ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌತಾಂಪ್ಟನ್‌ನಲ್ಲಿ WTC ಫೈನಲ್; ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ ಅವಕಾಶ ಸಾಧ್ಯತೆ

Last Updated 10 ಮಾರ್ಚ್ 2021, 13:12 IST
ಅಕ್ಷರ ಗಾತ್ರ

ಲಂಡನ್‌‌‌: ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಯೋಜಿಸುತ್ತಿರುವ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯವು ಸೌತಾಂಪ್ಟನ್‌ನ ಹ್ಯಾಂಪ್‌ಶೈರ್ ಬೌಲ್‌ ಕ್ರೀಡಾಂಗಣದಲ್ಲಿ 'ಬಯೋ-ಸೆಕ್ಯೂರ್ ಬಬಲ್‌' ನಿಯದನ್ವಯ ಆಯೋಜನೆಯಾಗಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಫೈನಲ್ ಪಂದ್ಯವು ಜೂನ್ 18ರಿಂದ 22ರ ವರೆಗೆ ಆಯೋಜನೆಯಾಗಲಿದೆ. ಜೂ.23 ಮೀಸಲು ದಿನವಾಗಿ ಪರಿಗಣಿಸಲಾಗಿದೆ.

ಈ ಮೊದಲು ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಲಾರ್ಡ್ಸ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಬಳಿಕ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಕ್ರಿಕೆಟ್ ಮಂಡಳಿ (ಇಸಿಬಿ) ಜೊತೆಗಿನ ಮಾತುಕತೆಯ ಬಳಿಕ ಐಸಿಸಿ ಬುಧವಾರದಂದು ಹೊಸ ತಾಣವನ್ನು ಪ್ರಕಟಿಸಿದೆ.

ಆಟಗಾರರಿಗೆ ಗರಿಷ್ಠ ಸುರಕ್ಷತೆ ಒದಗಿಸುವುದರ ಜೊತೆಗೆ ಕೋವಿಡ್-19 ಸೋಂಕಿನ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು.

ಸೌತಾಂಪ್ಟನ್‌ನಲ್ಲಿ ಜೀವ ಸುರಕ್ಷಾ ವಾತಾವರಣದಲ್ಲಿ ಇಸಿಬಿ ಈಗಾಗಲೇಕ್ರಿಕೆಟ್ ಆಯೋಜಿಸಿದೆ. ವಿಶ್ವದರ್ಜೆಯ ಗುಣಮಟ್ಟದ ಸೌಲಭ್ಯ ಹಾಗೂ ತರಬೇತಿ ಕೇಂದ್ರಗಳು ಲಭ್ಯವಿರಲಿದೆ.

ಅದೇ ಹೊತ್ತಿಗೆ ಬ್ರಿಟನ್‌ನಲ್ಲಿ ಕೋವಿಡ್-19 ಲಾಕ್‌ಡೌನ್ ಸಡಿಲಗೊಳಿಸುವ ಪ್ರಕ್ರಿಯೆ ಯೋಜನೆಯಂತೆ ಮುಂದುವರಿದ್ದಲ್ಲಿ ಸೀಮಿತ ಸಂಖ್ಯೆಯ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸುವ ಅವಕಾಶ ಲಭ್ಯವಾಗುವ ಸಾಧ್ಯತೆಯಿದೆ.

'ಬಯೋ-ಸೆಕ್ಯೂರ್ ಬಬಲ್‌' ಎಂದರೇನು?
ಕೋವಿಡ್-19 ಸೋಂಕಿನ ಅಪಾಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಬಯೋ-ಸೆಕ್ಯೂರ್ ಬಬಲ್ ನಿಯಮದಡಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಇದರಲ್ಲಿ ಪ್ಲೇಯರ್ಸ್ ಐಸೋಲೇಷನ್, ಸೆಲ್ಫ್ ಕ್ವಾರಂಟೈನ್ ಒಳಗೊಂಡಿದ್ದು, ಆಟಗಾರರು ತಮ್ಮ ಕುಟುಂಬ ಸೇರಿದಂತೆ ಹೊರ ಜಗತ್ತಿನ ಸಂಪರ್ಕದಲ್ಲಿರುವುದಿಲ್ಲ. ಇನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜನೆ ಇದರ ಭಾಗವಾಗಿದ್ದರೂ ಸಹ ಭಾರತ-ನ್ಯೂಜಿಲೆಂಡ್ ನಡುವಣ ಫೈನಲ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT