ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆ: ಸರ್ ಜಡೇಜ 50!

Last Updated 27 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಸತತ ನಾಲ್ಕು ವರ್ಷಗಳಿಂದ ಶ್ರೇಷ್ಠ ಕ್ರಿಕೆಟ್ ಆಲ್‌ರೌಂಡರ್‌ಗಳಿಗೆ ಪೈಪೋಟಿ ಒಡ್ಡುತ್ತಿರುವ ಹೆಗ್ಗಳಿಕೆ ಭಾರತದ ರವೀಂದ್ರ ಜಡೇಜ ಅವರದ್ದು. ಐಸಿಸಿಯ ಟೆಸ್ಟ್ ಕ್ರಿಕೆಟ್‌ ಶ್ರೇಯಾಂಕದಲ್ಲಿ ಅಗ್ರ ನಾಲ್ವರಲ್ಲಿ ರಾರಾಜಿಸುತ್ತಿದ್ದಾರೆ.

ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್‌, ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ ಮತ್ತು ಬಾಂಗ್ಲಾದ ಶಕೀಬ್ ಅಲ್ ಹಸನ್ ಅವರೊಂದಿಗೆ ನಿಕಟ ಪೈಪೋಟಿ ಇವರದ್ದು. ಬ್ಯಾಟಿಂಗ್ (46.29) ಮತ್ತು ಬೌಲಿಂಗ್ (24.97) ಇವರೆಲ್ಲರಿಗಿಂತಲೂ ಹೆಚ್ಚಿನ ಸರಾಸರಿ ಹೊಂದಿದ್ದಾರೆ.

ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲುಗಲ್ಲು ಮುಟ್ಟಿದ್ದಾರೆ. ಅವರು ಮೆಲ್ಬರ್ನ್‌ನಲ್ಲಿ 50ನೇ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ. ಹೋದ ವಾರ ಅಡಿಲೇಡ್‌ನಲ್ಲಿ ನಡೆದಿದ್ದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಅವರು ಆಡಲಿಲ್ಲ. ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯ ಪಂದ್ಯದಲ್ಲಿ ಅವರ ಹೆಲ್ಮೆಟ್‌ಗೆ ಚೆಂಡು ಬಡಿದ ಕಾರಣ ಕನ್‌ಕಷನ್‌ ನಿಯಮದಂತೆ ಚಿಕಿತ್ಸೆಗೊಳಗಾದರು. ಅವರು ತಲೆಗೆ ಪೆಟ್ಟು ತಿಂದಿದ್ದು ಕೂಡ ತಮ್ಮ 50ನೇ ಟಿ20 ಪಂದ್ಯದಲ್ಲಿ!

ಭಾನುವಾರ ಮೆಲ್ಬರ್ನ್‌ನಲ್ಲಿ ಶತಕ ಬಾರಿಸಿದ ಅಜಿಂಕ್ಯ ರಹಾನೆಯೊಂದಿಗೆ ಜೊತೆಯಾಟವಾಡಿದ ಜಡೇಜ ಭಾರತದ ಇನಿಂಗ್ಸ್‌ಗೆ ಬಲ ತುಂಬಿದರು. 2009ರಲ್ಲಿ ಭಾರತದ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆದ ನಂತರ ಇಂತಹ ಹತ್ತಾರು ಪಂದ್ಯಗಳಲ್ಲಿ ತಂಡವು ಮೇಲುಗೈ ಸಾಧಿಸಲು ಕಾರಣರಾಗಿದ್ದಾರೆ.

ಆದರೆ ಅವರು ಈ ಮಟ್ಟಕ್ಕೆ ತಲುಪುವ ಹಾದಿಯಲ್ಲಿ ಹಲವಾರು ಏಳು–ಬೀಳುಗಳನ್ನು ಕಂಡಿದ್ದಾರೆ. 2009ರಲ್ಲಿ ಶ್ರೀಲಂಕಾ ಎದುರಿನ ಪದಾರ್ಪಣೆಯ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರೂ. ನಂತರದ ಪಂದ್ಯಗಳಲ್ಲಿ ಅಸ್ಥಿರ ಆಟವು ಮುಳುವಾಯಿತು. ಟಿ20 ವಿಶ್ವಕಪ್ ವೈಫಲ್ಯಕ್ಕೆ ಟೀಕೆ ಎದುರಿಸಬೇಕಾಯಿತು. ತಲೆಗೆ ಹಚ್ಚಿಕೊಳ್ಳದ ಜಡೇಜ ರಣಜಿ ಕ್ರಿಕೆಟ್‌ನಲ್ಲಿ ತ್ರಿಶತಕಗಳ ದಾಖಲೆ ಮಾಡಿದರು. ತಮ್ಮನ್ನು ಟೀಕಿಸಿದ್ದ ಭಾರತ ತಂಡದ ನಾಯಕ ಮಹೇಂದ್ರಸಿಂಗ್ ಧೋನಿಯ ಮನ ಗೆದ್ದರು. ಅವರ ನಂತರ ವಿರಾಟ್ ಕೊಹ್ಲಿಗೂ ಅಚ್ಚುಮೆಚ್ಚಿನವರಾದರು. ಅತಿ ಕಡಿಮೆ ಪಂದ್ಯಗಳಲ್ಲಿ 200 ವಿಕೆಟ್ ಗಳಿಸಿದ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಪುಟ್ಟ ರನ್‌ ಅಪ್‌ನಲ್ಲಿ ಬೌಲಿಂಗ್ ಮಾಡುವ 32 ವರ್ಷದ ಜಡೇಜ, ಕನಕಷನ್‌ ನಂತರ ಕಣಕ್ಕಿಳಿದ ಪಂದ್ಯದಲ್ಲಿ ತಮ್ಮ ಆಲ್‌ರೌಂಡ್ ಆಟಕ್ಕೆ ಮರುಚಾಲನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT