ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಎದುರಿನ ಸೋಲು ಭಾರತ ತಂಡದ ಮೇಲೆ ಆತ್ಮಾವಲೋಕನದ ನೆರಳು ಬೀರಿದೆ. ಎಂಟು ವರ್ಷಗಳಲ್ಲಿ ಮೊದಲ ಬಾರಿ ಬಾರ್ಡರ್–ಗಾವಸ್ಕರ್ ಟ್ರೋಫಿ ಭಾರತದ ಕೈಜಾರುವಂತೆ ಕಾಣುತ್ತಿದೆ. ಈ ಟ್ರೋಫಿ ಉಳಿಸಿಕೊಳ್ಳಬೇಕಾದರೆ ಸಿಡ್ನಿಯಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ನಲ್ಲಿ ಭಾರತ ಗೆದ್ದು ಸರಣಿಯನ್ನು 2–2 ಸಮ ಮಾಡಿಕೊಳ್ಳಬೇಕು. ಆದರೆ ಆಸ್ಟ್ರೇಲಿಯಾ ಆಟಗಾರರ ರಣೋತ್ಸಾಹ ಮತ್ತು ಭಾರತದ ಆಟಗಾರರ ಪರದಾಟ ನೋಡಿದರೆ ಡ್ರಾ ಮಾಡುವುದೂ ದೊಡ್ಡ ಸಾಹಸವೆಂಬಂತೆ ಕಾಣುತ್ತಿದೆ.

ಆದರೆ ಸರಣಿಯ ನಿರ್ಣಯಕ್ಕಿಂತ ಹೆಚ್ಚಾಗಿ ಈ ಪಂದ್ಯವು ಇಬ್ಬರು ದಿಗ್ಗಜ ಆಟಗಾರರ– ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ– ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆ ಇದೆ. ಈ ಎರಡು ಮಹಾನ್ ಆಟಗಾರರು ತಮ್ಮ ವೃತ್ತಿಜೀವನದ ನಿರ್ಣಾಯಕ ಕಾಲಘಟ್ಟದಲ್ಲಿದ್ದಾರೆ. ಏರುತ್ತಿರುವ ವಯಸ್ಸು ಒಂದು ಕಡೆ, ಲಯಕ್ಕೆ ಸತತವಾಗಿ ಪರದಾಟ ಇನ್ನೊಂದು ಕಡೆ. ಇವೆರಡರ ಮಿಶ್ರಣ ಈ ಹಿಂದೆ ಹಲವು ಆಟಗಾರರ ಕ್ರಿಕೆಟ್ ಜೀವನ ಅಂತ್ಯಗೊಳಿಸಿದೆ. ತಮ್ಮ ಕ್ರಿಕೆಟ್ ಬದುಕಿನ ಸಂಧ್ಯಾಕಾಲದಲ್ಲಿರುವ ಕೊಹ್ಲಿ ಮತ್ತು ರೋಹಿತ್ ಈಗ ಅಂತಹದೇ ಪರಿಸ್ಥಿತಿಯಲ್ಲಿದ್ದಾರೆ.

38 ವರ್ಷ ವಯಸ್ಸಿನ ರೋಹಿತ್ ಮತ್ತು 36 ವರ್ಷ ವಯಸ್ಸಿನ ಕೊಹ್ಲಿ ಅವರ ದಾಖಲೆ ಇತರ ಆಟಗಾರರಿಗೆ ಅಸೂಯೆ ಹುಟ್ಟಿಸುವಂತಿದೆ. ಆದರೆ ದೀರ್ಘ ಕಾಲದಿಂದ ಇವರಿಬ್ಬರು ಲಯ ಕಂಡುಕೊಳ್ಳಲು ಪರದಾಡುತ್ತಿರುವುದರಿಂದ ತಂಡಕ್ಕೆ ಹೊರೆಯಂತೆ ಕಾಣುತ್ತಿದ್ದಾರೆ. ಈ ಮಾತು ಸ್ವಲ್ಪ ಅತಿ ಎನಿಸಿದರೂ ಕಟುಸತ್ಯ. ಸತತವಾಗಿ ವಿಫಲವಾಗುತ್ತಿರುವ ಸೂಪರ್ಸ್ಟಾರ್ ಆಟಗಾರರಿಂದಾಗಿ ಪ್ರತಿಭಾನ್ವಿತ ಆಟಗಾರ ಶುಭಮನ್ ಗಿಲ್ ಅಂಥ ಭವಿಷ್ಯದ ಬ್ಯಾಟರ್ ಬೆಂಚ್ನಲ್ಲಿ ಕುಳಿತುಕೊಳ್ಳಬೇಕಾಗಿದೆ. ಹೀಗಾಗಿ ಇವರು ತಂಡದಲ್ಲಿ ಮುಂದುವರಿಯಬೇಕೇ ಎಂಬ ಪ್ರಶ್ನೆ ಎದುರಾಗುತ್ತಿದೆ.

