ರಾಜ್ಕೋಟ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆ.ಎಲ್.ರಾಹುಲ್ ಈ ಮಾದರಿಯಲ್ಲಿ ವೇಗವಾಗಿ ಸಾವಿರ ರನ್ ಪೂರೈಸಿದ ಭಾರತದ ನಾಲ್ಕನೇ ಬ್ಯಾಟ್ಸ್ಮನ್ ಎನಿಸಿದರು.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ಆರಂಭಿಕ ಶಿಖರ್ ಧವನ್, ನಾಯಕ ವಿರಾಟ್ ಕೊಹ್ಲಿ ಹಾಗೂ ರಾಹುಲ್ ಸಿಡಿಸಿದ ಅರ್ಧಶತಕಗಳ ಬಲದಿಂದ ನಿಗದಿತ 50 ಓವರ್ಗಳಲ್ಲಿ 340 ರನ್ ಕಲೆಹಾಕಿದೆ.

ಕಳೆದ ಪಂದ್ಯದಲ್ಲಿ ಕೊಹ್ಲಿ ಬದಲು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ರಾಹುಲ್, ಇಲ್ಲಿ ಕೆಳ ಕ್ರಮಾಂಕದಲ್ಲಿ ಆಡಿದರು. ಒಟ್ಟು 52 ಎಸೆತಗಳನ್ನು ಎದುರಿಸಿದ ಅವರು ಮೂರು ಸಿಕ್ಸರ್, ಆರು ಬೌಂಡರಿ ಸಹಿತ 80 ರನ್ ಗಳಿಸಿದರು.

ಈ ಪಂದ್ಯಕ್ಕೂ ಮುನ್ನ 27 ಪಂದ್ಯಗಳ 26 ಇನಿಂಗ್ಸ್ಗಳಿಂದ ಒಟ್ಟು 936 ರನ್ ಗಳಿಸಿದ್ದ ರಾಹುಲ್, ಇಲ್ಲಿ 64 ರನ್ ಗಳಿಸಿದಾಗ ವೇಗವಾಗಿ ಸಾವಿರ ರನ್ ಪೂರೈಸಿದರು.

ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 1000 ರನ್ ಪೂರೈಸಿದ ದಾಖಲೆ ಇರುವುದು ಪಾಕಿಸ್ತಾನದ ಫಖರ್ ಜಮಾನ್ ಹೆಸರಲ್ಲಿ. ಅವರು ಕೇವಲ 18 ಇನಿಂಗ್ಸ್ಗಳಲ್ಲಿ ಸಹಸ್ರ ರನ್ ಗಳಿಸಿದ್ದಾರೆ. ಜಮಾನ್ ಜೊತೆಗಾರ ಇಮಾಮ್ ಉಲ್ ಹಕ್ 19 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಭಾರತ ಪರ 24ನೇ ಇನಿಂಗ್ಸ್ ವೇಳೆ 1000 ರನ್ ಪೂರೈಸಿರುವ ಕೊಹ್ಲಿ ಹಾಗೂ ಧವನ್ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಬಳಿಕ ನವಜೋತ್ ಸಿಂಗ್ (25) ಇದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (29) ಇದುವರೆಗೆ ನಾಲ್ಕನೇ ಸ್ಥಾನದಲ್ಲಿದ್ದರು.

ಸದ್ಯ 341ರನ್ಗಳ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ನಾಲ್ಕುಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು23 ರನ್ ಗಳಿಸಿದೆ.15 ರನ್ ಗಳಿಸಿ ಆಡುತ್ತಿದ್ದಡೇವಿಡ್ ವಾರ್ನರ್ ಅವರಿಗೆ ಮೊಹಮದ್ ಶಮಿ ಪೆವಿಲಿಯನ್ ಹಾದಿ ತೋರಿದ್ದಾರೆ.ನಾಯಕಆ್ಯರನ್ ಫಿಂಚ್ (1) ಹಾಗೂ ಅನುಭವಿ ಸ್ಟೀವ್ ಸ್ಮಿತ್ (1) ಕ್ರೀಸ್ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.