ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಐಪಿಎಲ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಆರ್‌ಸಿಬಿಯ ಹರ್ಷಲ್ ಪಟೇಲ್

Last Updated 6 ಅಕ್ಟೋಬರ್ 2021, 16:30 IST
ಅಕ್ಷರ ಗಾತ್ರ

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಭಾರತೀಯ ಬೌಲರ್ ಎಂಬ ಕೀರ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬಲಗೈ ವೇಗದ ಬೌಲರ್ ಹರ್ಷಲ್ ಪಟೇಲ್ ಭಾಜನರಾಗಿದ್ದಾರೆ.

ಅಬುಧಾಬಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮೂರು ವಿಕೆಟ್ ಗಳಿಸಿದ ಹರ್ಷಲ್, ಈ ವಿಶಿಷ್ಟ ದಾಖಲೆ ಬರೆದರು.

ಇದುವರೆಗೆ ಆಡಿರುವ 13 ಪಂದ್ಯಗಳಲ್ಲೇ ಹರ್ಷಲ್ ಪಟೇಲ್ ಒಟ್ಟು 29 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಜಸ್‌ಪ್ರೀತ್ ಬೂಮ್ರಾ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. 2020ರಲ್ಲಿ ಬೂಮ್ರಾ 27 ವಿಕೆಟ್‌ಗಳನ್ನು ಕಬಳಿಸಿದ್ದರು. ಇನ್ನು 2017ರಲ್ಲಿ ಭುವನೇಶ್ವರ್ ಕುಮಾರ್ 26 ವಿಕೆಟ್ ಗಳಿಸಿದ್ದರು.

ಹಾಗೆಯೇ ಐಪಿಎಲ್ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಹರ್ಷಲ್ ಪಟೇಲ್, ಮೂರನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ಅವರನ್ನು ಹಿಂದಿಕಿದ್ದಾರೆ. 2011ರಲ್ಲಿ ಮಾಲಿಂಗ 28 ವಿಕೆಟ್‌ಗಳನ್ನು ಕಬಳಿಸಿದ್ದರು.

ಪ್ರಸ್ತುತ ಪಟ್ಟಿಯನ್ನು ಡ್ವೇನ್ ಬ್ರಾವೊ ಮುನ್ನಡೆಸುತ್ತಿದ್ದು, 2013ರಲ್ಲಿ ಒಟ್ಟು 32 ವಿಕೆಟ್ ಕಬಳಿಸಿದ್ದರು. ಅತ್ತ ಕಗಿಸೊ ರಬಾಡ 2020ರಲ್ಲಿ 30 ವಿಕೆಟ್ ಪಡೆದಿದ್ದರು.

ಐಪಿಎಲ್‌ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಭಾರತೀಯ ಬೌಲರ್‌ಗಳು:
ಹರ್ಷಲ್ ಪಟೇಲ್: 29* ವಿಕೆಟ್ (2021)
ಜಸ್‌ಪ್ರೀತ್ ಬೂಮ್ರಾ: 27 ವಿಕೆಟ್ (2020)
ಭುವನೇಶ್ವರ್ ಕುಮಾರ್: 26 ವಿಕೆಟ್ (2017)

ಐಪಿಎಲ್‌ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳು:
ಡ್ವೇನ್ ಬ್ರಾವೊ: 32 ವಿಕೆಟ್ (2013)
ಕಗಿಸೊ ರಬಾಡ: 30 ವಿಕೆಟ್ (2020)
ಹರ್ಷಲ್ ಪಟೇಲ್: 29* ವಿಕೆಟ್ (2021)
ಲಸಿತ್ ಮಾಲಿಂಗ: 28 ವಿಕೆಟ್ (2011)
ಜೇಮ್ಸ್ ಫಾಲ್ಕನರ್: 28 ವಿಕೆಟ್ (2013)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT