ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಆಸ್ಟ್ರೇಲಿಯಾದ ಯುವ ಆರಂಭಿಕ ಬ್ಯಾಟರ್ ಸ್ಯಾಮ್ ಕೊನ್ಸ್ಟಸ್ ಅವರಿಗೆ ಭುಜದಿಂದ ಡಿಕ್ಕಿ ಹೊಡೆದಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ದಂಡನೆಗೊಳಗಾಗಿದ್ದಾರೆ.

ಐಸಿಸಿ ನಿಯಮ ಉಲ್ಲಂಘನೆ ಮಾಡಿರುವ ವಿರಾಟ್ ಕೊಹ್ಲಿ ಅವರಿಗೆ ಪಂದ್ಯ ಶುಲ್ಕದ ಶೇ 20ರಷ್ಟು ದಂಡ ವಿಧಿಸಲಾಗಿದೆ. ಹಾಗೆಯೇ ಅನುಚಿತ ವರ್ತನೆಗಾಗಿ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಲ್ಕು ಡಿಮೆರಿಟ್ ಪಾಯಿಂಟ್ಗೆ ಒಳಗಾದರೆ ಕನಿಷ್ಠ ಒಂದು ಪಂದ್ಯದ ನಿಷೇಧ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ಮತ್ತೊಂದೆಡೆ 19 ವರ್ಷದ ಕೊನ್ಸ್ಟಸ್, ಈ ಘಟನೆಯನ್ನು ಹಗುರವಾಗಿ ಪರಿಗಣಿಸಿದ್ದಾರೆ. 'ವಿರಾಟ್ ಕೊಹ್ಲಿ ಆಕಸ್ಮಿಕವಾಗಿ ನನ್ನನ್ನು ಡಿಕ್ಕಿ ಹೊಡೆದಿರಬಹುದು. ಕ್ರಿಕೆಟ್ ಆಟದಲ್ಲಿ ಇದು ಸಾಮಾನ್ಯ. ಒತ್ತಡದೊಂದಿಗೆ ಹೀಗಾಗುತ್ತದೆ' ಎಂದು ಹೇಳಿದ್ದಾರೆ.

ಪಂದ್ಯದ ಓವರ್ಗಳ ಮಧ್ಯೆ ಏಕಾಏಕಿ ಕೊನ್ಸ್ಟಸ್ ಬಳಿ ತೆರಳಿದ್ದ ಕೊಹ್ಲಿ ಭುಜದಿಂದ ಡಿಕ್ಕಿ ಹೊಡೆದಿದ್ದರು. ಬಳಿಕ ಇಬ್ಬರ ನಡುವೆ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು.

ಕೊಹ್ಲಿ ವರ್ತನೆಯನ್ನು ಮಾಜಿ ನಾಯಕರು ಸೇರಿದಂತೆ ಕ್ರಿಕೆಟ್ ತಜ್ಞರು ಟೀಕೆ ಮಾಡಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಇಂಗ್ಲೆಂಡ್ನ ಮಾಜಿ ಕಪ್ತಾನ ಮೈಕಲ್ ವಾನ್, ಕೊಹ್ಲಿ ಮೇಲೆ ಶಿಸ್ತು ಕ್ರಮಕ್ಕೆ ಬಯಸಿದ್ದರು.
.Aus Vs Ind Boxing Day Test: ಮೊದಲ ದಿನ ಆಸ್ಟ್ರೇಲಿಯಾ ಬ್ಯಾಟರ್ಗಳ ಮೇಲುಗೈ.ಕೊಹ್ಲಿ ಮತ್ತೆ ವೈಫಲ್ಯ, ಜೈಸ್ವಾಲ್-ದೇವದತ್ತ ಶೂನ್ಯ; ಅಶ್ವಿನ್, ಜಡೇಜಗೆ ಕೊಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.