ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL 2023: ಆರ್‌ಸಿಬಿ ಪ್ಲೇ-ಆಫ್ ಪ್ರವೇಶ ಹೇಗೆ ಸಾಧ್ಯ ?

Last Updated 20 ಮಾರ್ಚ್ 2023, 11:13 IST
ಅಕ್ಷರ ಗಾತ್ರ

ಬೆಂಗಳೂರು: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್‌) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಫೈನಲ್ ಕನಸು ಇನ್ನೂ ಜೀವಂತವಾಗಿದೆ.

ಟೂರ್ನಿಯ ಮೊದಲ ಐದು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಕಂಡಿರುವ ಸ್ಮೃತಿ ಮಂದಾನ ಪಡೆ, ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಅಲ್ಲದೆ ಸತತ ಎರಡು ಗೆಲುವು ದಾಖಲಿಸಿ ಪ್ಲೇ-ಆಫ್ ಪ್ರವೇಶವನ್ನು ಎದುರು ನೋಡುತ್ತಿದೆ.

ಆರ್‌ಸಿಬಿ ಪ್ಲೇ-ಆಫ್ ಪ್ರವೇಶ ಹೇಗೆ ಸಾಧ್ಯ?

*ಡಬ್ಲ್ಯುಪಿಎಲ್‌‌ನಲ್ಲಿ ಒಟ್ಟು ಐದು ತಂಡಗಳು ಭಾಗವಹಿಸುತ್ತಿದ್ದು, ಈ ಪೈಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಲಿದೆ.
*ಎರಡು ಹಾಗೂ ಮೂರನೇ ಸ್ಥಾನ ಪಡೆದ ತಂಡಗಳು ಪ್ಲೇ-ಆಫ್‌ ಎಲಿನೇಟರ್‌ನಲ್ಲಿ ಮುಖಾಮುಖಿಯಾಗಲಿದೆ. ಇಲ್ಲಿ ಗೆದ್ದ ತಂಡವು ಎರಡನೇ ತಂಡವಾಗಿ ಫೈನಲ್‌ಗೆ ಪ್ರವೇಶಿಸಲಿದೆ.
*ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಪ್ಲೇ-ಆಫ್ ಸ್ಥಾನಗಳನ್ನು ಖಚಿತಪಡಿಸಿವೆ.
*ಆರ್‌ಸಿಬಿ ಪ್ಲೇ-ಆಫ್ ಪ್ರವೇಶವನ್ನು ಜೀವಂತವಾಗಿರಿಸಲು, ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬೃಹತ್ ಅಂತರದಲ್ಲಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಪಂದ್ಯವು ಮಾರ್ಚ್ 21 ಮಂಗಳವಾರದಂದು ನಡೆಯಲಿದೆ.
*ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ಒಟ್ಟು 6 ಅಂಕಗಳನ್ನು ಸಂಪಾದಿಸಲಿದ್ದು, ರನ್‌‌ರೇಟ್ ಕೂಡ ಸುಧಾರಿಸಲಿದೆ.
*ಸದ್ಯ ನಾಲ್ಕನೇ ಸ್ಥಾನದಲ್ಲಿರುವ ಆರ್‌ಸಿಬಿ ಏಳು ಪಂದ್ಯಗಳಲ್ಲಿ ನಾಲ್ಕು ಅಂಕಗಳನ್ನು (-1.044 ರನ್‌ರೇಟ್) ಹೊಂದಿದೆ.
*ಆರ್‌ಸಿಬಿ ಪ್ಲೇ-ಆಫ್ ಪ್ರವೇಶವು ಇತರೆ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿರಲಿದೆ.
*ಇದಕ್ಕಾಗಿ ಸದ್ಯ ಮೂರನೇ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಸೋಲಬೇಕಿದೆ.
*ಯುಪಿ ವಾರಿಯರ್ಸ್ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಗುಜರಾತ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿವೆ.
*ಗುಜರಾತ್ ಜೈಂಟ್ಸ್ ತನ್ನ ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಗೆದ್ದರೂ ಆರ್‌ಸಿಬಿಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳಬಾರದು.

ಅಂಕಪಟ್ಟಿ ಇಂತಿದೆ (ಪಂದ್ಯ ಸಂಖ್ಯೆ 16ರ ಅಂತ್ಯಕ್ಕೆ):
ಮುಂಬೈ ಇಂಡಿಯನ್ಸ್: ಪಂದ್ಯ: 6, ಗೆಲುವು: 5, ಸೋಲು: 1, ಅಂಕ: 10, ರನ್‌ರೇಟ್: +2.670
ಡೆಲ್ಲಿ ಕ್ಯಾಪಿಟಲ್ಸ್: ಪಂದ್ಯ: 6, ಗೆಲುವು: 4, ಸೋಲು: 2, ಅಂಕ: 8, ರನ್‌ರೇಟ್: +1.431
ಯುಪಿ ವಾರಿಯರ್ಸ್: ಪಂದ್ಯ: 6, ಗೆಲುವು: 3, ಸೋಲು: 3, ಅಂಕ: 6, ರನ್‌ರೇಟ್: -0.117
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಪಂದ್ಯ: 7, ಗೆಲುವು: 2, ಸೋಲು: 5, ಅಂಕ: 4, ರನ್‌ರೇಟ್: -1.044
ಗುಜರಾತ್ ಜೈಂಟ್ಸ್: ಪಂದ್ಯ: 7, ಗೆಲುವು: 2, ಸೋಲು: 5, ಅಂಕ: 4, ರನ್‌ರೇಟ್: -2.511

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT