ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಹ್ವಾಗ್ Father's Day ಸಂದೇಶ: ಮಾರುಕಟ್ಟೆಯಲ್ಲಿ ಎಲ್ಲವೂ ಸಿಗುತ್ತವೆ, ಆದರೆ...

ಅಕ್ಷರ ಗಾತ್ರ

ನವದೆಹಲಿ:ಅಪ್ಪಂದಿರ ದಿನ (Father's Day) ಪ್ರಯುಕ್ತ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಿಭಿನ್ನವಾಗಿ ಟ್ವೀಟ್ ಮಾಡುವ ಮೂಲಕ ತಂದೆಯ ಪ್ರೀತಿಯ ಬಗ್ಗೆ ವಿವರಿಸಿದ್ದಾರೆ.

‘ಮಾರುಕಟ್ಟೆಯಲ್ಲಿ ಎಲ್ಲವೂ ಸಿಗುತ್ತವೆ. ಆದರೆ, ತಂದೆ–ತಾಯಿಯ ಪ್ರೀತಿ ಮಾತ್ರ ಸಿಗಲಾರದು!’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ ಇಬ್ಬರು ಮಕ್ಕಳ ಜತೆಗಿರುವ ಫೊಟೊ ಹಾಗೂ ತಮ್ಮ ಕ್ರಿಕೆಟ್ ಜೀವನದ ಸಾಧನೆಯನ್ನು ಪತ್ರಿಕೆಯಲ್ಲಿ ಓದುತ್ತಿರುವ ತಂದೆಯ ಫೋಟೊವನ್ನು ಪ್ರಕಟಿಸಿದ್ದಾರೆ.

ಮತ್ತೊಬ್ಬ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹ ತಂದೆಯೇ ನನ್ನ ಹೀರೋ ಎಂದು ಟ್ವೀಟ್ ಮಾಡಿದ್ದಾರೆ.

‘ಪ್ರತಿಯೊಂದು ಮಗುವಿನ ಹೀರೋ ತಂದೆಯೇ. ನಾನೂ ಅದಕ್ಕೆ ಹೊರತಲ್ಲ. ತಂದೆ ಏನು ಕಲಿಸಿದ್ದರು ಎಂಬುದನ್ನು, ಅವರ ಅಪಾರವಾದ ಪ್ರೀತಿಯನ್ನು ಹಾಗೂ ನನ್ನದೇ ದಾರಿಯನ್ನು ಕಂಡುಕೊಳ್ಳಲು ನನಗೆ ನೀಡಿದ ಬೆಂಬಲವನ್ನು ಇಂದಿಗೂ ನಾನು ನೆನಪಿಸಿಕೊಳ್ಳುತ್ತೇನೆ’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT