ಅಡಿಲೇಡ್: ಪ್ರವಾಸಿ ಭಾರತ ವಿರುದ್ಧ ಅಡಿಲೇಡ್ನಲ್ಲಿ ನಡೆಯಲಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಆಸ್ಟ್ರೇಲಿಯಾ ತಂಡವು ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ.

ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಈ ಕುರಿತು ಮಾಹಿತಿ ನೀಡಿದ್ದಾರೆ.

ತಂಡದಲ್ಲಿ ಏಕಮಾತ್ರ ಬದಲಾವಣೆ ಮಾಡಲಾಗಿದೆ. ಗಾಯಾಳು ಜೋಶ್ ಹ್ಯಾಜಲ್ವುಡ್ ಬದಲು ಸ್ಕಾಟ್ ಬೋಲ್ಯಾಂಡ್ ಅವರನ್ನು ಸೇರ್ಪಡೆಗೊಳಿಸಲಾಗಿದೆ.

ಇದರೊಂದಿಗೆ 18 ತಿಂಗಳ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಬೋಲ್ಯಾಂಡ್ ಪುನರಾಗಮನ ಮಾಡಿದ್ದಾರೆ.

ಗಾಯದ ಆತಂಕದಲ್ಲಿದ್ದ ಮಿಷೆಲ್ ಮಾರ್ಷ್ ತಂಡದಲ್ಲಿ ಉಳಿದುಕೊಂಡಿದ್ದಾರೆ.

ಭಾರತದ ಆಡುವ ಹನ್ನೊಂದರ ಬಳಗವನ್ನು ಇನ್ನಷ್ಟೇ ಘೋಷಣೆ ಮಾಡಬೇಕಿದೆ. ಮತ್ತೊಂದೆಡೆ ಆಸೀಸ್, ಪಂದ್ಯದ ಹಿಂದಿನ ದಿನವೇ ಪ್ಲೇಯಿಂಗ್ ಇಲೆವೆನ್ ಅನ್ನು ಪ್ರಕಟಿಸಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ನಾಳೆ (ಡಿ.6) ಆರಂಭವಾಗಲಿದೆ. ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 295 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ಆಸ್ಟ್ರೇಲಿಯಾದ ಆಡುವ ಹನ್ನೊಂದರ ಬಳಗ ಇಂತಿದೆ:

1. ಉಸ್ಮಾನ್ ಖ್ವಾಜಾ,

2. ನೇಥನ್ ಮೆಕ್ಸ್ವೀನಿ,

3. ಮಾರ್ನಲ್ ಲಾಬುಷೇನ್,

4. ಸ್ಟೀವ್ ಸ್ಮಿತ್,

5. ಟ್ರಾವಿಸ್ ಹೆಡ್,

6. ಮಿಚೆಲ್ ಮಾರ್ಷ್,

7. ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್),

8. ಪ್ಯಾಟ್ ಕಮಿನ್ಸ್ (ನಾಯಕ),

9. ಮಿಚೆಲ್ ಸ್ಟಾರ್ಕ್,

10. ನೇಥನ್ ಲಯನ್,

11. ಸ್ಕಾಟ್ ಬೋಲ್ಯಾಂಡ್.
.ಪಿಂಕ್ ಬಾಲ್ ಟೆಸ್ಟ್ಗೂ ಮುನ್ನ ಆಸೀಸ್ಗೆ ಹಿನ್ನಡೆ;ಗಾಯಾಳು ಹ್ಯಾಜಲ್ವುಡ್ ಅಲಭ್ಯ.IND vs AUS Test | ಎರಡನೇ ಪಂದ್ಯದಲ್ಲಿ ರೋಹಿತ್ ಕಣಕ್ಕೆ; ಪಿಂಕ್ ಬಾಲ್ ಅಭ್ಯಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.