ಆಕ್ಷೇಪಾರ್ಹ ಹೇಳಿಕೆ: ರಾಹುಲ್‌, ಹಾರ್ದಿಕ್‌ ವಿರುದ್ಧ ಹರಭಜನ್ ಕಿಡಿ

7

ಆಕ್ಷೇಪಾರ್ಹ ಹೇಳಿಕೆ: ರಾಹುಲ್‌, ಹಾರ್ದಿಕ್‌ ವಿರುದ್ಧ ಹರಭಜನ್ ಕಿಡಿ

Published:
Updated:
Prajavani

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಅವರ ವಿರುದ್ಧ ಹಿರಿಯ ಕ್ರಿಕೆಟಿಗ ಹರಭಜನ್ ಸಿಂಗ್ ಕಿಡಿಕಾರಿದ್ದಾರೆ. ರಾಹುಲ್ ಮತ್ತು ಹಾರ್ದಿಕ್ ಅವರು ಮಹಿಳೆಯರ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳನ್ನು ಹರಭಜನ್ ಟೀಕಿಸಿದ್ದಾರೆ.

‘ಇಂತಹ ವಿಷಯಗಳನ್ನು ಸ್ನೇಹಿತರ ವಲಯದಲ್ಲಿಯೂ ಚರ್ಚಿಸುವುದಿಲ್ಲ. ಆದರೆ ಇವರು ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಜನರು ಕ್ರಿಕೆಟಿಗರ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ? ಹರಭಜನ್ , ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ ಕೂಡ ಹೀಗೆನಾ ಎನ್ನುವುದಿಲ್ಲವೇ?’ ಎಂದು ‘ಇಂಡಿಯಾ ಟುಡೆ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ತಂಡದ ಸಂಸ್ಕೃತಿಯ ಬಗ್ಗೆ ಹಾರ್ದಿಕ್ ಮಾತನಾಡುತ್ತಾರೆ. ಆದರೆ ಅವರು ಎಷ್ಟು ಕಾಲದಿಂದ ತಂಡದಲ್ಲಿದ್ದಾರೆ. ಕೆಲವೇ ದಿನಗಳನ್ನು ಅವರು ತಂಡದಲ್ಲಿ ಕಳೆದಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅವರನ್ನು ಅಮಾನತು ಮಾಡಿರುವುದು ಸರಿಯಾದ ಕ್ರಮ. ಬಿಸಿಸಿಐ ಸೂಕ್ತ ಕ್ರಮ ತೆಗೆದುಕೊಂಡಿದೆ. ಮಂಡಳಿಯಿಂದ ನಾನು ಇದನ್ನೇ ನಿರೀಕ್ಷಿಸಿದ್ದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !