ಒಂದೇ ಓವರ್ನಲ್ಲಿ ಸಿರಾಜ್ಗೆ ಎರಡು ವಿಕೆಟ್; ಭೋಜನ ವಿರಾಮಕ್ಕೆ ಆಸೀಸ್ 149/4

ಬ್ರಿಸ್ಬೇನ್: ಮೊದಲ ಇನ್ನಿಂಗ್ಸ್ನಲ್ಲಿ 33 ರನ್ಗಳ ಮಹತ್ವದ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ, ಪ್ರವಾಸಿ ಭಾರತ ವಿರುದ್ಧ ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಭೋಜನ ವಿರಾಮದ ಹೊತ್ತಿಗೆ 41 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ.
ಇದರೊಂದಿಗೆ ಒಟ್ಟು ಮುನ್ನಡೆಯನ್ನು 182 ರನ್ಗಳಿಗೆ ಏರಿಸಿದೆ.
ವಿಕೆಟ್ ನಷ್ಟವಿಲ್ಲದೆ 21 ರನ್ ಎಂಬ ಮೊತ್ತದಿಂದ ಬ್ಯಾಟಿಂಗ್ ಮುಂದುವರಿಸಿದ ಆಸೀಸ್ಗೆ ಮಾರ್ನಸ್ ಹ್ಯಾರಿಸ್ ಹಾಗೂ ಡೇವಿಡ್ ವಾರ್ನರ್ ಆಕ್ರಮಣಕಾರಿ ಆರಂಭವೊದಗಿಸಿದರು. ಬೃಹತ್ ಮೊತ್ತ ಕಲೆ ಹಾಕಿ ಆದಷ್ಟು ಬೇಗ ಡಿಕ್ಲೇರ್ ಮಾಡುವುದು ಆಸೀಸ್ ಇರಾದೆಯಾಗಿತ್ತು.
ಇದನ್ನೂ ಓದಿ: ಜೊಚ್ಚಲ ಅರ್ಧಶತಕ ಬಾರಿಸಿದ ಸುಂದರ್-ಶಾರ್ದೂಲ್ ಸ್ಮರಣೀಯ ದಾಖಲೆ
ಇವರಿಬ್ಬರು ಮೊದಲ ವಿಕೆಟ್ಗೆ 89 ರನ್ಗಳ ಜೊತೆಯಾಟ ನೀಡಿದರು. ಇದರೊಂದಿಗೆ ಸರಣಿಯಲ್ಲಿ ಮೊದಲ ಬಾರಿಗೆ ಆಸೀಸ್ ಆರಂಭಿಕರು ಉತ್ತಮ ಜೊತೆಯಾಟದಲ್ಲಿ ಭಾಗಿಯಾದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮಾರ್ನಸ್ ಹ್ಯಾರಿಸ್ (38) ಹೊರದಬ್ಬಿದ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲೂ ಮಿಂಚಿದರು.
LBW! Warner falls two runs shy of his half-century.
Live #AUSvIND: https://t.co/IzttOVL3j4 pic.twitter.com/ox5z84JJRr
— cricket.com.au (@cricketcomau) January 18, 2021
ಇದಾದ ಬೆನ್ನಲ್ಲೇ ಅಪಾಯಕಾರಿ ಡೇವಿಡ್ ವಾರ್ನರ್ (48) ಎಲ್ಬಿಡಬ್ಲ್ಯು ಬಲೆಗೆ ಸಿಲುಕಿಸಿದ ವಾಷಿಂಗ್ಟನ್ ಸುಂದರ್ ಮಗದೊಂದು ಆಘಾತ ನೀಡಿದರು.
ಬಳಿಕ ಒಂದೇ ಓವರ್ನಲ್ಲಿ ಮೊದಲ ಇನ್ನಿಂಗ್ಸ್ನ ಶತಕವೀರ ಮಾರ್ನಸ್ ಲಾಬುಷೇನ್ (25) ಹಾಗೂ ಮ್ಯಾಥ್ಯೂ ವೇಡ್ (0) ಹೊರದಬ್ಬಿದ ಮೊಹಮ್ಮದ್ ಸಿರಾಜ್ ಡಬಲ್ ಆಘಾತ ನೀಡಿದರು. ಇದರಿಂದ 123 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್ ರನ್ ರೇಟ್ ಕುಂಠಿತವಾಯಿತು.
ಇದನ್ನೂ ಓದಿ: IND vs AUS: ಸುಂದರ್-ಶಾರ್ದೂಲ್ ಚೊಚ್ಚಲ ಫಿಫ್ಟಿ; ಭಾರತ 336ಕ್ಕೆ ಆಲೌಟ್
ಈಗ ಕ್ರೀಸಿನಲ್ಲಿರುವ ಸ್ಟೀವನ್ ಸ್ಮಿತ್ (28*) ಉತ್ತಮವಾಗಿ ಆಡುತ್ತಿದ್ದು, ಇವರಿಗೆ ಕ್ಯಾಮರಾನ್ ಗ್ರೀನ್ (4*) ಸಾಥ್ ನೀಡುತ್ತಿದ್ದಾರೆ.
This game is alive - Labuschagne caught at second slip off Siraj #AUSvIND pic.twitter.com/ummF93llEA
— cricket.com.au (@cricketcomau) January 18, 2021
ಈ ಮೊದಲು ಆಸೀಸ್ನ 369 ರನ್ಗಳಿಗೆ ಉತ್ತರವಾಗಿ ದಿಟ್ಟ ಹೋರಾಟ ತೋರಿದ ವಾಷಿಂಗ್ಟನ್ ಸುಂದರ್ (62) ಹಾಗೂ ಶಾರ್ದೂಲ್ ಠಾಕೂರ್ (67) ಚೊಚ್ಚಲ ಅರ್ಧಶತಕದ ನೆರವಿನಿಂದ ಭಾರತ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 336 ರನ್ ಪೇರಿಸಿತ್ತು. ಆಸೀಸ್ ಪರ ಜೋಶ್ ಹ್ಯಾಜಲ್ವುಡ್ ಐದು ವಿಕೆಟ್ ಕಬಳಿಸಿದ್ದರು.
ಮಾರ್ನಸ್ ಲಾಬುಷೇನ್ ಶತಕ(108) ಹಾಗೂ ನಾಯಕ ಟಿಮ್ ಪೇನ್ ಅರ್ಧಶತಕದ (50) ಬೆಂಬಲದೊಂದಿಗೆ ಆಸೀಸ್ ಮೊದಲ ಇನ್ನಿಂಗ್ಸ್ನಲ್ಲಿ 369 ರನ್ಗಳ ಸ್ಫರ್ಧಾತ್ಮಕ ಮೊತ್ತ ಪೇರಿಸಿತ್ತು. ಪದಾರ್ಪಣಾ ಆಟಗಾರ ವಾಷಿಂಗ್ಟನ್ ಸುಂದರ್, ತಂಗರಸು ನಟರಾಜನ್ ಮತ್ತು ಶಾರ್ದೂಲ್ ಠಾಕೂರ್ ತಲಾ ಮೂರು ವಿಕೆಟ್ಗಳನ್ನು ಕಬಳಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.