‘ಕೆಲವು ಫಲಿತಾಂಶಗಳು ನಾವು ಅಂದುಕೊಂಡ ರೀತಿ ಬಂದಿಲ್ಲ. ಇದು ನಿರಾಸೆ ಮೂಡಿಸಿದೆ. ನಾಯಕನಾಗಿ ನನಗೂ ಬೇಸರವಾಗಿದೆ. ಇದರಿಂದ ಮಾನಸಿಕ ನೆಮ್ಮದಿ ಕದಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ನಾವು ಇಲ್ಲಿಗೆ ಬಂದು ಯಶಸ್ಸಿಗಾಗಿ ನಡೆಸುವ ಪ್ರಯತ್ನಗಳು ಕೈಗೂಡದಿದ್ದಾಗ ಅದರಿಂದ ತೀವ್ರ ನಿರಾಸೆಯಾಗುತ್ತದೆ’ ಎಂದು ರೋಹಿತ್ ಸೋಮವಾರ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ರೋಹಿತ್ ಮತ್ತು ಕೊಹ್ಲಿ– ಇವರಿಬ್ಬರಲ್ಲಿ ಒಬ್ಬರು ಸೋಮವಾರ ಮಧ್ಯಾಹ್ನದ ಆಟದಲ್ಲಿ ಬೇರೂರಿ ಆಡಿದ್ದರೆ ಸರಣಿ ಜಯದ ಅವಕಾಶ ಜೀವಂತವಾಗಿ ಉಳಿಯುತ್ತಿತ್ತೇನೊ? ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಅವಕಾಶವೂ ಕ್ಷೀಣವಾಗುತ್ತಿರಲಿಲ್ಲ. ರೋಹಿತ್ ಪ್ರತಿ ಬಾರಿ ಬೇರೆ ಬೇರೆ ರೀತಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಕೊಹ್ಲಿ ಅವರ ಪರದಾಟವೂ ಅಷ್ಟೇ ಸಂಕೀರ್ಣವಾಗಿದೆ. ಯಾರ ಆಟ ಕಳಪೆ ಎಂದು ಹೇಳುವುದು ಕಷ್ಟ.

ಆಫ್ ಸ್ಟಂಪ್ ಆಚೆ ಹೋಗುವ ಎಸೆತ ಆಡುವ ಪ್ರಲೋಭನೆಯಿಂದ ಹೊರಬರಲು ಕೊಹ್ಲಿ ಅವರಿಗೆ ಕಷ್ಟವಾಗುತ್ತಿದೆ. ಇದು ಅವರ ಅಭಿಮಾನಿಗಳನ್ನು ತಬ್ಬಿಬ್ಬುಗೊಳಿಸಿದೆ. ಹಿಂದಿಗಿಂತ ಈಗ ಈ ದೌರ್ಬಲ್ಯ ಅವರನ್ನು ಪದೇ ಪದೇ ಕಾಡುತ್ತಿದೆ. ತಕ್ಷಣದ ಪರಿಹಾರವೂ ಕಾಣುತ್ತಿಲ್ಲ.

‘ಕೆಲವು ವಿಷಯಗಳ ಕಡೆ ತಂಡವಾಗಿ ನಾವು ಗಮನಹರಿಸಬೇಕಾಗಿದೆ. ವೈಯಕ್ತಿಕವಾಗಿ ನನ್ನ ಆಟದ ಕಡೆಯೂ ಸಹ’ ಎಂಬ ಮಾತನ್ನೂ ರೋಹಿತ್ ಹೇಳಿದ್ದಾರೆ. ‘ಇನ್ನೊಂದು ಪಂದ್ಯ ಉಳಿದಿದೆ. ನಾವು ಉತ್ತಮವಾಗಿ ಆಡಿದಲ್ಲಿ ಸರಣಿ 2–2 ರಲ್ಲಿ ಸಮನಾಗಲಿದೆ. ಇದು ನೆಮ್ಮದಿ ನೀಡಲಿದೆ ಎಂದು ಹೇಳಿದ್ದಾರೆ.

