ಬ್ಲೊಮ್‌ಫೋಂಟೀನ್: ಭಾರತ ತಂಡ, ಐಸಿಸಿ 19 ವರ್ಷದೊಳ ಗಿನವರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ‘ಎ’ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಡಕ್ವರ್ಥ್–ಲೂಯಿಸ್ ಆಧಾರದಲ್ಲಿ 44 ರನ್‌ಗಳಿಂದ ಸೋಲಿಸಿತು.

ಮಳೆ ಶುಕ್ರವಾರದ ಈ ಪಂದ್ಯವನ್ನು ಪೂರ್ಣವಾಗಿ ನಡೆಯಲು ಬಿಡಲಿಲ್ಲ. ಮೊದಲು ಬ್ಯಾಟ್ ಮಾಡಿದ ಭಾರತ, ಮಳೆಯಾಗುವ ಮೊದಲು 23 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 115 ರನ್ ಗಳಿಸಿತ್ತು. ಯಶಸ್ವಿ ಜೈಸ್ವಾಲ್ (ಔಟಾಗದೇ 57) ಮತ್ತು ದಿವ್ಯಾನ್ಷ್ ಸಕ್ಸೇನಾ (ಔಟಾಗದೇ 52) ಆರ್ಧ ಶತಕಗಳನ್ನು ಬಾರಿಸಿದರು.

ನ್ಯೂಜಿಲೆಂಡ್ ತಂಡಕ್ಕೆ 23 ಓವರುಗಳಲ್ಲಿ 193 ರನ್ ಗಳಿಸಬೇಕಾದ ಪರಿಷ್ಕೃತ ಗುರಿ ನಿಗದಿ ಮಾಡಲಾಯಿತು. ನ್ಯೂಜಿಲೆಂಡ್ 21 ಓವರುಗಳಲ್ಲಿ 147 ರನ್‌ಗಳಿಗೆ ಆಟ ಮುಗಿಸಿತು. ರೈಸ್ ಮರಿಯು (42 ರನ್), ಫರ್ಗಸ್ ಲೆಲ್‌ಮನ್ (31) ಮಾತ್ರ ಉಪಯುಕ್ತ ಆಟವಾಡಿದರು. ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ 30 ರನ್ನಿಗೆ 4 ವಿಕೆಟ್ ಪಡೆದು ಮತ್ತೊಮ್ಮೆ ಮಿಂಚಿದರೆ, ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೇಕರ್ 28 ರನ್ನಿಗೆ 3 ವಿಕೆಟ್ ಗಳಿಸಿದರು.

ಗುಂಪಿನಲ್ಲಿ ಮೂರೂ ಪಂದ್ಯ ಗೆದ್ದು ಆರು ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಗಳಿಸಿದ ಭಾರತ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.