ಬೆಂಗಳೂರು: ಇನ್ನೆರಡು ದಿನ ಕಳೆದರೆ ಬರೋಬ್ಬರಿ ಒಂದು ವರ್ಷವಾಗುತ್ತದೆ ಮಹೇಂದ್ರಸಿಂಗ್ ಧೋನಿ ಕ್ರಿಕೆಟ್ ಕಣದಿಂದ ದೂರ ಉಳಿದು.

ಕಳೆದ 12 ತಿಂಗಳಲ್ಲಿ ಅವರ ವಿಕೆಟ್ ಕೀಪಿಂಗ್, ಬ್ಯಾಟಿಂಗ್ ಮತ್ತು ಸಹ ಆಟಗಾರರಿಗೆ 'ಕ್ಲಾಸ್'ತೆಗೆದುಕೊಳ್ಳುವ ಪರಿಯನ್ನು ಯಾರೂ ನೋಡಿಲ್ಲ. 2019ರ ಜುಲೈ 9ರಂದು ಓಲ್ಡ್ಟ್ರಾಫರ್ಡ್ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ಅವರು ರನೌಟ್ ಆಗುವುದರೊಂದಿಗೆ ಭಾರತದ ಗೆಲುವಿನ ಕನಸು ಕಮರಿತ್ತು. ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಿತ್ತು.

ಆದರೆ ಅದಾದ ನಂತರ ಧೋನಿ ಮತ್ತೆ ಭಾರತ ತಂಡದಲ್ಲಿ ಆಡದಿದ್ದರೂ ಅವರನ್ನು ಯಾರೂ ಮರೆತಿಲ್ಲ ಎನ್ನುವುದಕ್ಕೆ ಮಂಗಳವಾರ ಸಾಮಾಜಿಕ ಜಾಲತಾಣಗಳನ್ನು ನೋಡಿದವರಿಗೆ ಅರಿವಾಗಿರಬಹುದು. ಅವರ 39ನೇ ಜನ್ಮದಿನಕ್ಕೆ ಬೆಳಿಗ್ಗೆಯಿಂದಲೇ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.

ಅದರಲ್ಲೂ ಟ್ವಿಟರ್ ಮತ್ತು ಗೂಗಲ್ ನಲ್ಲಿ ಭರ್ಜರಿ ಟ್ರೆಂಡಿಂಗ್ ಕೂಡ ಆಗ್ತಾ ಇದೆ. ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ಗಳೆರಡನ್ನೂ ಗೆದ್ದುಕೊಟ್ಟ ನಾಯಕ ಧೋನಿಯ ಚರಿಷ್ಮಾ ಎಂತಹದ್ದು ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಅದಕ್ಕೆ ಕಾರಣವೆಂದರೆ ಕ್ರಿಕೆಟ್ನಲ್ಲಿ ಅವರಿಗೆ ಇದ್ದ ಬದ್ಧತೆ ಒಂದು ಕಾರಣವಾದರೆ, ಆಟದಂಗಳದಿಂದ ಹೊರಗೆ ಅವರು ತಮ್ಮನ್ನು ಗುರುತಿಸಿಕೊಂಡಿರುವ ರೀತಿ ಮತ್ತೊಂದು.

ಮಧ್ಯಮವರ್ಗದಲ್ಲಿ ಜನಿಸಿದ ಮಹಿಗೆ ಬಾಲ್ಯದಲ್ಲಿ ಫುಟ್ಬಾಲ್ ಅಂದರೆ ಇಷ್ಟ. ಆದರೆ ಕ್ರಿಕೆಟ್ ಕೋಚ್ ಕೇಶವ್ ಬ್ಯಾನರ್ಜಿಯವರಿಂದಾಗಿ ಧೋನಿ ಕ್ರಿಕೆಟಿಗನಾದರು. ಅಲ್ಲಿಂದ ಅವರು ಬೆಳೆದು ಬಂದ ಪರಿಯು 'ಎಂ.ಎಸ್. ಧೋನಿ ಅನ್ಟೋಲ್ಡ್ ಸ್ಟೋರಿ'ಎಂಬ ಸೂಪರ್ ಹಿಟ್ ಹಿಂದಿ ಚಿತ್ರವಾಯಿತು. ಸರಿಸುಮಾರು 600 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇವತ್ತು ಧೋನಿ ಹೊಂದಿದ್ದಾರೆ. ಇಷ್ಟೆಲ್ಲ ಇದ್ದರೂ, ತಾರಾ ಕ್ರಿಕೆಟಿಗನಾದರೂ ತಮ್ಮ ತವರೂರು ರಾಂಚಿಯಲ್ಲಿ ಬಾಲ್ಯದ ಗೆಳೆಯರೊಂದಿಗೆ ಬೈಕ್ ಮೇಲೆ ಸುತ್ತಾಡುತ್ತಾರೆ. ತಮ್ಮ ಪ್ರಥಮ ಕೋಚ್ ಕೇಶವ್ ಬ್ಯಾನರ್ಜಿ, ಗೆಳೆಯ ಚೋಟು ಮತ್ತಿತರರೊಂದಿಗೆ ಮೂರ್ನಾಲ್ಕು ತಾಸು ಬ್ಯಾಡ್ಮಿಂಟನ್ ಆಡುತ್ತಾರೆ. ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುತ್ತಾರೆ.

