ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ಕಾವೇರಿದ ಕದನ; ರಿಷಬ್ ಪಂತ್-ಮ್ಯಾಥ್ಯೂ ವೇಡ್ ಜಟಾಪಟಿ

Last Updated 28 ಡಿಸೆಂಬರ್ 2020, 6:17 IST
ಅಕ್ಷರ ಗಾತ್ರ

ಮೆಲ್ಬೋರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯದಲ್ಲಿ ಮಗದೊಮ್ಮೆ ಆಟಗಾರರ ನಡುವೆ ಜಟಾಪಟಿ ಭುಗಿಲೆದ್ದಿದೆ. ಭಾರತೀಯ ವಿಕೆಟ್ ಕೀಪರ್ ರಿಷಬ್ ಪಂತ್ ಹಾಗೂ ಆಸ್ಟ್ರೇಲಿಯಾ ಆರಂಭಿಕ ಮ್ಯಾಥ್ಯೂ ವೇಡ್ ಪರಸ್ಪರ ಮಾತಿನ ಚಕಮಕಿಯಲ್ಲಿ ಭಾಗಿಯಾಗಿರುವುದು ಕಾವೇರಿದ ವಾತಾವರಣಕ್ಕೆ ಸಾಕ್ಷಿಯಾಯಿತು.

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ ವೇಳೆ ಘಟನೆ ನಡೆದಿತ್ತು.

ಜಸ್‌ಪ್ರೀಮ್ ಬೂಮ್ರಾ ದಾಳಿಯ ವೇಳೆಯಲ್ಲಿ ವಿಕೆಟ್ ಹಿಂದುಗಡೆ ನಿಂತಿದ್ದ ಪಂತ್, 'ಹೇ ಹೇ ಹೇ...' ಅಂಥ ಹೀಯಾಳಿಸುವ ರೀತಿಯಲ್ಲಿ ಜೋರಾಗಿ ನಗುತ್ತಾರೆ. ಇದರಿಂದ ಅಸಮಾಧಾನಗೊಂಡ ವೇಡ್, 'ನಿಮ್ಮನ್ನು ನೀವೇ ಬಿಗ್ ಸ್ಕ್ರೀನ್‌ನಲ್ಲಿ ನೋಡಿ ನಗುತ್ತಿದ್ದೀರಾ' ಎಂದು ಪ್ರತಿಕ್ರಿಯಿಸುತ್ತಾರೆ. ಹೀಗೆ ಮಾತಿನ ಚಕಮಕಿ ಮುಂದುವರಿಯುತ್ತದೆ.

ಪ್ರಸ್ತುತ ಘಟನೆಯು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯ ಮತ್ತಷ್ಟು ಕಾವೇರುವಂತೆ ಮಾಡಿದೆ.

ಈ ಮೊದಲು ಐಪಿಎಲ್‌ನಲ್ಲಿ ಪರಸ್ಪರ ಡ್ರೆಸ್ಸಿಂಗ್ ಕೊಠಡಿ ಹಂಚಿಕೊಂಡ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗರು ಪರಸ್ಪರ ಗೌರವದೊಂದಿಗೆ ಕ್ರಿಕೆಟ್ ಆಡುತ್ತಾರೆ. ಅನಗತ್ಯ ವಾಗ್ವಾದಗಳ ಅಗತ್ಯವಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು.

ಈಗ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ಹಾಗೂ ಆಸೀಸ್ ಆಟಗಾರರು ಪರಸ್ಪರ ಮಾತಿನ ಸಮರಕ್ಕಿಳಿಯುವ ಮೂಲಕ ಒತ್ತಡ ಹೇರುವ ತಂತ್ರವನ್ನು ಅನುಸರಿಸುತ್ತಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಕೂಡಾ ಪಂತ್-ವೇಡ್ ಜಟಾಪಟಿಗೆ ಮತ್ತಷ್ಟು ಮಸಾಲಾ ಬೆರೆಸುವ ಪ್ರಯತ್ನ ಮಾಡಿದೆ. ಅಲ್ಲದೆ ಈ ಬಗ್ಗೆ ಟ್ವೀಟ್ ಮಾಡಿದ್ದು, ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ ಎಂದಿದೆ.

2018-19ರ ಪ್ರವಾಸದಲ್ಲಿ ಪಂತ್ ಅವರನ್ನು ಆಸೀಸ್ ನಾಯಕ ಟಿಮ್ ಪೇನ್ 'ಬೇಬಿ ಸಿಟ್ಟರ್' ಎಂದು ಕರೆದಿದ್ದರು. ಪಂದ್ಯದ ಬಳಿಕ ಪಂತ್ ಅವರು ಪೇನ್ ಮಕ್ಕಳನ್ನು ಎತ್ತಿಕೊಂಡು ಆಟವಾಡುವ ಮೂಲಕ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT