ಗುರುವಾರ , ಜುಲೈ 7, 2022
20 °C

ICC Womens World Cup: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಪರಾಭವಗೊಂಡಿತು. ಈ ಮೂಲಕ ಭಾರತದ ವಿಶ್ವಕಪ್ ಅಭಿಯಾನ ಅಂತ್ಯವಾಯಿತು.

ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳ ಜಯ ಸಾಧಿಸಿ ಉಪಾಂತ್ಯ ಪಂದ್ಯಕ್ಕೆ ಲಗ್ಗೆ ಹಾಕಿತು. ಅಂತಿಮ ಓವರ್‌ನ ಕೊನೆಯ ಬಾಲ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 1 ರನ್‌ ಅವಶ್ಯ ಇತ್ತು. ಈ ಹಂತದಲ್ಲಿ ಮಿಗ್ನಾನ್‌ ಡು ಪ್ರೀಜ್ ಬೌಂಡರಿ ಬಾರಿಸಿ ಆಫ್ರಿಕಾಗೆ ಗೆಲುವಿನ ಸಿಹಿ ಹಂಚಿದರು. 

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 274ರನ್‌ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಆಫ್ರಿಕಾ 3 ವಿಕೆಟ್‌ಗಳ ಜಯ ಕಂಡಿತು. 

ಸಂಕ್ಷಿಪ್ತ ಸ್ಕೋರ್‌...

ಭಾರತ: 274/7 (50 ಓವರ್‌)
ದಕ್ಷಿಣ ಆಫ್ರಿಕಾ: 275/7  (50 ಓವರ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು