ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಬಿಡುಗಡೆ: ಬ್ಯಾಟರ್‌ಗಳ ಪಟ್ಟಿಗೆ ಶ್ರೇಯಸ್‌ ಅಯ್ಯರ್‌

ರೋಹಿತ್‌, ವಿರಾಟ್‌ ಸ್ಥಾನ ಸ್ಥಿರ
Last Updated 1 ಡಿಸೆಂಬರ್ 2021, 13:28 IST
ಅಕ್ಷರ ಗಾತ್ರ

ದುಬೈ: ಭಾರತದ ರೋಹಿತ್ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರವಿಚಂದ್ರನ್‌ ಅಶ್ವಿನ್‌ ಸ್ಥಾನ ಕೂಡ ಸ್ಥಿರವಾಗಿದೆ.

ಅಶ್ವಿನ್‌ ಎರಡನೇ ಸ್ಥಾನದಲ್ಲಿದ್ದು, ವೇಗಿ ಜಸ್‌ಪ್ರೀತ್ ಬೂಮ್ರಾ ಒಂದು ಸ್ಥಾನ ಕುಸಿತ ಕಂಡು 10ನೇ ಕ್ರಮಾಂಕದಲ್ಲಿದ್ದಾರೆ.

ಸೋಮವಾರ ಕೊನೆಗೊಂಡ ನ್ಯೂಜಿಲೆಂಡ್‌ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಫ್‌ಸ್ಪಿನ್ನರ್ ಅಶ್ವಿನ್ ಅವರನ್ನು ಹೊರತುಪಡಿಸಿ, ಈ ಮೂವರಲ್ಲಿ ಯಾರೂ ಕಣಕ್ಕಿಳಿದಿರಲಿಲ್ಲ.

ಪದಾರ್ಪಣೆ ಪಂದ್ಯ ಆಡಿದ್ದ ಶ್ರೇಯಸ್ ಅಯ್ಯರ್‌ (ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 105 ಮತ್ತು 65 ರನ್) ಬ್ಯಾಟಿಂಗ್ ಪಟ್ಟಿಗೆ ಪ್ರವೇಶಿಸಿದ್ದು, ಸದ್ಯ 74ನೇ ಸ್ಥಾನದಲ್ಲಿದ್ದಾರೆ. ಆರಂಭಿಕ ಬ್ಯಾಟರ್ ಶುಭಮನ್ ಗಿಲ್‌ ಆರು ಸ್ಥಾನಗಳು ಮತ್ತು ವೃದ್ಧಿಮಾನ್ ಸಹಾ ಒಂಬತ್ತು ಸ್ಥಾನಗಳ ಜಿಗಿತ ದಾಖಲಿಸಿದ್ದು, ಕ್ರಮವಾಗಿ 66 ಮತ್ತು 99ನೇ ಸ್ಥಾನಗಳಲ್ಲಿದ್ದಾರೆ. ಕಿವೀಸ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಗಳಿಸಿದ ಅರ್ಧಶತಕಗಳು ಅವರ ರ‍್ಯಾಂಕಿಂಗ್ ಪ್ರಗತಿಗೆ ಕಾರಣವಾಗಿವೆ.

ಆಲ್‌ರೌಂಡರ್‌ಗಳ ವಿಭಾಗದಲ್ಲಿ ರವೀಂದ್ರ ಜಡೇಜ ಎರಡನೇ ಸ್ಥಾನಕ್ಕೇರಿದ್ದರೆ, ಬೌಲಿಂಗ್ ವಿಭಾಗದಲ್ಲಿ 19ನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳಲ್ಲಿ ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್‌ ವಿಭಾಗದಲ್ಲಿ ನ್ಯೂಜಿಲೆಂಡ್‌ನ ಟಾಮ್ ಲಥಾಮ್‌ 14ರಿಂದ ಒಂಬತ್ತನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರೆ, ಬೌಲರ್‌ಗಳ ಪಟ್ಟಿಯಲ್ಲಿ ಕೈಲ್‌ ಜೆಮಿಸನ್‌ ಒಂಬತ್ತನೇ ಕ್ರಮಾಂಕದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT