ಸಿಡ್ನಿ: ಶುಕ್ರವಾರ ಬೆಳಿಗ್ಗೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಅಭ್ಯಾಸ ಮಾಡುತ್ತಿದ್ದ ಭಾರತ ತಂಡದ ಆಟಗಾರರಲ್ಲಿ ನಾಯಕ ರೋಹಿತ್ ಶರ್ಮಾ ಕೂಡ ಇದ್ದರು. ನೋಡುಗರ ಗಮನ ಅವರ ಮೇಲೆಯೇ ಇತ್ತು.

ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಗುರುವಾರ ನೀಡಿದ್ದ ಹೇಳಿಕೆಯಿಂದಾಗಿ ರೋಹಿತ್ ಶರ್ಮಾ ಅವರು ಈ ಪಂದ್ಯದಲ್ಲಿ ಆಡುವ ಭಾರತ ತಂಡದ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವರೇ ಇಲ್ಲವೇಎಂಬ ಕುತೂಹಲ ಗರಿಗೆದರಿತ್ತು. ರೋಹಿತ್ ಬ್ಯಾಟಿಂಗ್ ವೈಫಲ್ಯ ಮತ್ತು ಸತತ ಸೋಲುಗಳಿಂದಾಗಿ ರೋಹಿತ್ ಅವರು ಇಲ್ಲಿ ಕಣಕ್ಕಿಳಿಯುವ ಕುರಿತು ಅನುಮಾನಗಳಿದ್ದವು.

ಜಸ್ಪ್ರೀತ್ ಬೂಮ್ರಾ ಅವರು ಭಾರತ ತಂಡದ ಬ್ಲೆಜರ್ ಧರಿಸಿ ಟಾಸ್ಗೆ ಬಂದ ಮೇಲೆ ಎಲ್ಲ ಅನುಮಾನಗಳಿಗೂ ಉತ್ತರ ದೊರೆತವು.

‘ನಮ್ಮ ನಾಯಕ, ನಾಯಕತ್ವದ ಗುಣ ಪ್ರದರ್ಶಿಸಿದ್ದಾರೆ. ಅವರು ವಿಶ್ರಾಂತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ‘ ಎಂದು ಬೂಮ್ರಾ ಹೇಳಿದರು. ‘ಇದು ನಮ್ಮ ತಂಡದಲ್ಲಿರುವ ಏಕತೆಯನ್ನು ತೋರಿಸುತ್ತದೆ’ ಎಂದೂ ಅವರು ನುಡಿದರು.

ಡ್ರೆಸಿಂಗ್ ಕೋಣೆಯಿಂದ ಪಂದ್ಯ ವೀಕ್ಷಿಸುತ್ತಿದ್ದ ರೋಹಿತ್ ನಗುನಗುತ್ತ ಲವಲವಿಕೆಯಿಂದ ಇರುವ ಪ್ರಯತ್ನ ಮಾಡುತ್ತಿದ್ದರು. ಆದರೂ ಅವರಿಗೆ ತಮ್ಮ ಮನದಲ್ಲಿದ್ದ ಹತಾಶೆ ಭಾವವನ್ನು ಹೆಚ್ಚು ಮುಚ್ಟಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹನ್ನೊಂದರ ಬಳಗದಿಂದ ಹೊರಗಿರುವುದಕ್ಕಿಂತಲೂ ಆ ನಿರ್ಧಾರವನ್ನು ಪ್ರಕಟಿಸಿದ ರೀತಿಯಿಂದ ಅವರಿಗೆ ನಿರಾಶೆಯಾಗಿರುವುದು ಸ್ಪಷ್ಟವಾಗಿತ್ತು.

ಈ ವಿಷಯದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾರದರ್ಶಕತೆ ಮತ್ತು ಗೌರವಯುತವಾಗಿ ನಿರ್ವಹಿಸಿದೆಯೇ ಎಂಬುದು ಮೇಲ್ನೋಟಕ್ಕೆ ಕಾಣುತ್ತಿಲ್ಲ. ರೋಹಿತ್ ಶರ್ಮಾ ಅವರು ಆಧುನಿಕ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ದಂತಕಥೆ ಎಂಬುದು ನಿರ್ವಿವಾದದ ಸಂಗತಿ. ಅಲ್ಲದೇ ಹಾಲಿ ನಾಯಕನಾಗಿ ಅವರು ಪಾರದರ್ಶಕತೆ ಬಯಸುವುದು ಸಹಜ. ಕೊನೆಯ ಪಂದ್ಯದಲ್ಲಿ ರೋಹಿತ್ ಲಭ್ಯತೆ ಅಥವಾ ಹೊರಗಿಡುವ ವಿಷಯವಾಗಿ ಸ್ಪಷ್ಟತೆ ಕೊನೆಯ ಕ್ಷಣದವರೆಗೂ ಇರಲಿಲ್ಲ.

ಇದಕ್ಕೆ ತದ್ವಿರುದ್ಧವಾದ ನಡವಳಿಕೆ ಆಸ್ಟ್ರೇಲಿಯಾ ತಂಡದಲ್ಲಿ ಕಂಡಿತು. ನಾಯಕ ಪ್ಯಾಟ್ ಕಮಿನ್ಸ್ ಅವರು ಈ ಟೆಸ್ಟ್ನಲ್ಲಿ ತಮ್ಮ ಅನುಭವಿ ಆಟಗಾರ ಮಿಚೆಲ್ ಮಾರ್ಷ್ ಅವರ ಬದಲಿಗೆ ಬಿಯೂ ವೆಬ್ಸ್ಟರ್ ಅವರನ್ನು ಕಣಕ್ಕಿಳಿಸುವುದಾಗಿ ಪಂದ್ಯದ ಮುನ್ನಾದಿನ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದರು. ಇದರಿಂದಾಗಿ ಮಾರ್ಷ್ ಅಲಭ್ಯತೆ ಸ್ಪಷ್ಟವಾಗಿತ್ತು.

ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸುವಂತೆ ಯಾರೂ ಕೇಳಿರಲಿಲ್ಲ. ಆದರೆ ಹಾಲಿ ನಾಯಕನನ್ನು ಈ ರೀತಿ ಕೈಬಿಟ್ಟಿರುವುದು ಭಾರತ ಕ್ರಿಕೆಟ್ನಲ್ಲಿ ಮೊದಲನೇಯ ಬಾರಿ. ಆದ್ದರಿಂದ ಇಂತಹ ನಿರ್ಣಯದ ಬಗ್ಗೆ ಅತಿಯಾದ ಗೋಪ್ಯತೆ ಕಾಪಾಡಿದ್ದು ಗೊಂದಲಗಳಿಗೂ ಕಾರಣವಾಯಿತು. ಇದನ್ನು ತಪ್ಪಿಸಬಹುದಿತ್ತು.

ರೋಹಿತ್ ಅವರು ಕಳೆದ ಐದು ಇನಿಂಗ್ಸ್ಗಳಲ್ಲಿ ಕೇವಲ 31 ರನ್ಗಳನ್ನು ಗಳಿಸಿದ್ದಾರೆ. 37 ವರ್ಷದ ರೋಹಿತ್ ಅವರು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಉತ್ತಮವಾಗಿ ಆರಂಭಿಕ ಇನಿಂಗ್ಸ್ ಆಡುತ್ತಿದ್ದ ಕೆ.ಎಲ್. ರಾಹುಲ್ ಅವರ ಕ್ರಮಾಂಕವನ್ನು ಕಳೆದ ಪಂದ್ಯದಲ್ಲಿ ಬದಲಾಯಿಸಿ ರೋಹಿತ್ ಆರಂಭಿಕರಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ರೋಹಿತ್ ಅವರನ್ನು ಈ ಪಂದ್ಯದಿಂದ ಹೊರಗಿಟ್ಟ ಗಂಭೀರ್ ನಿರ್ಧಾರ ಸರಿಯೇ ಎಂಬ ಪ್ರಶ್ನೆಗೆ ಹೌದು ಎಂದು ದೃಢವಾಗಿ ಉತ್ತರಿಸಬಹುದು. ಆದರೆ ಕ್ರಿಕೆಟ್ ಮತ್ತು ತಂಡದ ದೃಷ್ಟಿಯಿಂದ ನೋಡಿದಾಗ ಇದು ಸರಿಯೇ ಎಂಬುದಕ್ಕೆ ಇಲ್ಲವೆನ್ನಬಹುದು.

ಆದರೆ ಇದು ರೋಹಿತ್ ಅವರ ಟೆಸ್ಟ್ ಕ್ರಿಕೆಟ್ ಜೀವನದ ಅಂತ್ಯವೂ ಆಗಬಹುದು. ಅವರು ಏಕದಿನ ಕ್ರಿಕೆಟ್ನಲ್ಲಿ ಆಟ ಮುಂದುವರಿಸಬಹುದು. ಕನಿಷ್ಠ ಒಂದೂವರೆ ತಿಂಗಳು ನಂತರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯವರೆಗೂ ಅವರು ಮುಂದುವರಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.