ರೋಹಿತ್ ಹಾಲಿ ಸರಣಿಯ 5 ಇನಿಂಗ್ಸ್ಗಳಿಂದ 31 ರನ್ ಗಳಿಸಿದ್ದಾರೆ. ಇದು ಬೂಮ್ರಾ ಗಳಿಸಿದ ವಿಕೆಟ್ಗಳಿಂತ ಒಂದು ಹೆಚ್ಚು ಅಷ್ಟೇ. ಪರ್ತ್ ಟೆಸ್ಟ್ನ ಎರಡನೇ ಇನಿಂಗ್ಸ್ನಲ್ಲಿ ಅಜೇಯ ಶತಕ ಬಾರಿಸಿದ್ದನ್ನು ಬಿಟ್ಟರೆ, ಉಳಿದ ಆರು ಇನಿಂಗ್ಸ್ಗಳಿಂದ ವಿರಾಟ್ ಕೊಹ್ಲಿ ಗಳಿಸಿದ್ದು 67 ರನ್ಗಳನ್ನಷ್ಟೇ. ಬೇರೆ ಆಟಗಾರ ಈ ರೀತಿ ವಿಫಲರಾಗಿದ್ದಲ್ಲಿ ಬೆಂಚ್ನಲ್ಲಿ ಕುಳಿತುಕೊಳ್ಳಬೇಕಾಗುತಿತ್ತು. ಆದರೆ ತಂಡ ಇವರಿಬ್ಬರನ್ನು ಅತಿಯಾಗಿ ಅವಲಂಬಿಸಿರುವ ಕಾರಣ ಕಠಿಣ ನಿರ್ಧಾರ ಕೈಗೊಳ್ಳಲು ವಿಳಂಬವಾಗುತ್ತಿದೆ. ಆದರೆ ತಂಡದ ಹಿತಾಸಕ್ತಿ ಜೊತೆ ಎಷ್ಟರವರೆಗೆ ರಾಜಿಯಾಗಬೇಕು ಎಂಬುದು ಪ್ರಶ್ನೆ.

ಭಾರತದ ಮುಂದಿನ ಟೆಸ್ಟ್ ಸರಣಿಯನ್ನು ಜೂನ್ನಲ್ಲಿ ಇಂಗ್ಲೆಂಡ್ನಲ್ಲಿ ಆಡಲಿದೆ. ಭಾರತಲ್ಲಿ 10 ತಿಂಗಳು ಯಾವುದೇ ಟೆಸ್ಟ್ ಸರಣಿಯಿಲ್ಲ. ಹೀಗಾಗಿ ಹಾಲಿ ಸರಣಿಯ ಅಂತಿಮ ಟೆಸ್ಟ್ನಲ್ಲಿ ಇವರಿಬ್ಬರು ಮತ್ತೆ ವಿಫಲವಾದಲ್ಲಿ ಅದು ಆಯ್ಕೆಗಾರರು ಕಠಿಣ ನಿರ್ಧಾರಕ್ಕೆ ಕೈಗೊಳ್ಳಲು ಪ್ರೇರೇಪಿಸಬಹುದು. ಹೀಗಾಗಿ ಸಿಡ್ನಿಯ ಪಂದ್ಯ ಕೇವಲ ಟೆಸ್ಟ್ ಮಾತ್ರವಲ್ಲ, ಇವರಿಬ್ಬರ ಪಾಲಿಗೆ ತಿರುವು ನೀಡಬಲ್ಲ ಪಂದ್ಯ. ಅವರು ಮರಳಿ ಲಯಕ್ಕೆ ಬರುವರೇ ಇಲ್ಲವೇ ಗೌರವಯುತವಾಗಿ ವಿದಾಯ ಹೇಳುವರೇ ಎಂಬುದನ್ನು ಮುಂದಿನ ಪಂದ್ಯ ನಿರ್ಧರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.