ಸಿಡ್ನಿ ಕ್ರೀಡಾಂಗಣ ಪಿಚ್ ‘ತೃಪ್ತಿಕರ’
ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ನಾಲ್ಕು ಪಂದ್ಯಗಳು ನಡೆದ ಪಿಚ್‌ಗಳನ್ನು ಅತ್ಯುತ್ತಮ ಮತ್ತು ಕೊನೆಯ ಪಂದ್ಯ ನಡೆದ ಸಿಡ್ನಿ ಅಂಗಳವನ್ನು ತೃಪ್ತಿಕರ ಎಂದು ಐಸಿಸಿಯು ಶ್ರೇಯಾಂಕ ನೀಡಿದೆ.
ಈ ಸರಣಿಯಲ್ಲಿ ಆತಿಥೆಯ ಆಸ್ಟ್ರೇಲಿಯಾ ತಂಡವು 3–1ರಿಂದ ಜಯಿಸಿತು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯಿತು.
‘ಪರ್ತ್, ಅಡಿಲೇಡ್ ಓವಲ್, ಗಾಬಾ ಮತ್ತು ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಮೊದಲ ನಾಲ್ಕು ಪಂದ್ಯಗಳು ನಡೆದಿದ್ದವು. ಈ ತಾಣಗಳನ್ನು ಅತ್ಯುತ್ತಮ ಎಂದು ಶ್ರೇಯಾಂಕ ನೀಡಲಾಗಿದೆ. ಕೊನೆ ಪಂದ್ಯದ ಆಯೋಜನೆಯಾಗಿದ್ದ ಸಿಡ್ನಿ ಕ್ರಿಕೆಟ್ ಮೈದಾನದ ಪಿಚ್ ತೃಪ್ತಿಕರವಾಗಿತ್ತು’ ಎಂದು ಐಸಿಸಿಯು ಪ್ರಕಟಣೆಯಲ್ಲಿ ತಿಳಿಸಿದೆ.