ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ

ಐಪಿಎಲ್ ಕ್ರಿಕೆಟ್‌ 2023: ಲಖನೌ ಸೂಪರ್ ಜೈಂಟ್ಸ್‌ ತಂಡದ ಸಿದ್ಧತೆ
Last Updated 29 ಮಾರ್ಚ್ 2023, 18:39 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯು ಅಗ್ನಿಪರೀಕ್ಷೆಯ ಕಣವಾಗಲಿದೆ.

ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಅವರು ಹೋದ ಬಾರಿಯ ಐಪಿಎಲ್‌ನಲ್ಲಿ ಬ್ಯಾಟರ್ ಆಗಿ ಯಶಸ್ವಿಯಾಗಿದ್ದರು. ಆದರೆ ನಾಯಕ ತ್ವದ ಕೌಶಲದಲ್ಲಿ ಹಿಂದು ಳಿದಿದ್ದರು.

ಹೋದ ವರ್ಷ ಲಖನೌ ತಂಡಕ್ಕೆ ಬರುವ ಮುನ್ನ ಅವರು ಪಂಜಾಬ್ ಕಿಂಗ್ಸ್‌ ತಂಡಕ್ಕೆ ನಾಯಕರಾಗಿದ್ದರು. ಆ ತಂಡವೂ ಪ್ರಶಸ್ತಿ ಗೆದ್ದಿರಲಿಲ್ಲ. ಲಖನೌ ತಂಡವು ಹೋದಬಾರಿ ಲೀಗ್ ಹಂತದಲ್ಲಿ ಮೂರನೇ ಸ್ಥಾನ ಪಡೆದಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಸೋತಿತ್ತು. ಆ ಆವೃತ್ತಿಯಲ್ಲಿ ಅವರು 15 ಪಂದ್ಯಗಳಿಂದ 616 ರನ್ ಗಳಿಸಿ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು.

ಅವರ ಬಳಗದಲ್ಲಿ ವೇಗಿ ಆವೇಶ್ ಖಾನ್ 13 ಪಂದ್ಯಗಳಲ್ಲಿ ಆಡಿ 18 ವಿಕೆಟ್ ಗಳಿಸಿದರು. ಮೊಹಸೀನ್ ಖಾನ್ 14 ವಿಕೆಟ್ ಪಡೆದಿದ್ದರು. ಆದರೆ ಭುಜದ ಗಾಯದಿಂದಾಗಿ ಮೊಹಸೀನ್ ಈ ಬಾರಿ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ವಿಕೆಟ್‌ಕೀಪರ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಕೂಡ ಮೊದಲ ಎರಡು ಪಂದ್ಯಗಳಲ್ಲಿ ಆಡುವುದಿಲ್ಲ. ಅವರು ಏಕದಿನ ವಿಶ್ವಕಪ್ ಕ್ವಾಲಿಫೈಯರ್‌ ನಲ್ಲಿ ತಮ್ಮ ದೇಶದ ತಂಡವನ್ನು
ಪ್ರತಿನಿಧಿಸಲಿದ್ದಾರೆ.

ನಿಕೋಲಸ್ ಪೂರನ್, ಆಲ್‌ರೌಂಡರ್‌ಗಳಾದ ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಕೆ.ಗೌತಮ್, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯಿನಿಸ್, ಕೈಲ್ ಮೇಯರ್ಸ್ ಮತ್ತು ರೊಮೆರಿಯೊ ಶೇಫರ್ಡ್, ಸ್ಪಿನ್ನರ್ ರವಿ ಬಿಷ್ಣೋಯಿ ಅವರೊಂದಿಗೆ ರಾಹುಲ್ ಟೂರ್ನಿಯಲ್ಲಿ ಜಯದ ಆರಂಭ ಮಾಡುವ ಭರವಸೆಯಲ್ಲಿದ್ದಾರೆ.

ಜನರ ನಿರೀಕ್ಷೆ ಸಹಜ: ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ನಾಯಕನೆಂಬ ಹೆಗ್ಗಳಿಕೆ ರೋಹಿತ್ ಶರ್ಮಾ ಅವರದ್ದು. ಅವರ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಐದು ಸಲ ಚಾಂಪಿಯನ್ ಆಗಿದೆ. ಆದರೂ ಪ್ರತಿವರ್ಷವೂ ಪ್ರಶಸ್ತಿ ಗೆಲ್ಲಬೇಕೆಂಬ ಅಭಿಮಾನಿಗಳ ಅಪಾರವಾದ ನಿರೀಕ್ಷೆಯು ಸಹಜ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ತಂಡವು ಕಣಕ್ಕಿಳಿಯುವಾಗ ಜನರಿಂದ ಅಪಾರವಾದ ನಿರೀಕ್ಷೆಯುವ ಸಹಜವಾಗಿಯೇ ಇರುತ್ತದೆ. ಹಲವು ವರ್ಷಗಳಿಂದ ಆಡುತ್ತಿರುವುದರಿಂದ ಫಲಿತಾಂಶದ ಕುರಿತು ಒತ್ತಡ ಹೆಚ್ಚಾಗಿ ಇಲ್ಲ. ಆದರೆ ಅಭಿಮಾನಿಗಳ ನಿರೀಕ್ಷೆ ಅರಿವು ಇದೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಹೇಳಿದರು.

‘ನಮ್ಮ ಉದ್ದೇಶವೂ ಚೆನ್ನಾಗಿ ಆಡಬೇಕು ಹಾಗೂ ಟ್ರೋಫಿ ಗೆಲ್ಲಬೇಕು ಎಂಬುದೇ ಇರುತ್ತದೆ. ಆದರೆ ಆ ಯೋಚನೆಯಿಂದಲೇ ಒತ್ತಡ ಹೆಚ್ಚು ವುದನ್ನು ತಪ್ಪಿಸಿಕೊಳ್ಳಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT