:04 IST
Last Updated 23 ಜೂನ್ 2023, 10:04 IST
ಅಕ್ಷರ ಗಾತ್ರ

ಬೆಂಗಳೂರು: ‘ಟೀಂ ಇಂಡಿಯಾ’ದ ಮಾಜಿ ಕ್ರಿಕೆಟರ್ ಸುರೇಶ್ ರೈನಾ ಅವರು ಯುರೋಪ್‌ನ ನೆದರ್ಲೆಂಡ್ಸ್‌ನ ರಾಜಧಾನಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಹೋಟೆಲ್ ಒಂದನ್ನು ತೆರೆದಿದ್ದಾರೆ.

ಈ ವಿಚಾರವನ್ನು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದು ಹೋಟೆಲ್‌ಗೆ ‘ರೈನಾ ಇಂಡಿಯನ್ ರೆಸ್ಟೊರಂಟ್’ ಎಂದು ಹೆಸರಿಡಲಾಗಿದೆ.

'ಆಮ್‌ಸ್ಟರ್‌ಡ್ಯಾಮ್‌ನ ಹೃದಯ ಭಾಗದಲ್ಲಿ ಇಂಡಿಯನ್ ರೆಸ್ಟೊರಂಟ್ ಪರಿಚಯಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಭೋಜನದ ಮೇಲಿನ ನನ್ನ ಪ್ರೀತಿಯನ್ನು ನೀವು ಈಗಾಗಲೇ ನೋಡಿದ್ದೀರಿ. ಭಾರತದ ಬಹುಬಗೆಯ ನಿಜವಾದ ರುಚಿಗಳನ್ನು ಇಲ್ಲಿರುವ ಭಾರತೀಯರು ಸೇರಿದಂತೆ ಯುರೋಪ್ ಜನರಿಗೆ ತಲುಪಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಉತ್ತರಪ್ರದೇಶ ಮೂಲದ ಸುರೇಶ್ ರೈನಾ ಅವರು 2022 ರಲ್ಲಿ ಎಲ್ಲ ಪ್ರಕಾರದ ಕ್ರಿಕೆಟ್‌ಗಳಿಗೆ ವಿದಾಯ ಹೇಳಿ ಹೋಟೆಲ್ ಉದ್ಯಮ ಸ್ಥಾಪಿಸಿದ್ದಾರೆ. ಅದರ ಭಾಗವಾಗಿ ಅವರು ನೆದರ್ಲ್ಯಾಂಡ್‌ನಲ್ಲಿ ಈ ಹೋಟೆಲ್ ತೆರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT