ಶುಕ್ರವಾರ, ಮೇ 7, 2021
26 °C

ಕ್ರಿಕೆಟ್‌ ಆಯ್ಕೆ ಸಮಿತಿ ಮಾಜಿ ಸದಸ್ಯ ಕಿಶನ್ ರುಂಗ್ಟಾ ಕೋವಿಡ್‌ನಿಂದ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕ್ರಿಕೆಟ್‌ ಆಡಳಿತಗಾರ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿ ಸದಸ್ಯ ಕಿಶನ್ ರುಂಗ್ಟಾ (88) ಅವರು ಕೋವಿಡ್‌ನಿಂದಾಗಿ ಜೈಪುರದ ಆಸ್ಪತ್ರೆಯೊಂದರಲ್ಲಿ ಶನಿವಾರ ರಾತ್ರಿ ನಿಧನರಾದರು.

ರಾಜಸ್ಥಾನ ಕ್ರಿಕೆಟ್‌ ತಂಡದ ನಾಯಕರೂ ಆಗಿದ್ದ ರುಂಗ್ಟಾ ಅವರಿಗೆ ಕಳೆದ ವಾರ ಸೋಂಕು ದೃಢಪಟ್ಟಿತ್ತು ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆಗೆ ಖಚಿತಪಡಿಸಿವೆ.

1998ರಲ್ಲಿ ಅವರು ಕೇಂದ್ರ ವಲಯವನ್ನು ಪ್ರತಿನಿಧಿಸಿ ಆಯ್ಕೆಗಾರರ ಸಮಿತಿಗೆ ಸೇರ್ಪಡೆಗೊಂಡಿದ್ದರು. ಅವರು 59 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 2717 ರನ್‌ ಗಳಿಸಿದ್ದಾರೆ.

ಅವರ ಹಿರಿಯ ಸೋದರ ಪುರುಷೋತ್ತಮ ರುಂಗ್ಟಾ ಅವರು 1970ರ ದಶಕದಲ್ಲಿ ಬಿಸಿಸಿಐ ಖಜಾಂಚಿಯಾಗಿದ್ದರು.

2005ರ ಸುಮಾರಿಗೆ ಲಲಿತ್ ಮೋದಿ ತಂಡ ಕ್ರಿಕೆಟ್‌ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಮೇಲೆ ರಾಜಸ್ಥಾನದಲ್ಲಿ ರುಂಗ್ಟಾ ಅವರ ಕುಟುಂಬದ ಆಧಿಪತ್ಯ ಕೊನೆಗೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು