ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ನಾಲ್ಕರ ಘಟ್ಟಕ್ಕೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌

ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ: ಪಾಜಿಸ್ತಾನಕ್ಕೆ ನಿರಾಸೆ
Last Updated 1 ಮಾರ್ಚ್ 2020, 19:51 IST
ಅಕ್ಷರ ಗಾತ್ರ

ಸಿಡ್ನಿ: ಲೌರಾ ವೊಲ್‌ ವಾರ್ಡ್‌ ಅವರ ಅರ್ಧಶತಕದ ಬಲ ದಿಂದ ದಕ್ಷಿಣ ಆಫ್ರಿಕಾ ತಂಡ ಮಹಿಳಾ ವಿಶ್ವಕಪ್‌ ಟ್ವೆಂಟಿ–20 ಟೂರ್ನಿಯ ಪಂದ್ಯ ದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ಭಾನುವಾರ ನಡೆದ ಹಣಾಹಣಿ ಯಲ್ಲಿ ಆಫ್ರಿಕಾ ಮಹಿಳೆಯರಿಗೆ 17 ರನ್‌ಗಳ ಜಯ ಒಲಿಯಿತು. ಟಾಸ್‌ ಗೆದ್ದ ನಾಯಕಿ ಡೇನ್‌ ವ್ಯಾನ್‌ ನಿಕೆರ್ಕ್‌ ಬ್ಯಾಟಿಂಗ್‌ ಆಯ್ದುಕೊಂಡರು. 36 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದಅರ್ಧಶತಕ ಸಿಡಿಸಿದ ವೊಲ್‌ವಾರ್ಡ್‌, ತಂಡ 136 ರನ್‌ಗಳ ಸ್ಪರ್ಧಾತ್ಮಕ ಪೇರಿಸಲು ನೆರವಾದರು.

ಗುರಿ ಬೆನ್ನತ್ತಿದ ಪಾಕಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ. 18 ರನ್‌ ಆಗುವ ಷ್ಟರಲ್ಲಿ ಆ ತಂಡದ ಎರಡು ವಿಕೆಟ್‌ ಉರುಳಿದ್ದವು. ನಾಯಕಿ ಜವೇರಿಯಾ ಖಾನ್‌ (31) ಸ್ವಲ್ಪ ಬಲ ತುಂಬಿದರು. ಮುರಿಯದ ಆರನೇ ವಿಕೆಟ್‌ ಜೊತೆ ಯಾಟದಲ್ಲಿ ಅಲಿಯಾ ರಿಯಾಜ್‌ (39) ಹಾಗೂ ಇರಾಮ್‌ ಜಾವೆದ್‌ 47 ರನ್‌ ಸೇರಿಸಿದರೂ ಗೆಲುವಿಗೆ ಸಾಕಾಗಲಿಲ್ಲ. ನಿಗದಿತ ಓವರ್‌ ಮುಗಿದಾಗ ಪಾಕಿಸ್ತಾನ ಐದು ವಿಕೆಟ್‌ಗೆ 119 ರನ್‌ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್‌
ದಕ್ಷಿಣ ಆಫ್ರಿಕಾ ಮಹಿಳೆಯರು:
20 ಓವರ್‌ಗಳಲ್ಲಿ 6 ವಿಕೆಟ್‌ಗೆ 136 (ಲೌರಾ ವೊಲ್‌ವಾರ್ಡ್‌ ಔಟಾಗದೆ 53, ಮಾರಿಜನ್‌ ಕಾಪ್‌ 31, ಮೈಗ್ನನ್‌ ಡು ಪ್ರೀಜ್‌ 17; ಡಯಾನಾ ಬೇಗ್‌ 19ಕ್ಕೆ 2, ಅನಮ್‌ ಅಮಿನ್‌ 22ಕ್ಕೆ 1).

ಪಾಕಿಸ್ತಾನ ಮಹಿಳೆಯರು: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 119 (ಅಲಿಯಾ ರಿಯಾಜ್‌ 39, ಜವೇರಿಯಾ ಖಾನ್‌ 31, ಇರಾಮ್‌ ಜಾವೇದ್‌ 17; ಶಬ್ನಿಮ್‌ ಇಸ್ಮಾಯಿಲ್‌ 17ಕ್ಕೆ 1, ಡೇನ್‌ ವ್ಯಾನ್‌ ನಿಕೆರ್ಕ್‌ 17ಕ್ಕೆ 1).

ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 17 ರನ್‌ ಜಯ, ಸೆಮಿಫೈನಲ್‌ ಪ್ರವೇಶ.

ನಾಲ್ಕರ ಘಟ್ಟಕ್ಕೆ ಇಂಗ್ಲೆಂಡ್‌
ಮತ್ತೊಂದು ಪಂದ್ಯದಲ್ಲಿಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌ ತಂಡವನ್ನು ಪರಾಭವಗೊಳಿಸಿ ಸೆಮಿಫೈನಲ್‌ ಪ್ರವೇಶಿಸಿತು. ನತಾಲಿ ಸ್ಕಿವರ್‌ ಅವರ ಅರ್ಧಶತಕದ (57) ಹಾಗೂ ಸೋಫಿ ಎಕ್ಲೆಸ್ಟೋನ್‌ (7ಕ್ಕೆ 3) ಬೌಲಿಂಗ್‌ ನೆರವಿನಿಂದ ಇಂಗ್ಲೆಂಡ್‌ 46 ರನ್‌ಗಳಿಂದ ಗೆದ್ದಿತು. ನಿಗದಿತ ಓವರ್‌ಗಳಲ್ಲಿ ಇಂಗ್ಲೆಂಡ್‌ ಐದು ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿತ್ತು. ವೆಸ್ಟ್‌ ಇಂಡೀಸ್‌ 97 ರನ್‌ ಗಳಿಸಿ ಆಲೌಟ್‌ ಆಯಿತು.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌ ಮಹಿಳೆಯರು:
20 ಓವರ್‌ಗಳಲ್ಲಿ 5 ವಿಕೆಟ್‌ಗೆ 143 (ನತಾಲಿ ಸ್ಕಿವರ್‌ 57, ಡ್ಯಾನಿ ವ್ಯಾಟ್‌ 29, ಆ್ಯಮಿ ಜೋನ್ಸ್ 23; ಅನೀಸಾ ಮೊಹಮ್ಮದ್‌ 23ಕ್ಕೆ 1, ಸ್ಟೆಫಾನಿ ಟೇಲರ್‌ 25ಕ್ಕೆ 1).

ವೆಸ್ಟ್‌ ಇಂಡೀಸ್‌: 17.1 ಓವರ್‌ಗಳಲ್ಲಿ 97 (ಲಿ ಆನ್‌ ಕಿರ್ಬಿ 20, ಬ್ರಿಟ್ನಿ ಕೂಪರ್‌ 15, ಸ್ಟೆಫಾನಿ ಟೇಲರ್‌ 15; ಸೋಫಿ ಎಕ್ಲೆಸ್ಟೋನ್‌ 7ಕ್ಕೆ 3, ಸಾರಾ ಗ್ಲೆನ್‌ 16ಕ್ಕೆ 2).

ಫಲಿತಾಂಶ: ಇಂಗ್ಲೆಂಡ್‌ಗೆ 46 ರನ್‌ ಜಯ, ಸೆಮಿಫೈನಲ್‌ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT