ಶನಿವಾರ, ನವೆಂಬರ್ 27, 2021
21 °C

Test Cricket: ಇವರೇ ನೋಡಿ ಭಾರತದ ಪರ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದವರು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಯುವ ಆಟಗಾರ ಶ್ರೇಯಸ್‌ ಅಯ್ಯರ್‌ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಭಾರತದ ಪರ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ 16ನೇ ಆಟಗಾರರೆನಿಸಿದ್ದಾರೆ.

ಅಯ್ಯರ್‌, ಈಗ ಕ್ರಿಕೆಟ್‌ ದಿಗ್ಗಜರಾದ ಲಾಲಾ ಅಮರನಾಥ್, ಗುಂಡಪ್ಪ ವಿಶ್ವನಾಥ್, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಶುಕ್ರವಾರ ಎರಡನೇ ದಿನದಾಟ ಆರಂಭಿಸಿದ ಶ್ರೇಯಸ್‌ ಅಯ್ಯರ್‌ (105), ರವೀಂದ್ರ ಜಡೇಜಾ (50), ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಆಡಲಿಲ್ಲ. ಇವರಿಬ್ಬರ ವಿಕೆಟ್‌ ಪಡೆಯುವಲ್ಲಿ ಟಿಮ್ ಸೌಥಿ ಯಶಸ್ವಿಯಾದರು.

171 ಎಸೆತಗಳನ್ನು ಎದುರಿಸಿದ ಅಯ್ಯರ್‌ 105 ರನ್‌ ಗಳಿಸಿದರು. ಇದರಲ್ಲಿ ಎರಡು ಸಿಕ್ಸರ್‌, 13 ಬೌಂಡರಿಗಳು ಸೇರಿವೆ. ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ 111.1 ಓವರ್‌ಗಳಲ್ಲಿ 345 ರನ್‌ ಗಳಿಸಿ ಆಲೌಟ್‌ ಆಗಿದೆ.

26 ವರ್ಷದ ಶ್ರೇಯಸ್‌ ಅಯ್ಯರ್‌ ಮುಂಬೈ ಮೂಲದವರು. ನ್ಯೂಜಿಲೆಂಡ್‌ ವಿರುದ್ಧ ಅವರು ತಮ್ಮ ವೃತ್ತಿ ಜೀವನದ ಮೊದಲ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರನ್ನು ಭೇಟಿಯಾಗಿದ್ದ ಅಯ್ಯರ್‌, ಅವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದರು.

ಇದೇ ವೇಳೆ ಸುನೀಲ್ ಗಾವಸ್ಕರ್ ಅವರು ಶ್ರೇಯಸ್ ಅಯ್ಯರ್‌ಗೆ ಅಭಿನಂದಿಸಿ ಟೆಸ್ಟ್ ಕ್ಯಾಪ್ (ಟೋಪಿ) ಉಡುಗೊರೆ ನೀಡಿದ್ದರು. ಇದಕ್ಕೆ ಚುಂಬನ ನೀಡಿ ತಲೆಗೆ ಹಾಕಿಕೊಂಡ ಶ್ರೇಯಸ್ ಅವರನ್ನು ಸಹ ಆಟಗಾರರು ಅಭಿನಂದಿಸಿದ್ದರು.

ಇದನ್ನೂ ಓದಿ... IND v NZ Test: ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್

ಪರ್ದಾಪಣೆ ಪಂದ್ಯದಲ್ಲಿ ಶತಕ ಸಿಡಿಸಿದ ಆಟಗಾರರ ಪಟ್ಟಿ ಇಲ್ಲಿದೆ.

ಲಾಲಾ ಅಮರನಾಥ್ (1933)
ದೀಪಕ್ ಶೋಧನ್ (1952)
ಅರ್ಜನ್ ಕೃಪಾಲ್ ಸಿಂಗ್ (1955)
ಅಬ್ಬಾಸ್ ಅಲಿ ಬೇಗ್ (1959)
ಹನುಮಂತ್ ಸಿಂಗ್ (1964)
ಗುಂಡಪ್ಪ ವಿಶ್ವನಾಥ್ (1969)
ಸುರಿಂದರ್ ಅಮರನಾಥ್ (1976)
ಮೊಹಮ್ಮದ್‌ ಅಜರುದ್ದೀನ್‌ (1984)
ಪ್ರವೀಣ್ ಆಮ್ರೆ (1992)
ಸೌರವ್‌ ಗಂಗೂಲಿ (1996)
ವೀರೇಂದ್ರ ಸೆಹ್ವಾಗ್‌ (2001)
ಸುರೇಶ್ ರೈನಾ (2010)
ಶಿಖರ್ ಧವನ್‌ (2013)
ರೋಹಿತ್ ಶರ್ಮಾ (2013)
ಪೃಥ್ವಿ ಶಾ (2018)
ಶ್ರೇಯಸ್‌ ಅಯ್ಯರ್‌ (2021)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು