ಶುಕ್ರವಾರ, ಜೂನ್ 18, 2021
25 °C

ಗೋಕರ್ಣ ಬೀಚ್‌ನಲ್ಲಿ ಕ್ರಿಕೆಟ್‌: ಫೇಸ್‌ಬುಕ್‌ ಪುಟದಲ್ಲಿ ಚಿತ್ರ ಹಂಚಿಕೊಂಡ ಐಸಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಇಲ್ಲಿನ ಕುಡ್ಲೆ ಬೀಚ್‌ನಲ್ಲಿ ಯುವಕರು ಕ್ರಿಕೆಟ್‌ ಆಡುತ್ತಿರುವ ಚಿತ್ರವನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ತನ್ನ ಅಧಿಕೃತ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿದ್ದು, ಉತ್ತರ ಕನ್ನಡದ ಯುವಕರ ಖುಷಿ ಇಮ್ಮಡಿಸಿದೆ.

ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಬಾಂಗ್ಲಾದೇಶ ಮೂಲದ ಪರಾಗ್‌ ಸರ್ಕೆರ್‌ ಎಂಬ ಫೋಟೊಗ್ರಾಫರ್‌ ಈ ಫೋಟೊ ಕ್ಲಿಕ್ಕಿಸಿದ್ದಾರೆ. ಗೋಕರ್ಣದಲ್ಲಿ ಮೈದಾನವಿಲ್ಲದ ಕಾರಣ ಜನ ಮನರಂಜನೆಗಾಗಿ ಬೀಚ್‌ನಲ್ಲಿ ಕ್ರಿಕೆಟ್‌ ಆಡುವುದು ಸಾಮಾನ್ಯ. ಐಸಿಸಿ ಚಿತ್ರ ಹಂಚಿಕೊಂಡ ಬಳಿಕ ಇಲ್ಲಿನ ಯುವಕರು ಪುಳಕಿತಗೊಂಡಿದ್ದಾರೆ.

ಇದನ್ನೂ ಓದಿ: ಕಾರ್ಕಳ ಯುವತಿಯ ಕವರ್‌ಡ್ರೈವ್‌ ಜಗತ್ತಿನಾದ್ಯಂತ ವೈರಲ್‌!

ಸೋಮವಾರ ಸಂಜೆ ವೇಳೆಗೆ 24 ಸಾವಿರ ಜನ ಈ ಫೋಟೊ ಲೈಕ್ ಮಾಡಿದ್ದು, 381 ಕಾಮೆಂಟ್‌ ಮಾಡಿದ್ದಾರೆ. 253 ಜನ ಹಂಚಿಕೊಂಡಿದ್ದಾರೆ. ಈ ಫೋಟೊ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಕ್ರಿಕೆಟ್‌ ಪ್ರೇಮಿ ನಿಂಗರಾಜ ಗಾಣಿಗೇರ ಎಂಬುವರು ‘ಗೋಕರ್ಣ ಬೀಚ್‌ ಅತ್ಯಂತ ಸುಂದರ ತಾಣ. ಇಲ್ಲಿ ಕ್ರಿಕೆಟ್ ಆಡುವುದು ತುಂಬಾ ಖುಷಿಕೊಡುತ್ತದೆ’ ಎಂದು ಬರೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು