IND vs AUS 1st Test: ಮೊದಲ ದಿನದ ಊಟದ ವಿರಾಮಕ್ಕೆ ಆಸ್ಟ್ರೇಲಿಯಾ 76/2

ನಾಗಪುರ: ಇಲ್ಲಿನ ಜಮ್ತಾದ ವಿಸಿಎ ಕ್ರೀಡಾಂಗಣದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಅವಧಿಯಲ್ಲಿ ಭಾರತೀಯ ವೇಗಿಗಳು ಮೇಲುಗೈ ಸಾಧಿಸಿದ್ದಾರೆ.
ಮೊದಲ ದಿನದ ಆಟದ ಊಟದ ವಿರಾಮದ ಹೊತ್ತಿಗೆ ಆಸ್ಟ್ರೇಲಿಯಾ 32 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ.
2 ರನ್ ಗಳಿಸುವಷ್ಟರಲ್ಲಿ ಓಪನರ್‌ಗಳಾದ ಉಸ್ಮಾನ್ ಖವಾಜ (1) ಹಾಗೂ ಡೇವಿಡ್ ವಾರ್ನರ್ (1) ವಿಕೆಟ್‌ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿತ್ತು.
ಇದನ್ನೂ ಓದಿ: IND vs AUS 1st Test: ಸೂರ್ಯ, ಭರತ್ ಪದಾರ್ಪಣೆ; ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ
ಈ ಎರಡು ವಿಕೆಟ್‌ಗಳನ್ನು ಬಲಗೈ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಹಂಚಿಕೊಂಡರು.
Lunch on Day 1 of the 1st #INDvAUS Test.
Australia 76/2
Siraj and Shami take a wicket apiece.
Scorecard - https://t.co/edMqDi4dkU #INDvAUS @mastercardindia pic.twitter.com/n9Y6jkhKm5
— BCCI (@BCCI) February 9, 2023
ಈ ಹಂತದಲ್ಲಿ ಜೊತೆಗೂಡಿದ ಮಾರ್ನಸ್ ಲಾಬುಶೇನ್ ಹಾಗೂ ಮಾಜಿ ನಾಯಕ ಸ್ಟೀವ್ ಸ್ಮಿತ್ ಮುರಿಯದ ಮೂರನೇ ವಿಕೆಟ್‌ಗೆ ಅಮೂಲ್ಯ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.
47 ರನ್ ಗಳಿಸಿ ಕ್ರೀಸಿನಲ್ಲಿರುವ ಲಾಬುಶೇನ್, ಅರ್ಧಶತಕದತ್ತ ಮುನ್ನುಗ್ಗುತ್ತಿದ್ದಾರೆ. ಅವರಿಗೆ ಸ್ಮಿತ್ (ಅಜೇಯ 19) ಸಾಥ್ ನೀಡಿದ್ದಾರೆ.
𝑰. 𝑪. 𝒀. 𝑴. 𝑰!
1⃣ wicket for @mdsirajofficial 👌
1⃣ wicket for @MdShami11 👍Relive #TeamIndia's early strikes with the ball 🎥 🔽 #INDvAUS | @mastercardindia pic.twitter.com/K5kkNkqa7U
— BCCI (@BCCI) February 9, 2023
📸📸#TeamIndia #INDvAUS pic.twitter.com/2kNhHUc4W2
— BCCI (@BCCI) February 9, 2023
Test debuts for @surya_14kumar & @KonaBharat 👏 👏
The grin on the faces of their family members says it all 😊 😊#TeamIndia | #INDvAUS | @mastercardindia pic.twitter.com/dJc7uYbhGc
— BCCI (@BCCI) February 9, 2023
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.