ಲಾಕ್ಡೌನ್ ಸಮಯದಲ್ಲಿ ಅವರು ತಮ್ಮ ಫಾರ್ಮ್ಹೌಸ್ನಲ್ಲಿ ಮಗಳು ಜೀವಾ, ಪತ್ನಿ ಸಾಕ್ಷಿಸಿಂಗ್ ಧೋನಿ ಮತ್ತು ತಮ್ಮ ಮುದ್ದಿನ ಸಾಕುನಾಯಿಗಳೊಂದಿಗಿನ ಹಲವು ಸಂತಸದ ಮತ್ತು ಅಪರೂಪದ ವಿಡಿಯೋ, ಚಿತ್ರಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.

ಹೋದ ವರ್ಷ ಇಂಗ್ಲೆಂಡ್ನಿಂದ ಮರಳಿದ ನಂತರವೇ ಅವರು ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸುವರು ಎಂಬ ಮಾತುಗಳು ಕೇಳಿಬಂದಿದ್ದವು. ಆಗ ನಡೆದ ಕೆಲವು ಸರಣಿಗಳಿಂದ ಅವರು ಹಿಂದೆ ಸರಿದರು, ಇನ್ನೂ ಕೆಲವು ಸರಣಿಗಳಿಂದ ಆಯ್ಕೆದಾರರು ಅವರನ್ನು ಪರಿಗಣಿಸಲಿಲ್ಲ ಎಂದು ವರದಿಗಳಾಗದವು. ಆದರೂ ಅವರು ಸದಾ ಸುದ್ದಿಯಲ್ಲಿದ್ದರು. ಧೋನಿ, ಭಾರತೀಯ ಸೇನೆಯ ಪ್ಯಾರಾಶೂಟ್ ವಿಭಾಗದಲ್ಲಿ ಗೌರವ ಲೆಫ್ಟ್ನೆಂಟ್ ಕರ್ನಲ್ ಆಗಿದ್ದಾರೆ. ಹೋದ ಜುಲೈ 31ರಿಂದ ಆಗಸ್ಟ್ 15ರವರೆಗೆ ಕಾಶ್ಮೀರ ಕಣಿವೆಯಲ್ಲಿ ಅವರು ಸೇನೆಯೊಂದಿಗೆ ಕಾರ್ಯನಿರ್ವಹಿಸಿಯೂ ಬಂದರು.

ಮರಳಿದ ನಂತರವರೂ ಅವರು ಕ್ರಿಕೆಟ್ ಬ್ಯಾಟ್ ಹಿಡಿಯಲಿಲ್ಲ. ಕೈಗವಸು ಧರಿಸಲಿಲ್ಲ. ಒಮ್ಮೆ ಪೇಟಿಂಗ್ ಬ್ರಷ್ ಹಿಡಿದು ವರ್ಣಕಲೆ ರಚಿಸಿದರು. ತಮ್ಮ ವಾಹನಗಳ 'ಖಜಾನೆ'ಯನ್ನು ಮತ್ತಷ್ಟು ಶ್ರೀಮಂತಗೊಳಿಸಿದರು. ಇದೀಗ ಅವರ ಸಂಗ್ರಹಕ್ಕೆ ಟ್ರ್ಯಾಕ್ಟರ್ ಕೂಡ ಸೇರ್ಪಡೆಯಾಗಿದೆ.ಹೋದ ಮಾರ್ಚ್ನಲ್ಲಿ ಅವರು ತಮ್ಮ ಕ್ರಿಕೆಟ್ ಕಿಟ್ನ ದೂಳು ಕೊಡವಿ ಚೆನ್ನೈಗೆ ತೆರಳಿದ್ದರು.

ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗಲಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಅಭ್ಯಾಸ ಆರಂಭಿಸಿದ್ದರು. ಅವರು ನೆಟ್ಸ್ನಲ್ಲಿ ತಾಲೀಮು ಮಾಡುವುದನ್ನು ನೋಡಲೇಂದೇ ನೂರಾರು ಜನ ಜಮಾಯಿಸುತ್ತಿದ್ದರು. ತಮಿಳಿಗರಿಗೆ ತಮ್ಮ ನೆಚ್ಚಿನ ’ತಾಲಾ‘ ಆಡಲಿರುವ ಬಹುತೇಕ ಕೊನೆಯ ಟೂರ್ನಿ ಎಂದು ಅವರಿಗೆ ಅನಿಸಿರಬೇಕು.

