ಸೋಮವಾರ, ಜೂನ್ 1, 2020
27 °C
ಪ್ರತ್ಯೇಕ ನಾಯಕತ್ವ– ಕೊಹ್ಲಿ ವ್ಯಕ್ತಿತ್ವಕ್ಕೆ ಸರಿಹೊಂದದು: ನಾಸಿರ್‌ ಹುಸೇನ್‌

ಭಾರತೀಯ ಕ್ರಿಕೆಟ್‌ ನಾಯಕತ್ವ ವಿಭಜನೆ ಸೂಕ್ತವಲ್ಲ: ಕ್ರಿಕೆಟಿಗ ನಾಸೀರ್ ಹುಸೇನ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಕ್ರಿಕೆಟ್‌ ತಂಡದ ನಾಯಕತ್ವವನ್ನು ವಿಭಜಿಸುವುದು ಸೂಕ್ತವಲ್ಲ. ವಿರಾಟ್ ಕೊಹ್ಲಿ ಅವರ ಆಕ್ರಮಣಶೀಲ ವ್ಯಕ್ತಿತ್ವಕ್ಕೆ ಅದು ಸರಿಹೊಂದುವುದಿಲ್ಲ ಎಂದು ಇಂಗ್ಲೆಂಡ್‌ನ ಹಿರಿಯ ಕ್ರಿಕೆಟಿಗ ನಾಸೀರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್‌ನಲ್ಲಿ ಟೆಸ್ಟ್ ಮತ್ತು ಸೀಮಿತ ಮಾದರಿಯ ಓವರ್‌ಗಳ ಕ್ರಿಕೆಟ್‌ಗೆ ತಂಡದ ನಾಯರು ಬೇರೆ ಬೇರೆ ಇದ್ದಾರೆ. ಅಂತಹ ಮಾದರಿಯು ಭಾರತಕ್ಕೆ ಸೂಕ್ತವೇ ಎಂಬ ಪ್ರಶ್ನೆಗೆ ಹುಸೇನ್, ‘ಇದು ನಾಯಕನ ವ್ಯಕ್ತಿತ್ವದ ಮೇಲೆ ಅವಲಂಬಿತವಾಗುತ್ತದೆ. ವಿರಾಟ್ ಅವರಿಗೆ ತಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳುವುದು ಒಪ್ಪಿತವಾಗಲಿಕ್ಕಿಲ್ಲ. ಆದರೆ ಇಂಗ್ಲೆಂಡ್‌ನ ವಿಷಯ ಬೇರೆ. ಇಯಾನ್ ಮಾರ್ಗನ್ ಮತ್ತು ಜೋ ರೂಟ್ ಅವರಲ್ಲಿ ಹೊಂದಾಣಿಕೆಯ ಸ್ವಭಾವವಿದೆ’ ಎಂದು ಹುಸೇನ್‌ ಅಭಿಪ್ರಾಯಪಟ್ಟರು.

’ಕೋಚಿಂಗ್ ವಿಷಯದಲ್ಲಿ ಪ್ರಯೋಗ ಮಾಡಬಹುದು. ಬೇರೆ ಬೇರೆ ಮಾದರಿಗಳಿಗೆ ಪ್ರತ್ಯೇಕ ಕೋಚ್‌ ನೇಮಕ ಮಾಡಬಹುದು. ಇಂಗ್ಲೆಂಡ್‌ನಲ್ಲಿ ಅದು ಯಶಸ್ವಿಯಾಗಿದೆ. ಟ್ರೆವರ್ ಬೇಲಿಸ್ ಸೀಮಿತ ಓವರ್‌ಗಳ ಮಾದರಿಯಲ್ಲಿ ಯಶಸ್ವಿಯಾದರು. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಷ್ಟೊಂದು ಉತ್ತಮ ಫಲಿತಾಂಶ ಕೊಡಲಿಲ್ಲ. ಆದ್ದರಿಂದ ಟೆಸ್ಟ್ ತಂಡಕ್ಕೆ ಪ್ರತ್ಯೇಕ ಕೋಚ್ ನೇಮಕ ಮಾಡಲಾಯಿತು’ ಎಂದಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು