ಮೆಲ್ಬರ್ನ್: ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ಅವರ ದಾಳಿಯನ್ನು ನಿರಂತಕವಾಗಿ ಎದುರಿಸುವ ಮೂಲಕ ಆಸ್ಟ್ರೇಲಿಯಾದ ಯುವ ಆರಂಭಿಕ ಬ್ಯಾಟರ್ ಸ್ಯಾಮ್ ಕೊನ್ಸ್ಟಸ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

19ರ ಹರೆಯದ ಯುವ ಬ್ಯಾಟರ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸ್ಕೂಪ್ ಶಾಟ್ ಮೂಲಕ ಬೂಮ್ರಾ ದಾಳಿಯಲ್ಲಿ ಸಿಕ್ಸರ್ ಬಾರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ 4,483 ಎಸೆತಗಳಲ್ಲಿ ಬೂಮ್ರಾ ಸಿಕ್ಸರ್ ಬಿಟ್ಟುಕೊಟ್ಟಿರಲಿಲ್ಲ. ಆದರೆ ಈ ದಾಖಲೆಯನ್ನು ಕೊನ್ಸ್ಟಸ್ ಮುರಿದಿದ್ದಾರೆ.

ತಾವು ಎದುರಿಸಿದ ಮೊದಲ ಪಂದ್ಯದಲ್ಲೇ ಬೂಮ್ರಾ ದಾಳಿಯಲ್ಲಿ ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೂಮ್ರಾ ಎಸೆದ ಇನಿಂಗ್ಸ್ನ ಆರನೇ ಓವರ್ನಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 14 ರನ್ ಗಳಿಸಿದ ಕೊನ್ಸ್ಟಸ್ ಅಬ್ಬರಿಸಿದರು.

ಬಳಿಕ ಇನಿಂಗ್ಸ್ನ 11ನೇ ಓವರ್ನಲ್ಲೂ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 18 ರನ್ ಗಳಿಸಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಬೂಮ್ರಾ ಅವರ ದುಬಾರಿ ಓವರ್ ಇದಾಗಿದೆ.

ಬೂಮ್ರಾ ಸೇರಿದಂತೆ ಭಾರತೀಯ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಕೊನ್ಸ್ಟಸ್, ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕದ ಸಾಧನೆಯನ್ನು ಮಾಡಿದರು.

ಸರಣಿಯುದ್ಧಕ್ಕೂ ನಿಖರ ದಾಳಿ ಮೂಲಕ ಛಾಪು ಮೂಡಿಸಿದ್ದ ಬೂಮ್ರಾ ಎದುರಾಳಿ ತಂಡವನ್ನು ಮಾರಕವಾಗಿ ಕಾಡಿದ್ದರು. ಬಳಿಕ ಮೊದಲ ದಿನದ ಆಟದಲ್ಲೂ ತಿರುಗೇಟು ನೀಡಿರುವ ಬೂಮ್ರಾ ಮೂರು ವಿಕೆಟ್ ಗಳಿಸಿದ್ದಾರೆ.

ಆ ಮೂಲಕ ಸರಣಿಯಲ್ಲಿ ಈವರೆಗೆ ಒಟ್ಟು 24 ವಿಕೆಟ್ಗಳನ್ನು ಪಡೆದಿದ್ದಾರೆ. ಇದು ಸರಣಿಯೊಂದರಲ್ಲಿ ಬೂಮ್ರಾ ಅವರ ಶ್ರೇಷ್ಠ ಸಾಧನೆಯಾಗಿದೆ.
.IND vs AUS: ಆಸೀಸ್ ಯುವ ಆಟಗಾರನಿಗೆ ಭುಜದಿಂದ ಡಿಕ್ಕಿ ಹೊಡೆದ ಕೊಹ್ಲಿಗೆ ದಂಡ.Aus Vs Ind Boxing Day Test: ಮೊದಲ ದಿನ ಆಸ್ಟ್ರೇಲಿಯಾ ಬ್ಯಾಟರ್ಗಳ ಮೇಲುಗೈ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.