ಆದರೆ, ಐಪಿಎಲ್ನಲ್ಲಿ ಅವರ ಸಾಮರ್ಥ್ಯ ಪ್ರದರ್ಶನದ ನಂತರ ಟಿ20 ವಿಶ್ವಕಪ್ ಟೂರ್ನಿಗೆ ಹೋಗುವ ಭಾರತ ತಂಡಕ್ಕೆ ಆಯ್ಕೆ ಮಾಡುವ ಕುರಿತು ಬಿಸಿಸಿಐ ಯೋಚಿಸಿತ್ತು ಎಂಬುದೇನೂ ಗುಟ್ಟಲ್ಲ. ಅವರು ತಂಡದಲ್ಲಿದ್ದರೆ ನೂರಾನೆ ಬಲ ಎಂಬುದನ್ನು ಸ್ವತಃ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಸೇರಿದಂತೆ ಹಲವು ಆಟಗಾರರು ಒಪ್ಪಿಕೊಳ್ಳುತ್ತಾರೆ. ಅವರ ತಣ್ಣನೆಯ ಮನಸ್ಥಿತಿ ಅದಕ್ಕೆ ಕಾರಣ. ’ಸವತೆಕಾಯಿಯಷ್ಟೇ ತಂಪು ವ್ಯಕ್ತಿತ್ವ. ಯುಗಪುರುಷನಂತೆ ನೆನಪಿನಲ್ಲಿ ಉಳಿಯುವ ನಾಯಕನಿಗೆ ಜನ್ದದಿನದ ಶುಭಾಶಯಗಳು‘ ಎಂದು ಸಚಿನ್ ತೆಂಡೂಲ್ಕರ್ ತಮ್ಮ ಹಂಡ್ರೆಡ್ ಎಂಬಿ ಆ್ಯಪ್ನಲ್ಲಿ ಶುಭಹಾರೈಸಿರುವುದು ಧೋನಿ ವ್ಯಕ್ತಿತ್ವಕ್ಕೆ ಕೈಗನ್ನಡಿ.

ಆದರೆ ಮಾರ್ಚ್ ಮಧ್ಯದಲ್ಲಿ ಕೊರೊನಾ ವೈರಸ್ ಪ್ರಸರಣ ಆರಂಭವಾಗಿದ್ದರಿಂದ ಐಪಿಎಲ್ ಸೇರಿದಂತೆ ಎಲ್ಲ ಕ್ರಿಕೆಟ್ ಟೂರ್ನಿಗಳನ್ನೂ ಮುಂದೂಡಲಾಯಿತು. ಕ್ರಿಕೆಟ್ ಚಟುವಟಿಕೆಗಳು ಸ್ತಬ್ಧವಾದವು. ಈ ನಡುವೆಯೇ ಧೋನಿ ಜನ್ಮದಿನ ಬಂದಿದೆ. ತಮ್ಮ ಫಾರ್ಮ್ಹೌಸ್ನಲ್ಲಿಯೇ ಫಿಟ್ನೆಸ್ ಕಾಪಾಡಿಕೊಳ್ಳುತ್ತ ವೃತ್ತಿಜೀವನದ ಮತ್ತೊಂದು ಇನಿಂಗ್ಸ್ಗೆ ಮಹಿ ಸಿದ್ಧವಾಗುತ್ತಿದ್ದಾರೆ. ಅವರು ಆನ್ಲೈನ್ ಮೂಲಕ ತರಬೇತಿ ಕೂಡ ನೀಡಲಿದ್ದಾರೆ ಎಂದು ಈಚೆಗೆ ಕೆಲವು ವೆಬ್ಸೈಟ್ಗಳಲ್ಲಿ ವರದಿಯಾಗಿತ್ತು. ಅವರು ಕ್ರಿಕೆಟ್ ಆಟದಿಂದ ಇಂದಲ್ಲ ನಾಳೆ ನಿವೃತ್ತಿಯಾಗುತ್ತಾರೆ. ಕೋಚ್ ಆಗಿ ಮತ್ತಷ್ಟು ಪ್ರತಿಭಾವಂತ ಆಟಗಾರರನ್ನು ತರಬೇತುಗೊಳಿಸಿ ದೇಶಕ್ಕೆ ಕಾಣಿಕೆ ಕೊಡುವ ಸಾಮರ್ಥ್ಯವಂತೂ ಅವರಿಗೆ ಇದೆ.

'ಹ್ಯಾಪಿ ಬರ್ತಡೆ..ಎಂ.ಎಸ್. ಧೋನಿ...'

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.